ಸಲ್ಲದ ಮಾತನಾಡುವವರು ಸಂಘದ ಶಾಖೆಗಳಿಗೆ ಬಂದು ನೋಡಲಿ: ವಿವೇಕ ಹಂಜಿಗಿ
Rashtriya Swayamsevak Sangh's roadshow: Mahalingpur
ಮಹಾಲಿಂಗಪುರ 28: ಮಹಾಲಿಂಗಪುರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಜರುಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ದಿನಾಚರಣೆ ಪ್ರಯುಕ್ತ ಜರುಗಿದ ಪಥ ಸಂಚನದಲ್ಲಿ ನೆರೆದಿದ್ದ 600ಕ್ಕೂ ಅಧಿಕ ಸ್ವಯಂಸೇವಕರು ಶಿಸ್ತಿನ ಸಿಪಾಯಿಯಾಗಿ ಕೈಯಲ್ಲಿ ದಂಡ ಹಿಡಿದು ರಸ್ತೆಗಳಲ್ಲಿ ಸರತಿಯ ಸಾಲಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ರಸ್ತೆಯ ಎಡಬಲಗಳಲ್ಲಿ ನೆರೆದಿದ್ದ ಸಾವಿರಾರು ಮಕ್ಕಳು, ಮಹಿಳೆಯರು, ಹಿರಿಯರು ,ಯುವಕರು ಪುಷ್ಪವೃಷ್ಟಿ ಮಾಡಿ ರಾಷ್ಟ್ರಾಭಿಮಾನವನ್ನು ಮೆರೆದು ಸಂಘ ಮತ್ತು ಸ್ವಯಂ ಸೇವಕರಿಗೆ ಗೌರವ ಸಮರೆ್ಣ ಮಾಡಿದರು.
ಸಂಜೆ 5ಕ್ಕೆ ಬುದ್ನಿ ಪಿಡಿಯಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ 6 ಗಂಟೆಗೆ ನಿಗದಿತ ವಾಸವಿ ಕಲ್ಯಾಣ ಮಂಟಪದ ಆವರಣವನ್ನು ತಲುಪಿತು .
ವಕ್ತಾರರಾದ ವಿಜಯಪುರ ಜಿಲ್ಲೆಯ ಸಹ ಸಂಪರ್ಕ ಪ್ರಮುಖ ವಿವೇಕ ಹಂಜಿಗಿ ಬೌದ್ಧಿಕವಾಗಿ ಮಾತನಾಡಿ, ಡಾ. ಹೆಡ್ಗೆವಾರ್ ಜನ್ಮಜಾತ ದೇಶಭಕ್ತರು. ಅವರ ಉತ್ಕೃಷ್ಟ ಮುಂದಾಲೋಚನೆಯಿಂದ 1925ರ ವಿಜಯದಶಮಿಯ ದಿನ ಜನ್ಮ ತಾಳಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಂದಿನಿಂದ ಇಂದಿನವರೆಗೆ ಹಲವಾರು ನಿಷೇಧ, ನಿಬಂರ್ಧಗಳನ್ನು ಮೆಟ್ಟಿನಿಂತು ನೂರನೇ ವರ್ಷಾಚರಣೆ ಮಾಡಿಕೊಳ್ಳುತ್ತಿರುವ ಜಗತ್ತಿನ ಅತಿ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ, ಇದು ಇದು ಪ್ರತಿಯೊಬ್ಬ ಸ್ವಯಂ ಸೇವಕನಿಗೂ ವಿಶೇಷ ಹಾಗೂ ಅವಿಸ್ಮರಣೀಯ ದಿನ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇವಲ ಸ್ವಾರ್ಥ ಅಥವಾ ಯಾವುದೋ ಅಭಿಲಾಷೆಯಿಂದ ಹುಟ್ಟಿಕೊಂಡ ಒಂದು ಸಂಘವಲ್ಲ ಬದಲಾಗಿ ವ್ಯಕ್ತಿ ನಿರ್ಮಾಣದೊಂದಿಗೆ ಸುಭದ್ರ, ಸಮೃದ್ಧ ವಿಶ್ವಗುರು ಭಾರತ ನಿರ್ಮಾಣದ ಕನಸನ್ನು ಕಟ್ಟಿಕೊಂಡು ನಿರಂತರವಾಗಿ ದುಡಿಯುತ್ತ ಬಂದಿರುವ ಸಂಘವಾಗಿದೆ.
ಸಂಘಕ್ಕೆ ಶಾಖೆಯೇ ಜೀವಾಳ. ಶಾಖೆಯಿಂದ ಶರೀರ, ಮನಸ್ಸು, ಬುದ್ಧಿಗೆ ಸಂಸ್ಕಾರದ ಶಕ್ತಿ ದೊರೆಯುತ್ತದೆ. ಅಲ್ಲಿ ನಡೆಯುವ ಕ್ರೀಡೆಗಳಂತಹ ಚಟುವಟಿಕೆಗಳಿಂದ ನೆಲದೊಂದಿಗೆ ಸಂಬಂಧ ಗರಿಷ್ಠವಾದಷ್ಟು ಸಾಮರಸ್ಯದ ಭಾವ ವೃದ್ಧಿಯಾಗುತ್ತದೆ. ನಿಯಮ ಪಾಲನೆ, ಪ್ರಾಮಾಣಿಕತೆ, ಸಮಾಜದ ಬಗ್ಗೆ ಚಿಂತಿಸುವ ಶಾಶ್ವತ ಕೆಲಸ ಇಂದು ಶಾಖೆಯಿಂದ ನಡೆಯುತ್ತಿದೆ. ಸಂಘದ ಸ್ವಯಂ ಸೇವಕರು ಎಂದು ಸ್ವಂತಕ್ಕೆ ಯೋಚಿಸಿದವರಲ್ಲ, ಸಮಾಜಕ್ಕಾಗಿ ಬದುಕಿದವರು. ಈ ಮಣ್ಣನ್ನು ಕೇವಲ ಮಣ್ಣನ್ನಾಗಿ ನೋಡಿದವರಲ್ಲ , ಮಾತೃಭೂಮಿಯಾಗಿ ಪೂಜಿಸಿದವರು ಅದಕ್ಕಾಗಿ ಸರ್ವ ತ್ಯಾಗವನ್ನು ಮಾಡುವವರು.
ಇಂದು ಸಂಘದ ಬಗ್ಗೆ ಸಲ್ಲದ ಮಾತುಗಳನ್ನಾಡುವವರು ಒಮ್ಮೆ ಸಂಘದ ಶಾಖೆಗಳಿಗೆ ಬಂದು ನೋಡಿ ಹೋಗಲಿ. ಶ್ರೇಷ್ಠ ಕಾರ್ಯಕ್ಕಾಗಿ ಸಮಾಜದ ಸ್ವಾಸ್ಥ್ಯಕ್ಕಾಗಿ ದುಡಿಯುವುದು ತಪ್ಪೇ, ಇದು ಭಯೋತ್ಪಾದನೆಯೇ.
ರಾಷ್ಟ್ರೀಯತೆ ಕಡಿಮೆಯಾದಾಗ ಸಮಾಜ ಧ್ವಂಸವಾಗುತ್ತದೆ ಸಮಾಜ ಧ್ವಂಸವಾದಾಗ ರಾಷ್ಟ್ರ ವಿನಾಶವಾಗುತ್ತದೆ ಎಂಬುದೇ ಸಂಘದ ತತ್ವವಾಗಿದೆ. ಸಂಘದ ಒಳಗಡೆ ಬಂದು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಅಲೆಕ್ಸಾಂಡರ್ ನಿಂದ ಹಿಡಿದು ಬ್ರಿಟಿಷರವರೆಗೆ ಹಲವಾರು ದಾಳಿಕೋರರ ಗುಲಾಮಗಿರಿಯಲ್ಲಿ ನಲುಗುವುದಕ್ಕೆ ಕಾರಣ ನಮ್ಮ ಇಂತಹ ಆತ್ಮವಿಸ್ಕೃತಿಯೇ ಕಾರಣ. ಸ್ವಾಭಿಮಾನದ ಕೊರತೆ, ಸಂಘಟನೆಯ ಕೊರತೆ, ಸ್ವಾರ್ಥ ಇವುಗಳಿಂದಾಗಿ ಹಿಂದುಗಳು ಮತ್ತು ಭಾರತೀಯರು ದುರ್ಬಲರಾದರು. ಹಿಂದುಗಳು ಹೇಡಿಗಳು ಮುಸಲ್ಮಾನರು ಗೂಂಡಾಗಳು ಎನ್ನುವಷ್ಟರ ಮಟ್ಟಿಗೆ ಮುಸಲ್ಮಾನರ ದಬ್ಬಾಳಿಕೆಗೆ ಹಿಂದುಗಳು ಮತ್ತು ಭಾರತ ನಲುಗಿ ಹೋಯಿತು.
ಚಂದ್ರಶೇಖರ್ ಆಜಾದ್, ತಿವಾರಿ, ರಾಯಣ್ಣ, ಚೆನ್ನಮ್ಮ ನಮ್ಮವರಿಂದಲೇ ಬಲಿಯಾದರ ಇಂತಹ ಪರಿಸ್ಥಿತಿಯಲ್ಲಿ ಬಳಲಿ ಬೆಂಡಾಗಿದ್ದ ಭಾರತಕ್ಕೆ ನವಶಕ್ತಿ ತುಂಬುವ ಅವಶ್ಯಕತೆ ಇತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕಾಂಗ್ರೆಸ್ಸಿನ ನಾಯಕರಲ್ಲಿ ಯಾವುದೇ ಘನ ಉದ್ದೇಶಗಳಿರಲಿಲ್ಲ ಬದಲಾಗಿ ಸ್ವಯಂ ಪ್ರತಿಷ್ಠೆ ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಘ ಸಂಸ್ಥಾಪಕರಾದ ಡಾ. ಹೆಡ್ಗೆವಾರ್ ಜಿಯವರು ಭಾರತದ ಇಂದಿನ ಸ್ಥಿತಿಗೆ ಸ್ವಾಭಿಮಾನದ ಕೊರತೆ, ಸ್ವಾರ್ಥ, ಸಂಘಟನೆಯ ಕೊರತೆ ಈ ತ್ರಿದೋಷಗಳೆ ಕಾರಣ ಇದರಿಂದ ಭಾರತ ಮತ್ತು ಹಿಂದೂ ಸಮಾಜ ಗುಲಾಮಗಿರಿಯಲ್ಲಿ ನಲುಗುವಂತಾಗಿದೆ ಎಂಬುದನ್ನು ಕಂಡುಕೊಂಡರು. ಇವುಗಳ ಮುಲೋತ್ಪಾಟನೆಗಾಗಿ ಸಂಘವನ್ನು ಸ್ಥಾಪಿಸಿದರು, ಒಂದು ಕೇವಲ ಸಣ್ಣ ಕೊಠಡಿಯಲ್ಲಿ 10-20 ಸ್ವಯಂಸೇವಕರೊಂದಿಗೆ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶದ 6ಲಕ್ಷ ಹಳ್ಳಿಗಳಲ್ಲಿ ದೇಶಾಭಿಮಾನ ಬಿತ್ತುತ್ತಿದೆ. ಪ್ರವಾಹ, ಸುನಾಮಿ, ಭೂಕಂಪ ಮುಂತಾದ ಆಪತ್ತಿನ ಸಂದರ್ಭದಲ್ಲಿ ಹಗಲಿರುಳು ಸೇವೆಗೈಯುತ್ತಿದೆ. ಇಂತಹ ಸ್ವಯಂಸೇವಕ ಸಂಘದ ಏಳಿಗೆಯನ್ನು ಹಿಂದಿನಿಂದಲೂ ದೂಷಿಸುತ್ತಲೆ ಬಂದಿರುವ ದುಷ್ಟ ಶಕ್ತಿಗಳು ಅಂದು ಗಾಂಧೀಜಿಯವರ ಹತ್ಯೆಯ ಆರೋಪ ಹೊರಿಸಿ ನಿಷೇಧ ಹೇರಿದರು, ಆದರೆ ಮುಂದೆ ಜರುಗಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭೂಗತವಾಗಿ ಅಧಿಕಾರದ ದರ್ಪಕಕೆ ಪೆಟ್ಟು ನೀಡಿತು ಇದರಿಂದ ಸಂಘವನ್ನು ಯಾವುದೇ ಅಧಿಕಾರ ಮತ್ತು ದರಿ್ದಂದ ತಡೆಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.
ಸಂಘದ ವಿಚಾರವನ್ನು ದಹಿಸಲು ಹೋದವರು ತಾವೇ ದಹಿಸಿ ಹೋಗಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಖ್ಯಾತ ವೈದ್ಯ ಡಾ. ವಿಶ್ವನಾಥ ಗುಂಡಾ ಮಾತನಾಡಿದರು. ಪಥಸಂಚಲನದಲ್ಲಿ ಶಾಸಕ ಸಿದ್ದು ಸವದಿ ಸೇರಿದಂತೆ ಸುತ್ತಲಿನ ಹಳ್ಳಿಯ ಗಣ್ಯ ಮಾನ್ಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 