2006ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕೃತ ಅರ್ಜಿಗಳು

Rejected applications under the Forest Rights Act, 2006

ಮುಂಡಗೋಡ 04: ತಾಲ್ಲೂಕಿನ ಪುನರ ಪರೀಶೀಲನೆ ಕಾರ್ಯವು ಇಂದು ಸಹಾಯಕ ಆಯುಕ್ತರ ಕಾವ್ಯ ರಾಣಿ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಾರ್ಯಾಲಯದಲ್ಲಿ 100ಅರ್ಜಿಗಳ ಪುನರ್ ಪರೀಶೀಲನೆ ಆರಂಭವಾಯಿತು.  

ಮುಂಡಗೋಡ ತಾಲ್ಲೂಕು ಭೂಹಕ್ಕುದಾರರ ಹಿತರಕ್ಷಣಾ ವೇದಿಕೆ ನಿಯೋಗವು ಪುನರ ಪರೀಶೀಲನೆ ಸಂದರ್ಭದಲ್ಲಿ ತಿರಸ್ಕೃತ ಅರ್ಜಿದಾರರನ್ನು ಇತರೆ ಪಾರಂಪರಿಕ ಅರಣ್ಯ ವಾಸಿಗಳೆಂದು ಪರಿಗಣಿಸಲು ದಾಖಲಾತಿಯಾಗಿ ಹಿರಿಯರ ಹೇಳಿಕೆ ಹಾಗೂ ಭಾರತ ಸರಕಾರದ 1883ರಲ್ಲಿ ಪ್ರಕಟಿತ ಕೆನರಾ ಗೆಜೆಟಿಯರನ್ನು ಪರಿಗಣಿಸುವಂತೆ ಕೋರಿತು.  

ಈ ಸಂದರ್ಭದಲ್ಲಿ ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷರಾದ ಸುರೇಶ ಲಮಾಣಿ, ಕಾರ್ಯದರ್ಶಿ ಗಳಾದ, ಸುರೇಶ ರಾಠೋಡ, ಹೇಮಲಪ್ಪ ಲಮಾಣಿ, ನೂರ ಅಹ್ಮದ ಗದಗ, ಶರಿಫ ವಡ್ಡರ, ನಾಗರಾಜ್ ಕಟ್ಟಿಮನಿ, ಲಕ್ಷ್ಮಣ ಮುಳೆ, ಲೊಕೇಶಗೌಡ ಹಾಜರಿದ್ದರು.