ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಪ್ರಕರಣಕ್ಕೆ ರವಿಕುಮಾರ್ ಖಂಡನೆ
Ravikumar condemns shoe-throwing incident at judges
ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಪ್ರಕರಣಕ್ಕೆ ರವಿಕುಮಾರ್ ಖಂಡನೆ
ಕೊಪ್ಪಳ 10: ಮುಖ್ಯ ನ್ಯಾಯಮೂರ್ತಿ ಗವಾಯಿ ಯವರ ಮೇಲೆ ರಾಕೇಶ್ ಕಿಶೋರ್ ಎಂಬುವರು ಮಾಡಿರುವ ಶೂ ಎಸೆತ ಪ್ರಕರಣವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಪ್ಪಳ ತಾಲೂಕ ಸಂಚಾಲಕ ರವಿಕುಮಾರ್ ಲಿಂಗದ ಹಳ್ಳಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಅವರು ನಿನ್ನೆ ಸಮಿತಿಯ ಪದಾಧಿಕಾರಿಗಳೊಂದಿಗೆ ಜಿಲ್ಲಾ ಆಡಳಿತದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರಕರಣದ ಪ್ರಮುಖ ಆರೋಪಿ ರಾಕೇಶ್ ಕಿಶೋರ್ ವಿರುದ್ಧ ದೂರು ಸಲ್ಲಿಸಿ ಕೂಡಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಪ್ಪಳ ತಾಲೂಕ ಸಂಚಾಲಕ ರವಿಕುಮಾರ್ ಲಿಂಗದಹಳ್ಳಿ ರವರು ಸರ್ಕಾರಕ್ಕೆ ಮತ್ತು ರಾಷ್ಟ್ರಪತಿಯವರಿಗೆ ಸಮಿತಿಯ ಪರವಾಗಿ ಜಿಲ್ಲಾಧಿಕಾರಿಗಳ ಮೂಲಕ ದೂರು ಪತ್ರ ಸಲ್ಲಿಸಿದ ಬಳಿಕ ಮನವಿ ಮಾಡಿಕೊಂಡು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅವರೊಂದಿಗೆ ಸಮಿತಿಯ ಪದಾಧಿಕಾರಿಗಳಾದ ಜಿಲ್ಲಾ ಸಂಚಾಲಕ ದುರ್ಗಪ್ಪ ದೊಡ್ಡಮನಿ ಜಿಲ್ಲಾ ಸಂಘಟನಾ ಸಂಚಾಲಕ ಫಕೀರ್ಪ ದೊಡ್ಡಮನಿ ವಿಭಾಗಿಯ ಸಂಚಾಲಕ ಭಾಷಾ ಸಾಬ್ ಮುಜಾವರ್, ಗಂಗಾವತಿ ಜಿಲ್ಲಾ ಖಜಾಂಚಿ ಹನುಮಂತಪ್ಪ ಹಿರೇಕಾಸನಖಂಡಿ ಕನಕಗಿರಿ ತಾಲೂಕ ಸಂಚಾಲಕ ವೆಂಕಟೇಶ್ ಪೂಜಾರ ಕೊಪ್ಪಳ ತಾಲೂಕ ವಿಭಾಗೀಯ ಸಂಚಾಲಕ ಚಿನ್ನಪ್ಪ ಬಸಾಪುರ ಕಾರಟಗಿಯ ವಿಜಯಕುಮಾರ್ ಕನಕಗಿರಿಯ ಮಾರುತಿ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಸರ್ಕಾರಕ್ಕೆ ಒತ್ತಾಯಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 