ಶಿರಹಟ್ಟಿಯಲ್ಲಿ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ
Ramadan celebrated with fervor in Shirahatti
ಶಿರಹಟ್ಟಿ 21: ಪಟ್ಟಣದಲ್ಲಿ ಈದುಲ್ ಫಿತ್ರ್ ಸಂಭ್ರಮ. ಈದ್ಗಾ ಮಸೀದಿಯಲ್ಲಿ ನಮಾಝ್ ಪಾಲ್ಗೊಂಡು ಶಾಂತಿ ಸೌಹಾರ್ದ ಸಂದೇಶ ನೀಡಿದ ಮುಸ್ಲಿಂ ಬಾಂಧವರು, ಬಳಿಕ ಅವರು ಈದುಲ್ ಫಿತ್ರ್ ಸಂದೇಶ ನೀಡಿ, ಪ್ರೀತಿ, ಸೋದರತೆ, ಸಹಬಾಳ್ವೆ, ಪರಸ್ಪರ ವಿಶ್ವಾಸ, ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತದ ನಿರ್ಮಾಣವೇ ನಮ್ಮ ಪ್ರತಿಯೊಂದು ಹಬ್ಬದ ಸಂದೇಶ ಎಂದು ಸಾರಿದರು.
ಈ ವೇಳೆಯಲ್ಲಿ ಮಾತನಾಡಿದ ಹಜರತ ಮಜಹರಖಾನ ಪಠಾನ ರಂಜಾನ್ ಕೇವಲ ಮುಸ್ಲಿಂ ಸಮುದಾಯದ ಹಬ್ಬವಲ್ಲ; ಅದು ಮಾನವೀಯತೆ, ಸಹನೆ ಮತ್ತು ದೈವಭಕ್ತಿಯ ಸಂಕೇತವಾಗಿರುವ ಶಿಸ್ತು, ಆತ್ಮಾವಲೊಕನ ಮತ್ತು ಮೌಲ್ಯಗಳ ಪುನರ್ ಸ್ಥಾಪನೆಯ ಮಹಾನ್ ಕಾಲಘಟ್ಟ. ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳಾದ ಈ ಮಾಸವು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೊಲನದಲ್ಲಿ ರೂಪಿಸುವ ಅಪೂರ್ವ ಅವಕಾಶವಾಗಿದೆ ಎಂದರು.
ನಂತರ ಅಹಂಕಾರವನ್ನು ತೊರೆದು, ಸರಳತೆಯನ್ನು ಅಪ್ಪಿಕೊಂಡು, ಬಡವರ ನೊವಿಗೆ ಸ್ಪಂದಿಸುವ ಮನಸ್ಸನ್ನು ಬೆಳೆಸುವುದು ಇದರ ಉದ್ದೆ?ಶ. ಈ ಹಬ್ಬದಲ್ಲಿ ಇರುವ ಉಪಾಸನದಿಂದ ಸುಳ್ಳು, ಕೋಪ, ಅಸೂಯೆ ಮತ್ತು ದ್ವೇಷದಿಂದ ದೂರವಿದ್ದು, ಪ್ರೀತಿ, ಸಹನೆ ಮತ್ತು ಸತ್ಯದ ಮಾರ್ಗದಲ್ಲಿ ನಡೆದುಕೊಳ್ಳುವುದೇ ನಿಜವಾದ ಉಪವಾಸದ ಅರ್ಥವನ್ನು ನೀಡುತ್ತದೆ.
ಈ ರಂಜಾನ್ ತಿಂಗಳುವು ಕೇವಲ ಮುಸ್ಲಿಮರಿಗಷ್ಟೆ ಪವಿತ್ರ ಅಲ್ಲ, ಸಂಪೂರ್ಣ ಮಾನವಕುಲಕ್ಕೆ ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶವನ್ನು ನೀಡುತ್ತದೆ. ರಂಜಾನ್ ನಮಗೆ ಒಳ್ಳೆಯ ಮನುಷ್ಯರಾಗಲು ಕಲಿಸುವ ಶಾಲೆಯಾಗಿದೆ. ಸದರಿ ಹಬ್ಬಗಳು ಕೇವಲ ಸಂಭ್ರಮಕ್ಕಾಗಿ ಅಲ್ಲ ಅವು ಮನುಷ್ಯನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಲು ಬರುತ್ತವೆ.
ಹಬ್ಬಗಳು ಕೇವಲ ಬೆಳಕು ನೀಡುವುದಿಲ್ಲ; ಅವು ಒಳಗಿನ ಅಂಧಕಾರವನ್ನು ದೂರ ಮಾಡುತ್ತವೆ. ಆದ್ದರಿಂದ ರಂಜಾನ ನಮಗೆ ಕಲಿಸಿದ ಪಾಠಗಳನ್ನು ಕೇವಲ ಒಂದು ತಿಂಗಳಿಗೆ ಸೀಮಿತಗೊಳಿಸದೆ,ಪ್ರತಿದಿನದ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಪ್ರೀತಿ, ಸಹನೆ, ದಯೆ ಮತ್ತು ಸತ್ಯದ ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ನಿರ್ವಣಕ್ಕೆ ಕೈಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಹಜರತ ಮಜಹರಖಾನ ಪಠಾನ, ಕಾಶಿಮಶ್ಯಾ ಮಕಾನದಾರ, ಜಕಾವುಲ್ಲಾ ಮಾಗಡಿ,ಬುಡನಶ್ಯಾ ಮಕನದಾರ್, ಬಾಬುಸಾಬ ಮಾಚೇನಹಳ್ಳಿ, ಎನ್ ವೈ ಮಕಾನದಾರ, ರೀಯಾಜ್ ತಹಶೀಲ್ದಾರ್, ರೀಯಾಜ್ ಲಕ್ಷ್ಮೇಶ್ವರ,ಬಶೀರ ಪಟಾವೇಗಾರ,ಹೈದರಅಲಿ ಮನಿಯಾರ,ಜಾಫರ್ ಕೋಳಿವಾಡ ಹಾಗೂ ಶಿರಹಟ್ಟಿ ಜಮಾತಿನ ಹಿರಿಯರು ಯುವಕರು ಮಕ್ಕಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 