ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಸಜ್ಜನ

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಸಜ್ಜನ Remembering freedom fighters is our duty: Sajjan

ತಾಳಿಕೋಟಿ 15: ಲಕ್ಷಾಂತರ ಜನರ ತ್ಯಾಗ ಬಲಿದಾನದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ನಮಗೆ ದಕ್ಕಿರುವ ಸ್ವಾತಂತ್ರವನ್ನು ಸದುಪಯೋಗ ಮಾಡಿಕೊಳ್ಳುತ್ತಾ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಕೌಟಿಲ್ಯ ಅಕಾಡೆಮಿ ಅಧ್ಯಕ್ಷ ರಾಜಶೇಖರ ಸಜ್ಜನ ಹೇಳಿದರು.  

ಶುಕ್ರವಾರ ಪಟ್ಟಣದ ಕೌಟಿಲ್ಯ ಅಕಾಡೆಮಿ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ 79 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ದೇಶವನ್ನು ಇನ್ನಷ್ಟು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಲು ಯುವಕರು ಮುಂದೆ ಬರಬೇಕಾಗಿದೆ ಏಕೆಂದರೆ ದೇಶದ ಭವಿಷ್ಯ ಅವರ ಕೈಯಲ್ಲಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ನಮ್ಮ ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವ ಅಗತ್ಯವಿದೆ ಅವರು ನಮ್ಮ ಹಿರಿಯರ ತ್ಯಾಗ ಬಲಿದಾನದ ಇತಿಹಾಸವನ್ನು ತಿಳಿಯುವಂತಾಗಬೇಕು ಇದಕ್ಕಾಗಿ ನಮ್ಮ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಸ್ಲಿಂ ಬ್ಯಾಂಕ್ ನಿರ್ದೇಶಕ ಇಬ್ರಾಹಿಂ ಮನ್ಸೂರ್ ಮಾತನಾಡಿ ಸ್ವಾತಂತ್ರ ಸ್ವೇಚ್ಛಾಚಾರವಲ್ಲ ಜವಾಬ್ದಾರಿ ತೋರಿಸುತ್ತದೆ ಹಕ್ಕು ಮತ್ತು ಜವಾಬ್ದಾರಿ ಎರಡನ್ನೂ ನಾವು ನಿಭಾಯಿಸಬೇಕು ನಾವೆಲ್ಲರೂ ಒಂದಾಗಿ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ 79 ವರ್ಷ ಹಿರಿಯರು ದೇಶ ಕಟ್ಟಿದ್ದಾರೆ ಮುಂದಿನ 25 ವರ್ಷ ಯುವ ಜನಾಂಗದ ಮೇಲೆ ದೇಶ ಕಟ್ಟುವ ಜವಾಬ್ದಾರಿ ಇದೆ, ವಿವಿಧತೆಯಲ್ಲಿ ಏಕತೆ, ದೇಶದ ಬಹುದೊಡ್ಡ ಶಕ್ತಿ ಅದನ್ನು ಉಳಿಸಬೇಕು ದೇಶ ವಿಶ್ವದ ಬಲಿಷ್ಠ ರಾಷ್ಟ್ರವಾಗಬೇಕು ಎಂದರು. ಕೌಟಿಲ್ಯ ಅಕಾಡೆಮಿಯ ಉಪಾಧ್ಯಕ್ಷೆ ಶರಣಮ್ಮ ಸಜ್ಜನ, ಗಣ್ಯರಾದ ಮಾನಸಿಂಗ್ ಕೊಕಟನೂರ, ಪ್ರಕಾಶ ಹಜೇರಿ, ಶಂಕರಗೌಡ ಕಂತಲಗಾಂವಿ, ಜಗದೀಶ ಬಿಳೆಭಾವಿ, ಅಶೋಕ ಚಿನಗುಡಿ, ದತ್ತು ಉಭಾಳೆ, ವಿವೇಕ್ ಪತ್ತಾರ, ಮಲ್ಲಿಕಾರ್ಜುನ ಪಾಲ್ಕಿ, ಅಕಾಡೆಮಿಯ ಆಡಳಿತ ಮಂಡಳಿ ಸದಸ್ಯರು ಪ್ರಾಚಾರ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.