ಮೂರ್ನಾಲ್ಕು ದಿನದಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ: ಯಡಿಯೂರಪ್ಪ

ಮೈಸೂರು, ಅ 2 :   ರಾಜ್ಯಕ್ಕೆನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸಕರ್ಾರ ಸ್ಪಂದಿಸಲಿದೆ. ಮೂನರ್ಾಲ್ಕು ದಿನದಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ ಎಂದು ಮುಖ್ಯಮಂತ್ರಿ  ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪ್ರವಾಹ   ಭಾದಿತ ಯಾವ ರಾಜ್ಯಕ್ಕೂ ಹಣ ಬಿಡುಗಡೆಯಾಗಿಲ್ಲ. ವಿರೋಧ ಪಕ್ಷದ ನಾಯಕರು ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುವುದು ಬೇಡ. ದೆಹಲಿಗೆ ಯಾವ ನಿಯೋಗ ಕರೆದೊಯ್ಯುವ ಅಗತ್ಯವಿಲ್ಲ.

    ರಾಜ್ಯ ಸಕರ್ಾರ ಪ್ರವಾಹ ಸಂತ್ರಸ್ತರನ್ನು ಕಡೆಗಣಿಸಿಲ್ಲ. ಈಗಾಗಲೇ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸ ನಡೆದಿದೆ ಎಂದರು.   ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಈಗಾಗಲೇ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತನಿಖೆ ಪೂರ್ಣಗೊಂಡ ಬಳಿಕ ಯಾರೇ ತಪ್ಪು ಮಾಡಿದ್ದರೂ ಬಹಿರಂಗವಾಗಲಿದೆ ಎಂದು ತಿಳಿಸಿದರು.   ಬಂಡೀಪುರ ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸ್ಪಷ್ಟ ಆದೇಶವಿದೆ. ನಾನು ನ್ಯಾಯಾಲಯದ ಆದೇಶದ ವಿರುದ್ಧ ಹೋಗಲು ಸಾಧ್ಯ ವಿಲ್ಲ. ರಾಹುಲ್ ಗಾಂಧಿ ಅವರಿಗೆ ಕೋಟರ್್ ಆದೇಶದ ಬಗ್ಗೆ ಮಾಹಿತಿ ಇಲ್ಲದಿರಬಹುದು. ಅವರು ಮಾಹಿತಿ ಪಡೆದುಕೊಳ್ಳ ಬೇಕು ಎಂದು ಇದೆ ವೇಳೆ ಸಲಹೆ ಯಡಿಯೂರಪ್ಪ ಸಲಹೆ ನೀಡಿದರು.