ನಬಾರ್ಡನಿಂದ ಸಂಭವನೀಯ ವಾಷರ್ಿಕ ಸಾಲ ಯೋಜನೆ ಬಿಡುಗಡೆ
ಕಾರವಾರ: 2020-21ನೇ ಸಾಲಿನ ಸಂಬವನೀಯ ವಾಷರ್ಿಕ ಸಾಲ ಯೋಜನೆಯ ವಿವಿರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಂ. ರೋಶನ್ ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಡಿಸಿಸಿ ಸಭೆಯಲ್ಲಿ ಬಿಡುಗಡೆಗೊಳಿಸಿದರು.
ಸಂಭವನೀಯ ಸಾಲ ಯೋಜನೆಯ ಬಹುಪಾಲು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಲಾಗಿದೆ. ಈ ಬಾರಿ ಂಟು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಒಟ್ಟಾರೆಯಾಗಿ 5464.01 ಕೋಟಿ ರೂ. ಸಾಲ ಗುರಿ ಅಂದಾಜಿಸಲಾಗಿದೆ. 2019-20ನೇ ವರ್ಷಕಿಂತ ಈ ವರ್ಷ ಶೇ. 8.77% ರಷ್ಟು ಹೆಚ್ಚಳವಾಗಿರುತ್ತದೆ. ಬೆಳೆ ಅಭಿವೃದ್ಧಿ, ನಿರ್ವಹಣೆ ಮತ್ತು ಮಾರುಕಟ್ಟೆ ಹಾಗೂ ಕೃಷಿ ಸಂಬಂಧಿತ ಕಾರ್ಯಗಳಿಗೆ ಒಟ್ಟು 1996.08 ಕೋಟಿ ರೂ ಕೃಷಿ ಕ್ಷೇತ್ರದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ 206.45 ಕೋಟಿ ರೂ ಹಾಗೂಕೃಷಿ ಪೂರಕ ಸಂಬಂಧಿತ ಚಟುವಟಿಕೆಗಳಿಗೆ 446.66 ಕೋಟಿ ರೂ. ಅತಿ ಸಣ್ಣ, ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ 1702.54 ಕೊಟಿ, ರಫ್ತು 25.50 ಕೋಟಿ ರೂ. ಶೈಕ್ಷಣಿಕ ಸಾಲ 210 ಕೋಟಿ ರೂ. ವಸತಿ 724. 71 ನವೀಕರಿಸಬಹುದಾದ ಇಂಧನ 29.6 ಕೋಟಿ ರೂ., ಸಾಮಾಜಿಕ ಮೂಲಸೌಲಭ್ಯ ಬ್ಯಾಂಕ್ ಸಾಲಕ್ಕೆ 123 ಕೋಟಿ ರೂ ನಂತೆ ಒಟ್ಟೂ 5464.01 ಸಾಲ ಅಂದಾಜಿಸಲಾಗಿದೆ ಎಂದು ಅವರು ಈ ಸಂಧರ್ಭದಲ್ಲಿ ವಿವರಿಸಿದರು.
ಕೆಲವು ಬ್ಯಾಂಕುಗಳು ಫಲಾನುಭವಿಗಳಿಗೆ ಸರಕಾರದ ವಿವಿಧ ಯೋಜನೆಯಡಿ ಸಾಲ ನೀಡುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಫಲಾನುಭವಿಗಳಿಂದ ದಾಖಲೆಗಳನ್ನು ಸಂಗ್ರಹಿಸಿ ಸೂಕ್ತ ಸಮಯದಲ್ಲಿ ಸಾಲ ಮಂಜೂರು ಮಾಡಬೇಕೇಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ದೀಘ್ರಕಾಲಿನ, ಭೌತಿಕ ಸಾಮಥ್ರ್ಯ, ಮೂಲ ಸೌಕರ್ಯ, ಬೆಂಬಲದ ಲಭ್ಯತೆ ಮಾರುಕಟ್ಟೆ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್ ಕ್ರೇಡಿಟ್ ಮೂಲಕ ಅಸ್ತಿತ್ವದಲ್ಲಿರುವ ಅಭಿವೃದ್ಧಿಯ ಸಾಮಥ್ರ್ಯವನ್ನು ಉನ್ನತಿಕರಿಸುವ ಮೂಲ ಉದ್ದೇಶದಿಂದ ಸಂಭ್ಯಾವ್ಯ ಲಿಂಕ್ಡ್ ಕ್ರೇಡಿಟ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಉಲ್ಲೇಖಿಸಿರುವದರಿಂದ ನಬಾರ್ಡಇದನ್ನು ತಯಾರಿಸಿರುತ್ತದೆ ಎಂದು ಜಿಲ್ಲಾ ನಬಾರ್ಡ ಅಧಿಕಾರಿ ರೆಜ್ಜಿಸ್ ಇಮ್ಯಾನುಯಲ್ ಕೆ.ಎಸ್. ಅವರು ಸಂಭವನೀಯ ವಾಷರ್ಿಕ ಸಾಲ ಯೋಜನೆಯ ಬಗ್ಗೆ ಮಾಹಿತಿ ಒದಗಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ ಪಿ.ಎಂ. ಪಿಂಜಾರ್, ಬೆಂಗಳೂರು ಆರ್.ಬಿ.ಐ ಬ್ಯಾಂಕ್ನ ಎಜಿಎಮ್ ಪಿ.ಕೆ.ಪಪಟ್ನಾಯಕ್, ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿದರ್ೇಶಕ ಸುಭ್ರಾಯ ಭಟ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಭಾಗವಹಿಸಿದ್ದರು