ರಾಣಿ ಚನ್ನಮ್ಮ ವಿವಿ ಹಳೆಯ ವಿದ್ಯಾರ್ಥಿಗಳ ಸಭೆ

ರಾಣಿ ಚನ್ನಮ್ಮ ವಿವಿ ಹಳೆಯ ವಿದ್ಯಾರ್ಥಿಗಳ ಸಭೆ Rani Channamma University Alumni Meet

ಬೆಳಗಾವಿ 20:  ಕಒ-ಗಖಊಂ (ಒಇಖಗ) ಘಟಕ ಸಂಖ್ಯೆ-10 ರ ಭಾಗವಾಗಿ, ವೃತ್ತಿ ಮಾರ್ಗದರ್ಶನ ತರಬೇತಿ ಮತ್ತು ಉದ್ಯೋಗ ಕೋಶ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ದಿ. 20ರಂದು ಬೆಳಿಗ್ಗೆ 11ಗಂಟೆಗೆ ಕುವೆಂಪು ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಭೆ (ಹೈಬ್ರಿಡ್ ಮೋಡ್)ಯನ್ನು ಆಯೋಜಿಸಿತ್ತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ. ಸಿ. ಎಮ್‌. ತ್ಯಾಗರಾಜ್ ಇವರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಕೌಶಲ್ಯ ವರ್ಧನೆ, ಉದ್ಯೋಗ ನಿಯೋಜನೆ ಮತ್ತು ಮೆಗಾ ಉದ್ಯೋಗ ಮೇಳವನ್ನು ನಡೆಸುವ ವಿಷಯದಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತೆಗೆದುಕೊಂಡ ವಿವಿಧ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ್ ಕಾಮಗೌಡ, ಅವರು ಹಳೆಯ ವಿದ್ಯಾರ್ಥಿಗಳಿಗೆ ಏಂಖ, ಋಖ ತರಬೇತಿಯನ್ನು ಆಯೋಜಿಸಲು ಪ್ರೋತ್ಸಾಹಿಸಿದರು.   

ವೃತ್ತಿ ಮಾರ್ಗದರ್ಶನ ತರಬೇತಿ ಮತ್ತು ಉದ್ಯೋಗ ಕೋಶದ ನಿರ್ದೇಶಕ ಪ್ರೊ. ಆರ್‌.ಎನ್‌. ಮನಗೂಳಿ ಅವರು ಅತಿಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಸಮಾರಂಭಕ್ಕೆ ಸ್ವಾಗತಿಸಿ ಪರಿಚಯಿಸಿ, ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಲು ಆರ್‌ಸಿಯುನ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಪೋರ್ಟಲ್‌ನ್ನು ಪ್ರಾರಂಭಿಸುವ ಬಗ್ಗೆ ತಿಳಿಸಿದರು. ಹಾಗೂ ಹಳೆಯ ವಿದ್ಯಾರ್ಥಿಗಳ ಸರಣಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಮಹಾಂತೇಶ ಕುರಿ ಇವರು ಸಂಘದ ಉದ್ದೇಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಡಾ.ಕನಕಪ್ಪ ಪೂಜಾರ್ ವಂದಿಸಿದರು.  

ಡಾ.ಗುರುಬಸವರಾಜ ಪಿ.ಎಂ. ಮತ್ತು ಡಾ.ರಮೇಶ ಕಾಂಬಳೆ, ಸಂಯೋಜಕರು, ಎಲ್ಲಾ ವಿಭಾಗದ ಉದ್ಯೋಗ ಕೋಶದ ಸಂಯೋಜಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಸೋಮೇಶ್ ಪರಲಾದ ನಿರೂಪಿಸಿದರು.