ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆಗಾಗಿ ಸಲಹೆ
Recommendations for the management of worm in maize
ಗದಗ 2: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ ಮೆಕ್ಕೆಜೋಳದ ಬಿತ್ತನೆ ಪ್ರದೇಶ 115700 ಹೆ. ಗುರಿಯಿದ್ದು ಇದುವರೆಗೆ 125721 ಹೆ. ಶೇ.9ರಷ್ಟು ಅಧಿಕ ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಸೈನಿಕ ಹುಳು(ಲದ್ದಿ ಹುಳು)ವಿನ ಬಾಧೆ ಕಂಡುಬಂದಿದೆ.
ಈ ಕೀಟವು ಮೆಕ್ಕೆಜೋಳ ಬೆಳೆ ಅಲ್ಲದೇ ಇತರೆ ಏಕದಳ ಧಾನ್ಯ ಬೆಳೆಗಳಾದ ಭತ್ತ, ಹೈಬ್ರಿಡ್ ಜೋಳ, ರಾಗಿ ಮುಂತಾದ ಬೆಳೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮುಖ್ಯವಾಗಿ ಬೆಳೆಯ ಎಲೆ, ಕಾಂಡ, ತೆನೆಯ ಭಾಗವನ್ನು ಕೆರೆದು ತಿನ್ನುವದಲ್ಲದೇ, ಎಲೆಯ ಭಾಗದಲ್ಲಿ ಸರಣಿ ತೂತುಗಳನ್ನು ಕೊರೆಯುತ್ತದೆ. ಒಂದು ಚಿಟ್ಟೆಯು 1500 ಮೊಟ್ಟೆಯವರೆಗೆ ತತ್ತಿಗಳನ್ನಿಟ್ಟು, ಬೆಳೆಗಳಿಗೆ ತೀವ್ರ ಹಾನಿ ಮಾಡುತ್ತದೆ. ಕೀಟವು ಮುಸುಕಿನ ಜೋಳದ ಸುಳಿಯನ್ನು ಕೊರೆಯುತ್ತದೆ. ಹುಳು ಬೆಳೆದಂತೆಲ್ಲ ಸುರುಳಿಯಲ್ಲಿ ಎಲೆಯನ್ನು ತಿಂದು ತ್ಯಾಜ್ಯವನ್ನು ಬಿಡುವುದರಿಂದ ಸುಳಿ ಕೈಯಿಂದ ಎಳೆದಾಗ ಸುಲಭವಾಗಿ ಹೊರಬರುವುದು. ಬೆಳೆಯ ಬೆಳವಣಿಗೆಗೆ ತೀವ್ರ ಹಾನಿಯನ್ನುಂಟು ಮಾಡುವುದರಿಂದ ಉತ್ಪಾದನೆಯು ಕುಂಠಿತವಾಗುತ್ತದೆ.
ಕೀಟವನ್ನು ನಿರ್ವಹಣೆ ಮಾಡಲು, ಬೆಳೆಯ ಶೇ.10ಕ್ಕಿಂತ ಹೆಚ್ಚು ಎಲೆಗಳು ಬಾಧಿತವಾಗಿದ್ದಲ್ಲಿ ಸ್ಪೈನೆಟೊರಂ 11.7ಅ ಎಸ್.ಸಿ. 1 ಮಿ.ಲೀ., ಅಥವಾ ಕ್ಲೊರಾಂಟ್ರಾನಿಲಿಪ್ರೊಲ್ 18.5ಅ ಎಸ್.ಸಿ. 0.4 ಮಿ.ಲೀ, ಅಥವಾ ಥೈಯಾಮಿಥೊಕ್ಸ್ಯಾಮ್ 12.6ಅ+ ಲ್ಯಾಂಬ್ಡಾ ಸೈಹ್ಯಾಲೊಥ್ರಿನ್ 9.5ಅ ಝಡ್.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಓಷಧಿಯ ಮಿಶ್ರಣ ಬೆಳೆಯ ಸುಳಿಗೆ ಬೀಳುವಂತೆ ಸಿಂಪಡಿಸಬೇಕು.
ಮೊದಲ ಸಿಂಪರಣೆಯನ್ನು ಬಿತ್ತನೆಯಾದ 15-20 ದಿನಗಳೊಳಗೆ ತೆಗೆದುಕೊಳ್ಳಬೇಕು. ಎರಡನೇ ಸಿಂಪರಣೆಯನ್ನು ಮೊದಲನೆಯ ಸಿಂಪರಣೆಯ 10-15 ದಿನಗಳ ನಂತರ ತೆಗೆದುಕೊಳ್ಳುವುದು. ಪ್ರತಿ ಸಿಂಪರಣೆಯನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ತೆಗೆದುಕೊಳ್ಳಬೇಕು. ಪ್ರತಿ ಸಲವೂ ಒಂದೇ ತೆರನಾದ ಕೀಟನಾಶಕವನ್ನು ಸಿಂಪರಣೆ ಮಾಡಬಾರದು. ಇದರಿಂದ ಕೀಟವು ಆ ಓಷಧಿಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಅಪಾಯವಿರುತ್ತದೆ.
ಮೆಕ್ಕೆ ಜೋಳ ಬಿತ್ತಿದ 30 ದಿನಗಳೊಳಗಾಗಿ ಬೆಳೆಯ ಸುಳಿಯೊಳಗೆ ಉಸುಕು+ಸುಣ್ಣ(9:1) ಅನುಪಾತದಲ್ಲಿ ಮಿಶ್ರಣ ಮಾಡಿ ಹಾಕುವುದು. ತೆನೆ ಬಿಡುವದಕ್ಕಿಂತ ಮುಂಚೆ ಕೀಟನಾಶಕಗಳನ್ನು ಉಪಯೋಗಿಸುವುದು ಸೂಕ್ತವಾಗಿದೆ. ತೆನೆ ಬಿಡುವ ಸಮಯದಲ್ಲಿ ಮತ್ತು ತೆನೆ ಬಿಟ್ಟ ನಂತರ ಜೈವಿಕ ಕೀಟನಾಶಕಗಳಾದ ಮೆಟಾರೈ್ಹಜಿಯಂ ಅನಿಸೊಪ್ಲೆ, ಮೆಟಾರೈ್ಹಜಿಯಂ ರಿಲೈ, ಬವೇರಿಯಾ ಬೆಸ್ಸಿಯಾನಾ, ವರಿ್ಟಸ್ಸಿಲಿಯಂ ಲೆಕಾನಿ (1 ್ಠ 108 ಛಿಜಿಣ/ರ) ಅ 5ರ/ಟಣಡಿಜ ಬೆಳೆಯ ಸುಳಿಯಲ್ಲಿ ಹಾಕುವುದು. 10 ದಿನಗಳ ನಂತರ ಮತ್ತೊಮ್ಮೆ ಸಿಂಪರಣೆ ಕೈಗೊಳ್ಳುವುದು. ಅಥವಾ ಬ್ಯಾಸಿಲ್ಲಸ್ ಥುರಿಂಜೆನ್ಸಿಸ್ ತಳಿ ಕುರ್ಸ್ಟೊಕಿ 2 ಗ್ರಾಂ./ಲೀ ಅಥವಾ 400 ಗ್ರಾಂ./ಎಕರೆ ಸಿಂಪರಣೆ ಕೈಗೊಳ್ಳುವುದು.
ದ್ವಿದಳ ಧಾನ್ಯಗಳು, ಎಣ್ಣೆಕಾಳು ಬೆಳೆಗಳು ಹಾಗೂ ಹೂವಿನ ಬೆಳೆಗಳ ಅಂತರ ಬೆಳೆಗಳನ್ನು ಬೆಳೆಯುವುದರಿಂದ, ಬೆಳೆ ವೈವಿಧ್ಯತೆ ಹೆಚ್ಚಾಗಿ ಸೈನಿಕ ಹುಳು ಕೀಟದ ಸ್ವಾಭಾವಿಕ ಶತೃಕೀಟಗಳ ಸಂಖ್ಯೆಯು ಹೆಚ್ಚಾಗಿ, ಸೈನಿಕ ಹುಳುವಿನ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಸೈನಿಕ ಹುಳದ ಗಂಡು ಹುಳಗಳನ್ನು ಎಕರೆಗೆ 15 ಮೋಹಕ ಬಲೆಗಳನ್ನು ಬಳಸಿ ಹಿಡಿದಲ್ಲಿ, ಮುಂದಿನ ಹಂಗಾಮಿಗೆ ಕೀಟ ಬಾಧೆಯನ್ನು ಕಡಿಮೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 