ರಾಣೇಬೆನ್ನೂರು: ಆದಿಗುರು ಶಂಕರಾಚಾರ್ಯರ ಜಯಂತ್ಯೋತ್ಸವ

ಲೋಕದರ್ಶನವರದಿ

ರಾಣೇಬೆನ್ನೂರ೦೫: ಸ್ಥಳೀಯ ಜಗದ್ಗುರು ಶಂಕರಾಚಾರ್ಯ ಜಯಂತ್ಯುತ್ಸವ ಸಂಸ್ಥೆಯ ಶತಮಾನೋತ್ಸವ ಸಮಾರಂಭವು ಮೇ.14 ರಿಂದ ಮೇ.18ರವರೆಗೆ 5ದಿನಗಳ ಕಾಲ ವೈವಿಧ್ಯಮಯ ಪೂಜಾ ಧಾರ್ಮಿಕ ಹಾಗೂ ಹೋಮ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಜರುಗಲಿವೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ಸಂಜಯ ನಾಯಕ ಹೇಳಿದರು.

   ನಗರದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇ.14 ರಂದು ಬೆ.8 ರಿಂದ ವಿವಿಧ ಹೋಮ, ಪಾರಾಯಣ, ಪೂಜೆ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನಡೆಯುವವು. 

         ಮುಂಜಾನೆ.11 ಗಂಟೆಗೆ ಸ್ವಯಂಪ್ರಕಾಶ ಸರಸ್ವತಿ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸುವರು ಎಂದರು. 

  ವಿದ್ಯಾಭಿನವ ವಿಧ್ಯಾರಣ್ಯಭಾರತಿ ಮಹಾಸ್ವಾಮಿಗಳು, ಶಾಸಕ ಸಿ.ಎಂ.ಉದಾಸಿ, ಪದ್ಮನಾಭ ಕುಂದಾಪುರ, ರವೀಂದ್ರ ನಾಯಕ ಸೇರಿದಂತೆ ಟ್ರಸ್ಟಿನ ಪದಾಧಿಕಾರಿಗಳು ಆಗಮಿಸುವರು. ಸಂಜೆ. 6 ರಿಂದ ಸಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಮತ್ತಿತರ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದರು.

   ಮೇ. 15 ಮತ್ತು ಮೇ.16 ಹಾಗೂ ಮೇ.17 ರಂದು ಪ್ರತಿದಿನ ಮುಂಜಾನೆ.8 ರಿಂದ ರಾತ್ರಿಯವರೆಗೆ ವಿವಿಧ ಪೂಜೆ, ಹೋಮ, ಪಾರಾಯಣ, ಶಂಕರ ಸ್ತೋತ್ರಗಳ ಪಠಣ, ವಿಶೇಷ ಪ್ರವಚನ, ಸಂಗೀತ ಕಾರ್ಯಕ್ರಮ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ ಎಂದರು.

  ಮೇ.18 ರಂದು ಮುಂಜಾನೆ.11 ಕ್ಕೆ ಸಮಾರೋಪ ಸಮಾರಂಭ ಹಾಗೂ ಸೇವಾ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವು ಜರುಗಲಿದೆ. ಕೂಡಲಿ ಮಹಾಸಂಸ್ಥಾನದ ವಿದ್ಯಾಭಿನವಭಾರತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. 

       ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಶಾಸಕ ಆರ್.ಶಂಕರ್, ಡಾ.ಬಸವರಾಜ ಕೇಲಗಾರ, ಡಾ.ಶಶಿಧರ ವೈದ್ಯ, ಪ್ರಭಾಕರ ಮಂಗಳೂರ, ಶಿವಮೂತರ್ಿ ಜೋಯ್ಸ ಸೇರಿದಂತೆ ಮತ್ತಿತರರು ಆಗಮಿಸುವರೆಂದರು.

  5 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕೆಂದು ವಿನಂತಿಸಿದರು.

       ಟ್ರಸ್ಟ್ನ ಅಧ್ಯಕ್ಷ ಡಿ.ಸಿ.ಕುಲಕಣರ್ಿ, ಶಿವಮೂತರ್ಿ ಜೋಯ್ಸ, ಎ.ಎಂ.ನಾಯಕ, ಅರುಣ ಮುದ್ರಿ, ಜಿ.ಎಲ್.ನಾಡಿಗೇರ, ಅಶೋಕ ನಾಯಕ, ಎಸ್.ಎಂ.ಜೋಶಿ, ಎನ್.ಎಸ್.ಕುಲಕಣರ್ಿ, ರವಿ ವರಗೇರಿ, ಡಿ.ಎನ್.ನಾಡಿಗೇರ, ವಿಶ್ವರೂಪ ಸುರೇಶ ಶಾಸ್ತ್ರಿ, ಆನಂದ ನಾಯಕ, ಸತೀಶ ಕುಲಕಣರ್ಿ ಸೇರಿದಂತೆ ಮತ್ತಿತರರು ಇದ್ದರು.