ಮುದ್ದೇಬಿಹಾಳ 07: ಇತ್ತೀಚಿಗೆ ಅತ್ಯಾಚಾರವಾಗಿ ಕೊಲೆಯಾಗಿದ್ದ ತಾಲೂಕಿನ ಮುದ್ನಾಳ ಗ್ರಾಮದ ಲಂಬಾಣಿ ಸಮಾಜದ ಶೋಭಾ ಎನ್ನುವ ಮಹಿಳೆಯ ಮನೆಗೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಮುದ್ನಾಳ ಭೇಟಿ ನೀಡಿ ಸರಕಾರದಿಂದ 8ಲಕ್ಷ 25 ಸಾವಿರ ರೂಗಳ ಆರ್ಥಿಕ ಪರಿಹಾರದಲ್ಲಿ ಸದ್ಯ ಮೊದಲ ಹಂತದ 4.12.500 ರೂಗಳ ಚೆಕ್ ವಿತರಿಸಿ ಸಾಂತ್ವಾನ ಹೇಳಿದರು.
ಬಳಿಕ ಕೊಲೆಯಾದ ಮಹಿಳೆಯ 5 ವರ್ಷದ ಹೆಣ್ಣು ಮಗುವಿಗೆ ಪ್ರತಿ ತಿಂಗಳು 5 ಸಾವಿರ ರೂಗಳ ಆರ್ಥಿಕ ಸಹಾಯವನ್ನು ಸರಕಾರದಿಂದ ನೀಡಲಾಗುತ್ತದೆ, ಮಗುವಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡಿಸುವ ವಿದ್ಯಾವಂತಳನ್ನಾಗಿ ಮಾಡಿ ಎಂದು ಮೃತ ಶೋಭಾ ತಾಯಿ ಸಲಹೇ ನೀಡಿದರು.
ಈ ವೇಳೆ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸಂತಿ ಜಿ ಮಠ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಶ್ರೀಕಾಂತ ಚಲವಾದಿ, ಸಿಕಂದರ್ ಜಾನ್ವೇಕರ, ಬೀರ್ಪ ಯರಝರಿ, ರಾಜು ನಾಯಕ, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ, ತಿಪ್ಪಣ್ಣಾ ದೊಡಮನಿ ಸೇರಿದಂತೆ ಹಲವರು ಇದ್ದರು.