ಹೈದ್ರಾಬಾದ್ ವಿಮೋಚನಾ ಹೋರಾಟದ ಸಮರ್ಥ ನಾಯಕತ್ವ ವಹಿಸಿದ್ದು ರಾಮಾನಂದ ತೀರ್ಥರು - ಪತ್ರಕರ್ತ ಶ್ರೀನಿವಾಸ ಸಿರನೂರಕರ್

ಹೈದ್ರಾಬಾದ್ ವಿಮೋಚನಾ ಹೋರಾಟದ ಸಮರ್ಥ ನಾಯಕತ್ವ ವಹಿಸಿದ್ದು ರಾಮಾನಂದ ತೀರ್ಥರು - ಪತ್ರಕರ್ತ ಶ್ರೀನಿವಾಸ ಸಿರನೂರಕರ್ Ramananda Tirtha provided effective leadership for the Hyderabad liberation struggle - Journalist Sr

 ವಿಜಯಪುರ 10: "ಭಾರತ ಬ್ರಿಟಿಷರಿಂದ ಸ್ವತಂತ್ರಗೊಂಡರೂ ಹೈದ್ರಾಬಾದ್  "ನಿಜಾಮ ಮೀರ ಉಸ್ಮಾನ ಅಲಿ ಖಾನ"  ಮಾತ್ರ ಭಾರತಕ್ಕೆ ವೀಲೀನವಾಗಲು ಹಿಂದೇಟು ಹಾಕಿದ್ದಲ್ಲದೇ , ಅವನು “ಕಾಸಿಂ ರಜವಿ' ಎಂಬ ವ್ಯಕ್ತಿಯ ಕೈಗೊಂಬೆಯಾಗಿ ರಜಾಕರ  ಸೇನೆಪಡೆಯನ್ನು ರಚೆನೆ ಮಾಡಿ ಭಾರತ ಪರಘೋಷಣೆ ಕೂಗುವವರನ್ನು  ಹತ್ಯ  ಮಾಡಿಸಲಾರಂಭಿಸಿದ. ಆಗ ರಜಾಕರ ಪಡೆಯು  ಮಕ್ಕಳು ಹಿ ಮರಿ ವೃದ್ಧರೆಂದು ನೋಡದೆ ಸಾವಿರಾರು ಜನರನ್ನು ಹತ್ಯ , ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರೆ. ಇಂತಹ ಪ್ರಕ್ಷುದ್ದ  ಸಂದರ್ಭದಲ್ಲಿ ಸಮರ್ಥ ನಾಯಕತ್ವ ವಹಿಸಿಕೊಂಡು ಮುಂಚೂಣಿಗರಾಗಿ ನಿಜಾಮ ವಿರುದ್ಧ ಹೋರಾಟ ಮಾಡಿದವರು ರಾಮಾನಂದ ತೀರ್ಥರು" ಎಂದು ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್ ಅವರು ತಿಳಿಸಿದರು. 

ರವಿವಾರ ನವೆಂಬರ್ 9 ರಂದು ನಗರದ ಪಿಡಿಜೆ ಹೈಸ್ಕೂಲ್ ಸಭಾ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿ ಆಯೋಜನೆ "ಹೈದರಾಬಾದ್ ವಿಮೋಚನಾ ರೂವಾರಿ ರಾಮಾನಂದತೀರ್ಥ ಬದುಕು ಮತ್ತು ಹೋರಾಟ' ಕಾರ್ಯಕ್ರಮದಲ್ಲಿ ಮಾತಾಡಿದ ಅವರು ' ಅಕ್ಟೋಬರ್ 3 , 1903 ರಂದು  ಸಿಂದಗಿಯಲ್ಲಿ ಜನಿಸಿದ ರಾಮಾನಂದತೀರ್ಥರ ಮೂಲ ಹೆಸರು, ವೆಂಕಟೇಶ ಭಗವಾನರಾವ್‌ಖೇಡಗಿಕರ್‌. ಬಾಲ್ಯದಿಂದಲೂ ಸನ್ಯಾಸಿಯಾಗು ಇಚ್ಛೆ ಅವರಿಗಿದ್ದು ಲೋಕಮಾನ್ಯತಿಲಕರ ಮತ್ತು ಮಹಾತ್ಮಾಗಾಂಧಿಯ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟಕ್ಕೆಧುಮುಕಿದರೇ , ಸ್ವಾಮಿರಾಮಾನಂದ ಪ್ರಭಾವಅವರನ್ನು ಸನ್ಯಾಸತ್ವಕಡೆ ಸೆಳೆಯಿತು. ಆಯಸ್ಕಾಂತೀಯ ವ್ಯಕ್ತಿತ್ವದರಾಮಾನಂದತೀರ್ಥರು  ಹೈದ್ರಾಬಾದ್ ನಿಜಾಮ ವಿರುದ್ಧ ಹೋರಾಟದ ನೇತೃತ್ವವಹಿಕೊಂಡ ಪರಿಣಾಮ ಅಂದಿನ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯ್ ಪಟೇಲರು ನಿಜಾಮನ ಸೈನಿಕ ಕಾರ್ಯಾಚರಣೆ ಮಾಡಿ ಹೈದ್ರಾಬಾದ್ ಪ್ರಾಂತ್ಯವನ್ನು  ಭಾರತಕ್ಕೆ ವೀಲೀನಗೊಳಿಸುವಲ್ಲಿ ಸಫಲರಾಗುತ್ತಾರೆ.  ಕೃಷಿ , ಭಾಷಾವಾರು ಪ್ರಾಂತ ವಿಷಯದಲ್ಲೂ ಪಿ ವಿ ನರಸಿಂಹರಾವ್ ಅವರ ಗುರುಗಳು , ಕಲಬುರಗಿಜಿಲ್ಲೆಯ ಮೊದಲ ಸಂಸದರಾದರಾಮಾನಂದತೀರ್ಥರಕೊಡುಗೆಅನನ್ಯವಾದದ್ದುಎಂದುಅವರು ವಿವರಿಸಿದರು. 

ವಿಧಾನ ಪರಿಷತ್ತಿನ ಮಾಹಿ ಸದಸ್ಯರಾದಅರುಣ ಶಹಾಪುರ ಮಾತಾಡಿ 'ರಜಾಕಾರರಕರಿ ನೆರಳು ನಮ್ಮ ವಿಜಯಪುರ ಜಿಲ್ಲೆಯ ಮೇಲೂ ಆಗಿದೆ ,ರಾಮಾನಂದ ತೀರ್ಥರ ಕುರಿತು ಕಾರ್ಯಕ್ರಮ ಅವರ ಹುಟ್ಟೂರು ಸಿಂದಗಿಯಲ್ಲಾಗಬೇಕು , ಅದಕ್ಕೆ ಬೇಕಾದ ಸಹಕಾರ ನೀಡುವೆ' ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ನಾರಾಯಣ ಬಾಬಾನಗರ ವಹಿಸಿದ್ದರು. ನಿರೂಪಣೆ - ಶ್ರೀರಂಗ ಕುಲಕರ್ಣಿ , ಪ್ರಾರ್ಥನೆ - ಬಲವಂತಕುಲಕರ್ಣಿ , ಪರಿಚಯ - ಗಂಗಾಧರ ಪತ್ತಾರ , ವಂದನಾರೆ​‍್ಣ - ಶ್ರೀಪಾದ(ದೀಪಕ)  ಪಟವರ್ಧನ್ , ಶಾಂತಿಮಂತ್ರ- ಅನಿಲ ಬಳ್ಳುಂಡಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ   ಸುಧೀಂದ್ರಟಂಕಸಾಲಿ ,  ವಿವೇಕ ಕುಲಕರ್ಣಿ ,  ಶ್ರೀರಂಗ ಪುರಾಣಿಕ , ಸುಕಾಂತ ಕುಲಕರ್ಣಿ, ರಾಮಸಿಂಗ್ ಹಜೇರಿ , ಬಾಬುರಾವಕುಲಕರ್ಣಿ, ಚಿದಂಬರ ಪಾಟೀಲ , ರಾಘವೇಂದ್ರಆಲೂರು  , ಸುಭಾಷ್‌ಕನ್ನೂರು ,ಮಯೂರತಿಳಗೂಳಕರ್ , ಪ್ರಶಾಂತಕುಲಕರ್ಣಿ , ರವೀಂದ್ರ ಹಲ್ಯಾಳ , ಕೇಶವ ಕುಲಕರ್ಣಿ ,   ಬಿ ಎಸ್‌ಕುಲಕರ್ಣಿ , ಆರ್ ಬಿ ಕುಲಕರ್ಣಿ , ಸಂಜೀವ ಸಿರನೂರಕರ್   ,ಬಸವರಾಜಆಲೂರು ,ಜಗದೀಶ್‌ಗುಲಗಂಜಿ , ಕಲ್ಯಾಣರಾವದೇಶಪಾಂಡೆ , ಮಂಜುನಾಥ ಹಳ್ಳಿಸೇರಿದಂತೆ ಅನೇಕರು ಉಪಸ್ಥಿತರಿದ್ದರು.