ಬ್ಯಾಂಕಾಕ್, ನ. 6: ಶಂಕಿತ ಪ್ರತ್ಯೇಕತಾವಾದಿ ಬಂಡುಕೋರರು ಥೈಲ್ಯಾಂಡ್ನ ದಕ್ಷಿಣದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಭದ್ರತಾ ತಪಾಸಣಾ ಕೇಂದ್ರದಲ್ಲಿ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗ್ರಾಮ ರಕ್ಷಣಾ ಸ್ವಯಂಸೇವಕರು ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ದಕ್ಷಿಣ ಯಲಾ ಪ್ರಾಂತ್ಯದಲ್ಲಿ ದಾಳಿಕೋರರು ಮಂಗಳವಾರ ತಡರಾತ್ರಿ ತಮ್ಮನ್ನು ಬೆನ್ನಟ್ಟದಂತೆ ರಸ್ತೆಗಳಲ್ಲಿ ಸ್ಫೋಟಕ ಮತ್ತು ಮೊಳೆಗಳನ್ನು ರಸ್ತೆಯಲ್ಲೆಲ್ಲಾ ಚೆಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಬಂದೂಕು ದಾಳಿ ಇದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. "ಇದು ಶಂಕಿತ ಬಂಡುಕೋರರ ಕೃತ್ಯ' ಎಂದು ಪ್ರಾದೇಶಿಕ ಭದ್ರತಾ ವಕ್ತಾರ ಕರ್ನಲ್ ಪ್ರಮೋಟ್ ಪ್ರೋಮ್-ಇನ್ ತಿಳಿಸಿದ್ದಾರೆ. "ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ" ಎಂದು ಅವರು ಹೇಳಿದರು. ಬೌದ್ಧರ ಪ್ರಾಬಲ್ಯದ ಥೈಲ್ಯಾಂಡ್ನಲ್ಲಿ ಮಲಯ್-ಮುಸ್ಲಿಂ ಪ್ರಾಂತ್ಯಗಳಾದ ಯಲಾ, ಪಟ್ಟಾನಿ ಮತ್ತು ನಾರತಿವಾತ್ನಲ್ಲಿ ಒಂದು ದಶಕಗಳಷ್ಟು ಹಳೆಯದಾದ ಪ್ರತ್ಯೇಕತಾವಾದಿ ಗುಂಪು ನಡೆಸಿದ ದಂಗೆಯಲ್ಲಿ 2004 ರಿಂದ ಇದುವರೆಗೆ ಸುಮಾರು 7,000 ಜನರು ಸಾವನ್ನಪ್ಪಿದ್ದಾರೆ ಎಂದು ಹಿಂಸಾಚಾರದ ಮೇಲ್ವಿಚಾರಣೆ ಮಾಡುವ ಡೀಪ್ ಸೌತ್ ವಾಚ್ ಸಂಸ್ಥೆ ತಿಳಿಸಿದೆ. ಥೈಲ್ಯಾಂಡ್ನ ದಕ್ಷಿಣದಲ್ಲಿ ನಡೆದ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಇದುವರೆಗೆ ವಹಿಸಿಕೊಂಡಿಲ್ಲ. 1909ರಲ್ಲಿ ಥೈಲ್ಯಾಂಡ್ ವಶಪಡಿಸಿಕೊಳ್ಳುವ ಮೊದಲು, ಯಲಾ, ಪಟ್ಟಾನಿ ಮತ್ತು ನಾರತಿವಾತ್ ಪ್ರದೇಶಗಳು ಸ್ವತಂತ್ರ ಮಲಯ್ ಮುಸ್ಲಿಂ ಸುಲ್ತಾನರ ಭಾಗವಾಗಿದ್ದವು. ದಕ್ಷಿಣದ ಕೆಲವು ಬಂಡಾಯ ಗುಂಪುಗಳು ಸ್ವತಂತ್ರ ರಾಜ್ಯ ಸ್ಥಾಪಿಸಲು ಹೋರಾಡುತ್ತಿವ.