ಗೋಕಾಕ 09: ಸಮಾಜದಲ್ಲಾಗುವ ವಿಪತ್ತುಗಳಿಗೆ ಸ್ಪಂದಿಸುವ ಮೂಲಕ ಆರೋಗ್ಯ ಸೇವೆಗೆ ರೆಡ್‌ಕ್ರಾಸ್ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಖ್ಯಾತ ವೈದ್ಯರಾದ ಡಾ. ನವೀನ ಭೀ ಗೋಲಭಾವಿ ಹೇಳಿದರು.
ನಗರದ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್. ಎಸ್. ಪದವಿ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕಗಳ ಆಶ್ರಯದಲ್ಲಿ ದಿ. 08 ರಂದು ಹಮ್ಮಿಕೊಂಡಿದ್ದ “ವಿಶ್ವ ರೆಡ್ ಕ್ರಾಸ್ ದಿನ-2025” ಕಾರ್ಯಕ್ರಮದಲ್ಲಿ ಮುಖ್ಯ ಅಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರೆಡ್‌ಕ್ರಾಸ್ ಸಂಸ್ಥೆಯು ಸಮಾಜದ ಒಳತಿಗಾಗಿ ಶ್ರಮಿಸುತ್ತಿದೆ. ಮಾನವೀಯತೆಯೇ ಅದರ ಮೂಲ ಧ್ಯೇಯ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ. ಎಮ್. ತುರಡಗಿ ಮಾತನಾಡಿದರು. ಋಂಅ ಸಂಯೋಜಕರಾದ ಡಾ. ಪಿ. ಪಿ. ಕಟ್ಟಿಮನಿ ಉಪಸ್ಥಿತರಿದ್ದರು. ಯುವ ರೆಡ್‌ಕ್ರಾಸ್ ಪುರುಷ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ. ಕೃಷ್ಣಮೂರ್ತಿ ಎಮ್. ಎಸ್. ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಎಂ. ವಿ. ಗೊರಗುದ್ದಿ ನಿರೂಪಣೆ ಮಾಡಿದರು. ಮಹಿಳಾ ಘಟಕದ ಅಧಿಕಾರಿಗಳಾದ ಜ್ಯೋತಿ ಜಿ. ಪೋಲಾಶಿಯವರು ವಂದಿಸಿದರು. ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.