ಸಾರ್ವಜನಿಕ ಮಹಿಳೆಯರ ಶೌಚಗೃಹಗಳ ನವೀಕರಣ
ಲೋಕದರ್ಶನ ವರದಿ
ಬೆಟಗೇರಿ 14: ಗ್ರಾಮದ ವಿವಿಧಡೆವಿರುವ ಸಾರ್ವಜನಿಕ ಮಹಿಳಾ ಶೌಚಗೃಹಗಳನ್ನು ನವೀಕರಣಗೊಳಿಸಿ ಸ್ಥಳೀಯ ಮಹಿಳೆಯರ ಬಹಿರ್ದಸೆ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದರು.
ಗ್ರಾಮದ ಗ್ರಾಪಂ ಕಾಯರ್ಾಲಯ, ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಹತ್ತಿರವಿರುವ ಸಾರ್ವಜನಿಕ ಮಹಿಳೆಯರ ಶೌಚಗೃಹಗಳ ನವೀಕರಣ ಕಾರ್ಯ ಪೂರ್ಣಗೊಳಿಸಿ ಸ್ಥಳೀಯ ಮಹಿಳೆಯರು ಶೌಚಾಲಯ ಬಳಕೆಗೆ ಸೂಚನೆ ನೀಡಿ ಮಾತನಾಡಿದರು.
ಸ್ಥಳೀಯ ಕೆಲವಡೆ ಸಾರ್ವಜನಿಕ ಶೌಚಗೃಹಗಳು ಸರಿಯಾದ ನಿರ್ವಹಣೆ ಸೌಲಭ್ಯಗಳ ಕೊರತೆಯಿಂದ ಕೆಲವು ವರ್ಷಗಳಿಂದ ನಿರುಪಯೋಕ್ತವಾಗಿ ನಿಂತಿರುವದನ್ನು ಪರಿಗಣಿಸಿ, ಗ್ರಾಪಂ ಮೇಲಾಧಿಕಾರಿಗಳ ಮತ್ತು ಇಲ್ಲಿಯ ಗ್ರಾಪಂ ಸದಸ್ಯರ ಹಾಗೂ ಹಿರಿಯ ನಾಗರಿಕರ ಸಹಕಾರದಿಂದ ಗ್ರಾಪಂ ಅನುದಾನದಡಿಯಲ್ಲಿ ಈಗ ಕೆಲವಡೆ ಶೌಚಗೃಹಗಳಿಗೆ ವಿದ್ಯುತ್ ದೀಪ, ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸ್ಥಳೀಯ ಮಹಿಳೆಯರು, ಮಕ್ಕಳು, ಗ್ರಾಮದ ಪ್ರಮುಖ ರಸ್ತೆ ಬದಿಯಲ್ಲಿ ಬಯಲು ಬಹಿದರ್ೆಸೆ ಮಾಡದೇ, ಶೌಚಾಲಯಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದರು.
ಸ್ಥಳೀಯರ ಶ್ಲಾಘನೆ: ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಿಕ, ಗ್ರಾಮದ ಹಿರಿಯ ನಾಗರಿಕರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಪಿಡಿಒ ಎಚ್.ಎನ್.ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಹಾಗೂ ಗ್ರಾಪಂ ಸದಸ್ಯರ, ಸಿಬ್ಬಂದಿಯವರ ಕ್ರೀಯಾಶೀಲ ಪಾರದರ್ಶಕ ಆಡಳಿತದಲ್ಲ್ಲಿ ಗ್ರಾಮದ ನಾಗರಿಕರ ಹಲವಾರು ಮೂಲಭೂತ ಸೌಲಭ್ಯಗಳನ್ನು ತಕ್ಷಣವೇ ಕಲ್ಪಿಸುತ್ತಿರುವ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿ, ಮಾದರಿ ಗ್ರಾಮವನ್ನಾಗಿಸುವಲ್ಲಿ ಪ್ರಯತ್ನಿಸುತ್ತಿರುವ ಗ್ರಾಪಂದವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಇಲ್ಲಿಯ ಸಾರ್ವಜನಿಕ ಮಹಿಳಾ ಶೌಚಾಲಯಗಳಲ್ಲಿ ಮಹಿಳೆಯರು ಸ್ವಚ್ಛತೆ ನೋಡಿಕೊಳ್ಳಬೇಕು, ಶೌಚಗೃಹಗಳಲ್ಲಿ ಅವಶ್ಯಕ ನೀರಿನ ಸೌಲಭ್ಯ ಒದಗಿಸಲಾಗಿದೆ. ಬಯಲು ಬಹಿದರ್ೆಸೆ ಮುಕ್ತ ಗ್ರಾಮವನ್ನಾಗಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದು ಗ್ರಾಪಂ ಕಾರ್ಯದಶರ್ಿ ಗೌಡಪ್ಪ ಮಾಳೇದ ಮನವಿ ಮಾಡಿಕೊಂಡಿದ್ದಾರೆ. ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ, ಕಾರ್ಯದಶರ್ಿ ಪರಶುರಾಮ ಇಟಗೌಡ್ರ, ಕರವಸೂಲಿಗಾರ ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಾನಂದ ಐದುಡ್ಡಿ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಸ್ಥಳೀಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 