ನೂತನ ಬಿಜೆಪಿ ಕಚೇರಿ ಉದ್ಘಾಟಿಸಿದ: ರಮೇಶ ಜಿಗಜಿಣಗಿ

ನೂತನ ಬಿಜೆಪಿ ಕಚೇರಿ ಉದ್ಘಾಟಿಸಿದ: ರಮೇಶ ಜಿಗಜಿಣಗಿ  Ramesh Jigajinagi inaugurated the new BJP office

ಇಂಡಿ  18 : ನಗರದ ಹೃದಯ ಭಾಗದಲ್ಲಿರುವ   ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿ ನೂತನ ಬಿಜೆಪಿ ಕಚೇರಿ ಹಾಗೂ ನರೇಂದ್ರ ಮೋದಿ ಅವರ 12 ವರ್ಷಗಳ ಸಾಧನೆಯ ಸಮಾರಂಭವನ್ನು ಗುರುವಾರ ಮಾಜಿ ಕೇಂದ್ರ ಸಚಿವರು ಹಾಗೂ ಹಾಲಿ ವಿಜಯಪುರ ಲೋಕಸಭಾ ಸದಸ್ಯರಾದ ರಮೇಶ ಜಿಗಜಿಣಗಿ ಅವರು ಉದ್ಘಾಟಿಸಿದರು.ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನನಗಂತೂ ತುಂಬಾ ಸಂತೋಷವಾಗಿದೆ. 

ಇಂಡಿ ನಗರದಲ್ಲಿ ಬಿಜೆಪಿ ಕಾರ್ಯಲಯ ಆಗಿದ್ದು ಕಾರ್ಯಕರ್ತೆರಲ್ಲಿ ತುಂಬಾ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.ಭಾರತೀಯ ಜನತಾ ಪಕ್ಷ ವಿಶ್ವದಲ್ಲೇ ಅತಿ ದೊಡ್ಡ ಪಕ್ಷವಾಗಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇವತಾ ಪುರುಷ ಹಾಗೂ ಅನೇಕ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಆದರೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಮೂವತ್ತು ವರ್ಷಗಳ ಕಾಲ್ ಅಧಿಕಾರ ಮಾಡಿ ಏನು ಸಾಧನೆ ಮಾಡಿಲ್ಲ, ದೇಶದಲ್ಲಿ ಇನ್ನೂ ಮುಂದೆ ಕಾಂಗ್ರೆಸ್ ಮುಳುಗಿ ಹೊಗುತ್ತದೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲದೇ ಒದ್ದಾಡುತ್ತಿದೆ.

ಹಾಗೂ ರಾಜ್ಯದ ಗೃಹ ಮಂತ್ರಿ ಪ್ರೀಯಾಂಕ ಖರ್ಗೆ ಅವರು ವಿನಾ ಕಾರಣ ಆರ್ ಎಸ್ ಎಸ್ ಅವರನ್ನು ಬೈಯುವುದು ನಿಲ್ಲಿಸಬೇಕು, ಬೈಯುವುದರಿಂದ ಏನು ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು. ಹಾಗೂ ಇಂಡಿ ತಾಲ್ಲೂಕಿನ ಜನತೆಯಲ್ಲಿ ನನ್ನ ಮನವಿ ಏನೆಂದರೆ? ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಬೇಕು, ತಾವು ಎಲ್ಲರೂ ಜಾತಿ ಮತ ಪಂಥ ಬಿಟ್ಟು ಬಿಜೆಪಿ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಮಾಜಿ ಸಚಿವವರಾದ ಅಪ್ಪು ಪಟ್ಟಣಶೆಟ್ಟಿ, ವಿಜಯಪೂರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ಇಂಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹಣಮಂತರಾಯ ಪಾಟೀಲ ಹಾಗೂ ಕಾಸುಗೌಡ ಬಿರಾದಾರ, ಅನೀಲ ಜಮಾದಾರ ಮಳುಗೌಡ ಪಾಟೀಲ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂಕೇತ ಬಗಲಿ ಶಂಕರಗೌಡ ಪಾಟೀಲ(ಡೋಮನಾಳ) ಶೀಲವಂತ ಉಮರಾಣಿ  ರವಿಕಾಂತ ಬಗಲಿ ಮಲ್ಲಿಕಾರ್ಜುನ ಜೋಗುರ ಸಂಜು ಐಹೋಳೆ ಸಿದ್ದಲಿಂಗ ಹಂಜಗಿ ಈರಣ್ಣ ರಾವೂರ ಮಲ್ಲು ದೇವರ ಶರಣಗೌಡ ತೆಗ್ಗಹಳ್ಳಿ ಸಿದ್ದು ಮಂಗಳೆವಾಡ ಶ್ರೀಶೈಲ ಗಿಣ್ಣಿ ರವಿ ವಗ್ಗೆ ನಾಗೇಂದ್ರ ಕಾಪಸೆ ರಾಜಕುಮಾರ ಸಗಾವಿ ವಿಜಯಲಕ್ಷ್ಮಿ ರೂಗಿಮಠ ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಕಿವಡೆ ಸ್ವಾಗತಿಸಿದರು.ದೇವಿಂದ್ರ ಕುಂಬಾರ ನಿರೂಪಿಸಿದರು ಹಾಗೂ ಅದೃಷ್ಟಪ್ಪ ವಾಲಿ ವಂದಿಸಿದರು.