ಗುರುಗಳನ್ನು ನೆನಪಿಸಿ, ಗೌರವಿಸಿದ್ದು ನಮ್ಮ ಸಂಸ್ಕಾರದ ಪ್ರತೀಕ: ಶ್ರೀಗಳು
Remembering and honoring our gurus is a symbol of our culture: Sri
ಬೆಳಗಾವಿ : ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ ಎಂದು ದಾಸರು ಹೇಳುವ ಮೂಲಕ ಗುರುವಿನ ಋಣ ತೀರಿಸಲಾಗದು ಎಂದು ಹೇಳಿದ್ದಾರೆ. ಗುರುಗಳ ಋಣ ತೀರಿಸುವದು ಸುಲಭ ಸಾಧ್ಯವಲ್ಲ. ಆದರೆ ಈ ವಿದ್ಯಾರ್ಥಿಗಳು ಬಾಲವಾಡಿಯಿಂದ ಹೈಸ್ಕೂಲ್‌ವರೆಗೂ ತಮಗೆ ಕಲಿಸಿದ ಗುರುಗಳನ್ನು ಮತ್ತೆ ನೆನಪಿಸಿ, ಅವರನ್ನು ಸತ್ಕರಿಸಿ ಗೌರವಿಸಿದ್ದು ನಮ್ಮ ಸಂಸ್ಕಾರದ ಪ್ರತೀಕ. ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಸಾವಳಗಿ ಸಿದ್ಧ ಸಂಸ್ಥಾನ ಪೀಠದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ನಂದಗಾಂವ್ ಗ್ರಾಮದ ಜೆಎಸ್‌ಎಸ್ ಶಾಲೆಯ 2007-08, 2009-2010 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಅಕ್ಷರ ನೀಡಿದ ಗುರುಗಳ ಅಲ್ಪ ಋಣವನ್ನು ತೀರಿಸಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.
ಜೆಎಸ್‌ಎಸ್ ಹೈ ಸ್ಕೂಲ್ ನಂದಗಾವ್, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ, ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ, ಆದರ್ಶ ಕಾನ್ವೆಂಟ್ ಶಾಲೆ, ನಾಯಕ್ ಸ್ಟೂಡೆಂಟ್ ಫೆಡರೇಶನ್ ಸ್ಕೂಲನ ಗುರುಗಳನ್ನು ಸತ್ಕರಿಸಿ ಗುರುವಂದನೆ ಸಮರ್ಿಸಲಾಯಿತು. ಮತ್ತು ಶಾಲೆಯ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗಲು ಟಿವಿಯನ್ನು ಉಡುಗೊರೆಯಾಗಿ ನೀಡಲಾಯಿತು. ಸನ್ಮಾನ ಸ್ವೀಕರಿಸಿದ ಗುರುಗಳು ಈ ಬ್ಯಾಚ್ನ ವಿದ್ಯಾರ್ಥಿಗಳೆಲ್ಲರೂ ಕೂಡ ಸರ್ಕಾರಿ ಅರೆ ಸರ್ಕಾರಿ ಪೊಲೀಸ್ ಇಲಾಖೆ, ಕೃಷಿ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಂದಗಾವ್ ಜೆಎಸ್‌ಎಸ್ ಶಾಲೆಯ ಮುಖ್ಯೋಪಾಧ್ಯಾಯ ಎಸ್ ಎಸ್ ಮಳವಂಕಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಲ್ ಎಸ್ ನೀರಲಗಿ, ಬಸವೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಬಸವರಾಜ್ ಹುಲ್ಲೋಳಿ, ಹಾಲಪ್ಪ ಚೌದರಿ, ಮಲ್ಲಪ್ಪ ಬಡಿಗೇರ್, ನಿವೃತ್ತ ಮುಖ್ಯೋಪಾಧ್ಯಾಯರು ಎಂ ಬಿ ಹಳ್ಳೂರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸುನಿತಾ ಹಾಗೂ ಸಂಗಡಿಗರ ಪ್ರಾರ್ಥನೆೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು ಯಮುನಪ್ಪ ಹುಲ್ಲೋಳಿ ಬಾಳಗೌಡ ಪಾಟೀಲ್ ಸ್ವಾಗತಿಸಿದರು. ಡಿ ಸಿ ಎಫ್ ಶಿವರುದ್ರ್ಪ ಕಬಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ನಾಯಕ್ ವಂದನಾರೆ್ಣಗೈದರು. ನಂತರ ವಿದ್ಯಾರ್ಥಿಗಳಿಗಾಗಿ ಮನರಂಜನೆ ಕಾರ್ಯಕ್ರಮಗಳು ನೆರವೇರಿದವು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 