ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃ.ನರಹರಿ ನಿಧನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃ.ನರಹರಿ ನಿಧನ  Rashtriya Swayamsevak Sangh founder Krishna Narahari passes away

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃ.ನರಹರಿ ನಿಧನ  

ವಿಜಯಪುರ 08: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹಕರಾಗಿ, ರಾಷ್ಟ್ರೀಯ ಶೈಕ್ಷಿಣಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ವಿಧಾನ ಪರಿಷತ್ ಮಾಜಿ ಸದಸ್ಯ ಕೃ.ನರಹರಿ ಅವರ ನಿಧನದ ಸುದ್ದಿ ಕೇಳಿ ಅಘಾತವಾಗಿದೆ ಇದು ತುಂಬಲಾರದ ನಷ್ಟ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.  

ಜಿಲ್ಲಾ ಕಾರ್ಯಾಲಯದಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಜಿಲ್ಲಾಧ್ಯಕ್ಷರು ನರಹರಿ ಅವರು ಆದರ್ಶದ ಬೆಳಕಾಗಿದ್ದವರು, ಶಿಸ್ತು, ಸಮರೆ​‍್ಣ ಹಾಗೂ ರಾಷ್ಟ್ರೀಯತೆಯ ಸಂದೇಶ ಬಿತ್ತಿ ಸಂಘ ಚಟುವಟಿಕೆಗಳಲ್ಲಿ ಅಸಂಖ್ಯಾತ ಕಾರ್ಯಕರ್ತರು ತೊಡಗಿಕೊಳ್ಳುವಂತಾಗಲು ಮಹಾ ಪ್ರೇರಕ ಶಕ್ತಿಯಾಗಿದ್ದರು. ಅತ್ಯಂತ ಹಿರಿಯರ ಸಾಲಿನಲ್ಲಿ ನರಹರಿಯವರು ಆದರ್ಶದ ವೃಕ್ಷದಂತೆ ನೆರಳಾಗಿದ್ದರು. ಅವರ ಸರಳತೆ, ಸೇವೆ, ಸಮರೆ​‍್ಣಯ ಬದುಕು ಸಮಾಜ ಹಾಗೂ ಸಂಘದ ಕಾರ್ಯಕರ್ತರಿಗೆ ಮಾರ್ಗದರ್ಶನದ ಬೆಳಕಾಗಿದೆ ಎಂದು ತಿಳಿಸಿದ್ದಾರೆ.ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅರುಣ ಶಹಾಪೂರ ಮಾತನಾಡಿ ನರಹರಿಯವರ ಅಗಲಿಕೆಯಿಂದ ಸಂಘ ಪರಿವಾರ, ಸಮಾಜ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.  

ನರಹರಿ ಅವರ ಅಭಿಮಾನಿಗಳು ಹಾಗೂ ಬಂಧು ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.ಈ ಸಂದರ್ಭದಲ್ಲಿ ಚಂದ್ರಶೇಖರ ಕವಟಗಿ , ಪೂಜ್ಯ ಮಹಾಪೌರರಾದ ಎಮ್‌.ಎಸ್‌.ಕರಡಿ, ಸಂಜೀವ ಐಹೊಳಿ, ಈರಣ್ಣ ರಾವೂರ,  ಮಳುಗೌಡ ಪಾಟೀಲ, ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಸಂದೀಪ ಪಾಟೀಲ, ಕಾಂತು ಶಿಂಧೆ,  ವಿಜಯ ಜೋಶಿ ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟ, ಮಹೇಶ ಒಡೆಯರ ್ಘ ಕ್ರಷ್ಣಾ ಗುನ್ಹಾಳಕರ, ಶಿವಾನಂದ ಭುಯ್ಯಾರ, ಪಾಪುಸಿಂಗ ರಜಪೂತ, ಚಿನ್ನು ಚಿನಗುಂಡಿ, ಭರತ್ ಕುಲಕರ್ಣಿ ಸಿದ್ದಲಿಂಗ ಮಖಣಾಪೂರ, ಶಿವಾನಂದ ಭುಯ್ಯಾರ, ಶೇಖರ ಬಾಗಲಕೋಟ, ಸಂಪತ್ತ ಕೊವಳ್ಳಿ ಉಪಸ್ಥಿತರಿದ್ದರು.