ಜಾಗತಿಕ ಲಿಂಗಾಯತ ಮಹಾಸಭಾ ಮಹಾರಾಷ್ಟ್ರ ರಾಜ್ಯ ಘಟಕದ ಪುನರ್ಘಟನ
Reorganization of the Maharashtra State Unit of the Global Lingayat Mahasabha
ಬೆಳಗಾವಿ 15 : ಜಾಗತಿಕ ಲಿಂಗಾಯತ ಮಹಾಸಭಾ ಮಹಾರಾಷ್ಟ್ರ ರಾಜ್ಯ ಘಟಕದ ಪುನರ್ಘಟನ ಮಹಾಸಭೆಯು ಬೆಳಗಾವಿಯಲ್ಲಿ ಇಂದು ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಕೊಲ್ಹಾಪುರದ ಶ್ರೀಮತಿ.ಸರಳಾತಾಯಿ ಪಾಟೀಲ ವಹಿಸಿದ್ದರು. ಮಹಾರಾಷ್ಟ್ರ ರಾಜ್ಯದ 22 ಜಿಲ್ಲೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ. ಜಾಮದಾರ್ ಅವರು ಮಹಾಸಭೆಯ ಚಟುವಟಿಕೆಗಳನ್ನು ವಿವರಿಸಿ ಮಹಾರಾಷ್ಟ್ರದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬಹುದೆಂಬ ಕುರಿತು ಸೂಚನೆಗಳನ್ನು ನೀಡಿದರು. ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಕೊಲ್ಹಾಪುರದ ರಾಜಶೇಖರ ತಂಬಾಕೆ, ಪ್ರಧಾನ ಕಾರ್ಯದರ್ಶಿಯಾಗಿ ಪುಣೆಯ ಬಸವರಾಜ್ ಕಣಜೆ.
ಮಹಿಳಾ ರಾಜ್ಯ ಘಟಕದ ಅಧ್ಯಕ್ಷರಾಗಿ ಶ್ರೀಮತಿ. ಸರಳಾ ತಾಯಿ ಪಾಟೀಲ ಅವರುಗಳನ್ನು ಮತ್ತು ಪುಣೆ ಯ ಕಲ್ಯಾಣಕರ ಸಂದೀಪ್, ಸಾಂಗ್ಲಿಯ ನಾಮದೇವ್ ಕೋರೆ, ಕೊಲ್ಲಾಪುರದ ಮನೋಜ್ ರಣದಿವೆ, ಸೊಲ್ಲಾಪುರದ ಶಿವಾನಂದ ಗೋಗಾವ, ಲಾತೂರದ ಲಕ್ಷ್ಮಣ ಮುಕುಡೆ, ನಾಂದೇಡದ ದಿಗಂಬರ್ ಭಾಲಕೆ, ಸಾತಾರಾದ ರಾಹುಲ ಶೇಟೆ, ಧಾರಾಶಿವದ ಹನುಮಂತ ಶಂಕೆ, ಪರಭಣಿಯ ಶ್ರೀಸೇಠೆ, ಮುಂತಾದವರು ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಗೆ ಸಂಚಾಲಕರನ್ನು ಮತ್ತು ಸಹ ಸಂಚಾಲಕರನ್ನು ಆಯ್ಕೆ ಮಾಡಿ ಸಭೆಯು ನಿರ್ಣಯವನ್ನು ಕೈಗೊಂಡಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಉಪಾಧ್ಯಕ್ಷರಾದ ಮುರುಗೇಶ ಶಿವಪೂಜಿ, ಪ್ರವೀಣ್ ಚಿಕಲಿ, ಖಜಾಂಚಿ ಮುರಗೆಪ್ಪ ಬಾಳಿ,ಸಿ.ಎಂ.ಬೂದಿಹಾಳ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 