ಮುಂದುವರೆದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಪಂ ಸದಸ್ಯರಿಂದ ಛೀಮಾರಿ

ಲೋಕದರ್ಶನ ವರದಿ

ಶಿರಹಟ್ಟಿ: ಈ ಹಿಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಣಯಗಳು ಮತ್ತು ಪ್ರಗತಿಯ  ಮಾಹಿತಿ ಒದಗಿಸುವಂತೆ ಹೇಳಲಾಗಿರುವ ವಿಷಯಗಳು ಯಾವವು  ಎನ್ನುವುದರ ಬಗ್ಗೆ ನಡಾವಳಿ ಪತ್ರ ಎಲ್ಲಿದೆ ಎಂದು ಜಿಪಂ ಸದಸ್ಯೆ ರೇಖಾ, ತಿಮ್ಮರೆಡ್ಡಿ ಮತ್ತು ಈಶ್ವರ ಹುಲ್ಲಲ್ಲಿ ಇಒ ನಿಂಗಪ್ಪ ಓಲೆಕಾರ ರವರನ್ನು ಸಭೆಯ ಆರಂಭದ ಮೊದಲೇ ಪ್ರಶ್ನೆಗಳ ಸುರಿಮಳೆಗರೆದರು. ಜೊತೆಗೆ ತನಿಖೆ ನಡೆಸುವಂತೆ ಸೂಚಿಸಿದ್ದರೂ ಸಹಿತವಾಗಿ ಈವರೆಗೆ  ತೆಗೆದುಕೊಂಡಿರುವ ಕ್ರಮ ಬಗ್ಗೆ ಮಾಹಿತಿ ಕೊಡಿ ಎಂದು ಜಿಪಂ ಸದಸ್ಯ ಈಶ್ವರ ಹುಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಪಟ್ಟಣದ ತಾಲೂಕ ಪಂಚಾಯತ ಸಾಮಥ್ರ್ಯ ಸೌಧದಲ್ಲಿ ಶಾಸಕ ರಾಮಣ್ಣ ಲಮಾಣಿಯವರ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷಕ್ಕೆ ಸದಸ್ಯರು ಛೀಮಾರಿ ಹಾಕಿದರು. 

ಪ್ರತಿ ಬಾರೀ ಸಭೆಯಲ್ಲಿ ಒಂದೇ ಇಲಾಖೆಯ ವಿಷಯವನ್ನು ಕುರಿತು ಚರ್ಚೆ ಸುವುದಾದರೆ ಉಳಿದ ಇಲಾಖೆಗಳ ಅಭಿವೃದ್ಧಿಯನ್ನು ಅವಲೋಕಿಸುವುದು ಯಾವಾಗ?   ಕಾಟಾಚಾರಕ್ಕೆ ಸಭೆ ನಡೆಸುವುದು ಅವಶ್ಯವಿಲ್ಲ. ಸಭೆಗೆ ನಾವು ಕಥೆ ಕೇಳಲು ಬರುವುದಿಲ್ಲ. ಕಳೆದ ನಾಲ್ಕು ವರ್ಷ ನನ್ನ ಆಡಳಿತ ಅವಧಿಯಲ್ಲಿ ನಿಮ್ಮ ಸಂಸ್ಥೆಯಿಂದ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದೀರಾ ? ನಿಮ್ಮಿಷ್ಟದಂತೆ ಕಾರ್ಯ ನಡೆಸುವುದಾದರೆ ಸಭೆ ಏಕೇ? ಮತ್ತು ಸದಸ್ಯರೇಕೆ ಬೇಕು? ಎಂದು ಆಕ್ರೋಶಿತರಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ತಾಲೂಕ ಆರೋಗ್ಯಾಧಿಕಾರಿಗಳಿಗೆ ಈ ಹಿಂದಿನ ಸಭೆಯಲ್ಲಿ ನೂತ ಕಟ್ಟಡದ ಬಗ್ಗೆ ಮಾಹಿತಿ ಕೇಳಿದ್ದೆ ಕೊಟ್ಟಿದ್ದಿರಾ ?  ಎಂದು ಜಿಪಂ ಸದಸ್ಯ ಈಶ್ವರ ಹುಲ್ಲಲ್ಲಿ (ಆರೋಗ್ಯಾಧಿಕಾರಿಗೆ) ಪ್ರಶ್ನಿಸಿದರು.

ಶಿರಹಟ್ಟಿ ತಾಲೂಕ ಆಸ್ಪತ್ರೆಯಲ್ಲಿ ನಿರ್ಮಾಣವಾದಂತಹ ಕ್ಯಾಂಟೀನ್ ಕಟ್ಟಡಕ್ಕೆ ಬುನಾದಿ ಇಲ್ಲದೇ ಕಟ್ಟಡ ನಿಮರ್ಿಸಲಾಗಿದೆ. ಈ ಕುರಿತು ಮಾಹಿತಿ ಒದಗಿಸುವಂತೆ ಕೇಳಲಾಗಿತ್ತು  ಆದರೆ ಕೆಡಿಪಿ ಸಭೆ ಮುಗಿದು ಹತ್ತು ತಿಂಗಳಾದರೂ ಸಹಿತ ಮಾಹಿತ ನೀಡಿಲ್ಲವೇಕೆ? ಇದಕ್ಕೆ ಉತ್ತರಿಸಿದ ತಾಲೂಕ ಆರೋಗ್ಯಾಧಿಕಾರಿ ಡಾ.ಸುಭಾಸ ದಾಯಗೊಂಡ ನಾವು ಹೊಸದಾಗಿ ಆಗಮಿಸಿದ್ದರಿಂದ ನಮಗೆ ಗೊತ್ತಿರಲಿಲ್ಲ. ಎರೆಡು ದಿನದಲ್ಲಿ ತಮಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. 

ಆರೋಗ್ಯ ಇಲಾಖೆಯಿಂದ ಸ್ಯಾನೇಟರಿ ಪ್ಯಾಡ ಸಮರ್ಪಕವಾಗಿ ವಿತರಣೆ ಯಾಗುತ್ತಿರಲ್ಲ! ಜಿಪಂ ಸದಸ್ಯ ಹುಲ್ಲಲ್ಲಿ ಆರೋಪ: ತಾಲೂಕಿನ ಹೆಬ್ಬಾಳ ಜಿಪಂ ಮತಕ್ಷೇತ್ರದ ಮಾಹಿತಿ ನಮ್ಮ ಬಳಿ ಇದ್ದು, ಸ್ಯಾನೇಟರಿ ಪ್ಯಾಡನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸದೇ ಅರ್ಧ ಮಾತ್ರ ವಿತರಿಸಲಾಗುತ್ತಿದೆ. ನಿಯಮದಂತೆ ಪೂರ್ಣ ಒದಗಿಸುವುದಾದರೆ ಒದಗಿಸಿ ಇಲ್ಲವಾದರೆ ಅವರಿಗೆ ಬಿಲ್ ಕೊಡುವುದುನ್ನು ನಿಲ್ಲಿಸಿ ಎಂದು ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು. 

ನೂತನ ಅಂಗನವಾಡಿ ಕಟ್ಟಡ ಸೋರುತ್ತಿದೆ! ಕಳಪೆ ಕಾಮಗಾರಿ: ಜಿಪಂ ರೇಖಾ ಅಳವಂಡಿ: ಬೆಳ್ಳಟ್ಟಿಯಲ್ಲಿನ ಚಿಕ್ಕ ಸವಣೂರ ಗ್ರಾಮ ಹೋಗುವ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿದಂತಹ ಅಂಗನವಾಡಿ ಕಟ್ಟಡ ಸೋರುತ್ತಿದೆ. ಜಿಲ್ಲಾ ಪಂಚಾಯತ ಎಇಇ ಯವರು ಕಾಮಗಾರಿಯನ್ನು ಪರಿಶೀಲಿಸದೇ ಹೇಗೆ ಸುಪದರ್ಿಗೆ ಪಡೆದುಕೊಂಡಿರಿ ಎಂದು ಜಿಪಂ ಎಇಇ ಯವರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಇಇ ನಾಗರತ್ನ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಗುತ್ತಿಗೆ ದಾರರರಿಂದ ಸರಿಪಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. 

ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಶಿರಹಟ್ಟಿ ಮತಕ್ಷೇತ್ರದಲ್ಲಿನ ಪ್ರವಾಹ ಪೀಡತ ಪ್ರದೇಶಗಳಲ್ಲಿ ಹಾನಿ ಕುರಿತು ಸಮಗ್ರ ಮಾಹಿತಿ ಸಲ್ಲಿಸಬೇಕು. ಜೊತೆಗೆ ಮಳೆಯಿಂದಾಗಿ ತಾಲೂಕಿನಲ್ಲಿ ಸಾಕಷ್ಟು ಮನೆಗಳು ಬಿದ್ದಿವೆ ಸರಿಯಾಗಿ ಸಮೀಕ್ಷೆ ಮಾಡಿ ಯಾವೊಬ್ಬ ಮನೆಯೂ ಕೂಡಾ ಬಿಡದ ಹಾಗೆ ಪರಿಗಣಿಸಿ ನಿಯಮದಂತೆ ಪರಿಹಾರವನ್ನು ಒದಗಿಸಲು  ಮುಂದಾಗಬೇಕು. ಜೊತೆಗೆ ಎಲ್ಲಾಇಲಾಖೆ ತಾಲೂಕ ಮಟ್ಟದ ಅಧಿಕಾರಿಗಳು ಮಳೆಯ ಪ್ರಮಾಣ ಹೆಚ್ಚು ಆಗಿದ್ದರಿಂದ  ಜನರು ಸಾಕಷ್ಟು ನೊಂದಿದ್ದಾರೆ. ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಅವರಿಗೆ ಕಚೇರಿ ಅಲೇದಾಡಿಸದ ಹಾಗೆ ನೋಡಿಕೊಳ್ಳಿ, ಅವರ ಸಮಸ್ಯೆಗಳಿಗೆ ಬೇಗನೆ ಸ್ಪಂದಿಸುವ ಕಾರ್ಯಕ್ಕೆಮುಂದಾಗಬೇಕು. ಅತ್ಯಂತ ಚುರುಕಿನಿಂದ ಕಾಯರ್ೋನ್ಮಖರಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸ, ಜಿಪಂ ಸದಸ್ಯ ದೇವಕ್ಕ ಲಮಾಣಿ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.