ದುರ್ಗಾದೇವಿ ಜಾತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ರಮೇಶ ಜಾರಕಿಹೊಳಿ ಭೇಟಿ
Ramesh Jarkiholi visits Durgadevi fair inauguration program
ಯರಗಟ್ಟಿ, 09 : ನಾಡಿನಲ್ಲಿ ಸಂಸ್ಕೃತಿ, ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ದೇವಾಲಯಗಳು, ದೇವರ ಕೆಲಸಗಳನ್ನು ಭಕ್ತಾಧಿಗಳು ಮಾಡುತ್ತಿರಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನವಿಕರಣಗೊಂಡ ದುರ್ಗಾದೇವಿ ದೇವಾಲಯ ಮತ್ತು ದುರ್ಗಾದೇವಿ ಜಾತ್ರೆ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುರಾತನ ಕಾಲದ ಐತಿಹಾಸಿಕ ದೇವಸ್ಥಾನಗಳು ಜೀರ್ಣೋದ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೆವೆ ಆದರೆ ಈಗನ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮರೆತಿದೆ ಎಂದರು.ಈಗಿನ ಯುವ ಪೀಳಿಗೆಯ ಪ್ರತಿಯೊಬ್ಬರೂ ಆಚಾರ-ವಿಚಾರಗಳನ್ನು ತಿಳಿಯಬೇಕು ಹಾಗೂ ಐತಿಹಾಸಿಕ ಇತಿಹಾಸಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ನೂತನ ದೇವಸ್ಥಾನ ವೀಕ್ಷಿಸಿ ಶುಭ ಹಾರೈಸಿದರು.ಇದೇ ವೇಳೆ ಬೆಳ್ಳಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಹೊಮ ಹವನ, ನವಗೃಹ ಪೂಜೆಯನ್ನು ವೈದೀಕರಾದ ರಾಜು ಹಿರೇಮಠ, ಆಕಾಶ ಹಿರೇಮಠ, ವಿಶ್ವನಾಥ ಹಿರೇಮಠ ಇವರಿಂದ ಪೂಜಾ ವಿಧಿ ವಿಧಾನಗಳನ್ನು ನೆಡೆಸಿದ್ದರು.
ಈ ಸಂದರ್ಭಧಲ್ಲಿ ಸಾನಿಧ್ಯವನ್ನು ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ದೇವಾಲಯ ಅಭಿವೃದ್ದಿ ಸಮಿತಿಯ ಸುರೇಶ ಭಜಂತ್ರಿ, ರಾಜು ಭಜಂತ್ರಿ, ಕೃಷ್ಣಪ್ಪ ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ರುದ್ರ್ಪ ಭಜಂತ್ರಿ, ಕಾಂತು ಭಜಂತ್ರಿ, ಭೀಮಶಿ ಭಜಂತ್ರಿ, ಶಿವು ಭಜಂತ್ರಿ, ಹನುಮಂತ ಭಜಂತ್ರಿ, ಮಹೇಶ ಭಜಂತ್ರಿ, ರಫೀಕ ಡಿ. ಕೆ. ಸೇರಿದಂತೆ ಅನೇಕರು ಭಜಂತ್ರಿ ಸಾಮಾಜದ ಗುರು ಹಿರಿಯರು, ಯುವಕರು ಇದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 