ಚಿಕ್ಕಬಳ್ಳಾಪುರ, ಜ 10 ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ದರಿದ್ದು, ಕಾಂಗ್ರೆಸ್ ನಾಯಕರುನಮ್ಮ ಆಹ್ವಾನ ಸ್ವೀಕರಿಸಲಿ ಎಂದು ಬಿಜೆಪಿ ಹಿರಿಯ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆಗಳ ಪರ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಹಿರಂಗ ಚರ್ಚೆ ಬರಲು ಸಿದ್ಧರಿದ್ದಾರೆಯೇ ಎಂಬುದನ್ನು ತಿಳಿಸಲಿ. ಪೌರತ್ವ ಕಾಯ್ದೆಯಲ್ಲಿ ಯಾವುದೇ ಗೊಂದಲ ಇಲ್ಲ. ಈ ನೆಲದಲ್ಲಿ ಹುಟ್ಟಿದ ಯಾರಿಗೂ ಪೌರತ್ವ ತಿದ್ದುಪಡಿ ಕಾಯಿದೆಯಿಂದ ತೊಂದರೆ ಅಗದು. ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷ ಮುಖಂಡರು ಈ ಬಗ್ಗೆ ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು. ದೇಶದಲ್ಲಿ ವೈಚಾರಿಕತೆ ಕುರಿತು ಎಷ್ಷೇ ಚರ್ಚೆ ನಡೆಯಲಿ. ಆದರೆ ಸಂಘರ್ಷ, ಗಲಭೆ ನಡೆಸುವುದು ಸರಿಯಲ್ಲ. ಪೌರತ್ವ ಕಾಯ್ದೆ ಹೆಸರಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತರ ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳುಲು ಹೊರಟಿದೆ. ಅದರೆ, ಅದು ಸಾಧ್ಯವಿಲ್ಲ ಎಂದರು.ದೇಶದ ವಿಶ್ವವಿದ್ಯಾಲಯಗಳಲ್ಲಿ ದೇಶ ದ್ರೋಹಿಗಳು ಇದ್ದರೆ ಅವರನ್ನು ಪತ್ತೆ ಮಾಡುವ ಕಾರ್ಯ ಆಗಬೇಕು. ಕಾಂಗ್ರೆಸ್ ನ ಕೆಟ್ಟ ರಾಜನೀತಿ ದೇಶವನ್ನು ಅಭದ್ರತೆಗೆ ತಳ್ಳುತ್ತಿದ್ದು ಪೌರತ್ವ ವಿರೋಧಿ ಹೋರಾಟದ ವೇಳೆ ನಡೆಯುತ್ತಿರುವ ಗಲಭೆ, ಅಹಿತಕರ ಘಟನೆಗಳ ಹಿಂದೆ ಕಾಂಗ್ರೆಸ್ ಪಕ್ಷ ಕೈವಾಡ ಇದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.