ಮಹಾಲಿಂಗಪುರ03: ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಪ್ರತಿಭೆಯನ್ನು ಗುರುತಿಸಿ-ಗೌರವಿಸಿ ಅವರನ್ನು ನಾಡಿಗೆ ಪರಿಚಯಿಸುವ ಕೆಲಸವು ನಿರಂತರವಾಗಿ ನಡೆಯಬೇಕು ಎಂದು ಕನರ್ಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಈರಣ್ಣ ಲಟ್ಟಿ ಹೇಳಿದರು.
ಶನಿವಾರ ಪಟ್ಟಣದ ಎಸ್.ರಾಧಾಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕನರ್ಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮಹಾಲಿಂಗಪುರ ವಲಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳಲ್ಲಿ ನೆಲ, ಜಲ, ಭಾಷೆ, ನಾಡು-ನುಡಿಯ ಮಹತ್ವ, ಸಹಬಾಳ್ವೆ, ದೇಶಾಭಿಮಾನವನ್ನು ಬೆಳೆಸುವ ಕೆಲಸವನ್ನು ಮಸಾಪ ಘಟಕದಿಂದ ನಡೆಯಬೇಕು. ವಲಯ ಘಟಕದ ಎಲ್ಲಾ ಕೆಲಸ ಕಾರ್ಯಗಳಿಗೆ ಜಿಲ್ಲಾ ಘಟಕ ಸಹಕಾರ ಸದಾ ಇರುತ್ತದೆ ಎಂದರು.
ಸಾನಿಧ್ಯವಹಿಸಿದ್ದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮಿಜಿ ಮಾತನಾಡಿ ಸಣ್ಣ ಬೀಜವು ಮಣ್ಣು, ನೀರಿನ ಸಂಸ್ಕಾರದಿಂದ ಹೆಮ್ಮರವಾಗಿ ಬೆಳೆಯುವಂತೆ ನಿರ್ಮಲವಾದ ಮನಸ್ಸುಳ್ಳ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರದ ಜೊತೆಗೆ ಸಾಹಿತ್ಯಾಸಕ್ತಿ, ಕಲಾ ಪ್ರದರ್ಶನಗಳಿಗೆ ಸೂಕ್ತ ಅವಕಾಶಗಳನ್ನು ನೀಡುವ ಮೂಲಕ ಅವರನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಮಕ್ಕಳ ಸಾಹಿತ್ಯ ಪರಿಷತ್ ಪ್ರಯತ್ನಿಸಬೇಕು. ಸಮಾಜದಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಅವಕಾಶವಿರುವದಿಲ್ಲ. ಅಂತಹ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುಸಿ ಬೆಳೆಸುವ ಕಾರ್ಯವು ಮಸಾಪ ವಲಯ ಘಟಕದಿಂದ ನಡೆಯಲಿ ಎಂದು ಶುಭ ಹಾರೈಸಿದರು.
ಹಿರಿಯ ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ ಮಾತನಾಡಿ ಇಂದಿನ ಮಕ್ಕಳೆ ನಾಳಿನ ಪ್ರಜೆಗಳಾಗಿರುವದರಿಂದ ಅವರ ಅಭಿರುಚಿ, ಆಸಕ್ತಿಗಳಿಗೆ ಅನುಸಾರವಾಗಿ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಮಕ್ಕಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಬೆಳೆಸುವ ಉದ್ದೇಶದಿಂದ ಮಸಾಪ ಹುಟ್ಟಿಕೊಂಡಿದೆ. ಮಕ್ಕಳ ಅಭಿವೃದ್ದಿಗೆ ಪಾಲಕರು, ಶಿಕ್ಷಕರ ಜೊತೆಗೆ ಮಸಾಪ ಘಟಕದ ಪದಾಧಿಕಾರಿಗಳು ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ವಲಯ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ ಮಂಡಿ, ಸಮಾರಂಭ ಉದ್ಘಾಟಿಸಿದ ಗಣ್ಯವರ್ತಕ ದುಂಡಪ್ಪ ಪಟ್ಟಣಶೆಟ್ಟಿ, ಮಸಾಪ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗೌರಮ್ಮ ಕೆಂಗಲಗುತ್ತಿ ಮಾತನಾಡಿದರು. ಶಾಲಾ ಮಕ್ಕಳಿಂದ ಜರುಗಿದ ಕವನ ವಾಚನ, ಭರತನಾಟ್ಯ, ಅಲ್ಲಮ್ಮ-ಅಕ್ಕಮಮಹಾದೇವಿ, ಅಜರ್ುನ-ಬಬ್ರುವಾಹನ ಸಂವಾದ ರೂಪಕಗಳು ಗಮನ ಸೆಳೆದವು.
ಕಾನಿಪ ಅಧ್ಯಕ್ಷ ಎಸ್.ಎಸ್.ಈಶ್ವರಪ್ಪಗೋಳ, ಎಸ್.ಕೆ.ಗಿಂಡೆ, ಮಸಾಪ ತೇರದಾಳ ಅಧ್ಯಕ್ಷ ಸಿದ್ದಣ್ಣ ಕಮದಿನ್ನಿ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಈರಣ್ಣ ಲಟ್ಟಿ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ವಲಯ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ನೀಡಿದರು.
2018-19ನೇ ಸಾಲಿನ ಮುಧೋಳ ತಾಲೂಕಾ ಶಿಕ್ಷಣ ಪರಿಶ್ರಮ ಹಿರಿಮೆ ಪ್ರಶಸ್ತಿ ಪಡೆದ ಸಿದ್ದಾರೂಢ ಮುಗಳಖೋಡ, ವಿ.ಎ.ಕಾಗಿ ಅವರನ್ನು ಮಸಾಪ ವಲಯ ಘಟಕದಿಂದ ಸನ್ಮಾನಿಸಲಾಯಿತು.
ಮಸಾಪ ವಯಲ ಘಟಕದ ಪದಾಧಿಕಾರಿಗಳಾದ ಶ್ರೀಶೈಲ ಚೌಗಲಾ, ಶ್ರೀನಿವಾಸ ಕಾಂಬಳೇಕರ, ಮಹಾಲಿಂಗಯ್ಯ ಮಠ, ಚಂದ್ರಶೇಖರ ದಾದನಟ್ಟಿ, ಶಶಿಧರ ಉಳ್ಳೇಗಡ್ಡಿ, ಚಂದ್ರಶೇಖರ ಮೋರೆ, ಶರೀಪಾ ಸಿಕ್ಕಲಗಾರ, ಸವಿತಾ ಆಚಾರಿ, ಬಸವರಾಜ ತೇಲಿ, ಸಿದ್ದಾರೂಢ ಮೂಗಳಖೋಡ, ಚನ್ನಬಸವರಾಜ ಮೂಗಳಖೋಡ, ಮುತ್ತು ಪಟ್ಟೇದ, ದಯಾನಂದ ಕಲ್ಲೇದ ಸೇರಿದಂತೆ ಢವಳನಾಥ ಮತ್ತು ಎಸ್.ರಾಧಾಕೃಷ್ಣ ಶಾಲೆಯ ಮಕ್ಕಳು, ಶಿಕ್ಷಕಿಯರು ಇದ್ದರು.
ಚಂದ್ರಶೇಖರ ದಾದನಟ್ಟಿ ಸ್ವಾಗತಿಸಿದರು. ಶ್ರೀಶೈಲ ಎಸ್.ಚೌಗಲಾ ನಿರೂಪಿಸಿದರು. ಶ್ರೀನಿವಾಸ ಕಾಂಬಳೇಕರ ವಂದಿಸಿದರು.