ಕುಷ್ಟಗಿ ಚಾಳದ ಅಮೃತ ಶಿಲೆಯ ಶ್ರೀರಾಮ ಮಂದಿರದಲ್ಲಿ ವಿಜೃಂಭಣೆಯಿಂದ ರಾಮನವಮಿ ಆಚರಣೆ...
Ram Navami celebrated with pomp and show at the marble Sri Rama temple in Kushtagi Chala...
ಗದಗ 28 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧ ಅಮೃತ ಶಿಲೆಯ ಶ್ರೀರಾಮ ಮಂದಿರದಲ್ಲಿ ಅರ್ಥಪೂರ್ಣವಾಗಿ ಭಕ್ತರಿಂದ ವಿಜೃಂಭಣೆಯಿಂದ ರಾಮ ನವಮಿಯನ್ನು ಆಚರಿಸಲಾಯಿತು.ಶುಕ್ರವಾರ ರಾಮನವಮಿ ಅಂಗವಾಗಿ ಕುಷ್ಟಗಿ ಕುಟುಂಬ ಸ್ಥಾಪನೆ ಮಾಡಿದ 96 ವರ್ಷ ಇತಿಹಾಸ ಇರುವ ಬೆಟಗೇರಿಯ ಪ್ರಸಿದ್ಧ ಅಮೃತ ಶಿಲೆಯ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ, ಹನುಮದೇವ ಮತ್ತು ಗರುಡನ ಸುಂದರ ಆಕರ್ಷಕ ಮೂರ್ತಿ ಹೊಂದಿರುವ ಶ್ರೀರಾಮಮಂದಿರದಲ್ಲಿ ಸಾವಿರಾರು ಭಕ್ತರು ಹೋಮ, ಹವನ ಮತ್ತು ವಿಶೇಷ ಅಲಂಕಾರಿಕ ಪೂಜೆಯೊಂದಿಗೆ ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲು ತೂಗಿ ಶ್ರೀರಾಮನ ಜನುಮ ದಿನ ಆಚರಿಸಿದರು. ಅಯೋದ್ಯಾ ಶ್ರೀರಾಮ ಜನ್ಮ ಸ್ಥಳದ ಸಂಬಂಧವನ್ನು ಹೊಂದಿರುವ ಬೆಟಗೇರಿ ಕುಷ್ಟಗಿ ಚಾಳದಲ್ಲಿ ರಾಮ ಮಂದಿರದಲ್ಲಿ ರಾಮನವಮಿ ಅಂಗವಾಗಿ ಬೆಳಗಿನಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ಭಕ್ತರು ಲೋಕ ಕಲ್ಯಾಣಕ್ಕಾಗಿ ನಡೆಸಿದ ಹೋಮದಲ್ಲಿ ಪಾಲ್ಗೊಂಡರು.
ನಂತರ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀರಾಮನ ಕಂಚಿನ ಮೂರ್ತಿಯನ್ನು ಧಾರ್ಮಿಕ ವಿಧಾನಗಳೊಂದಿಗೆ ಅರ್ಚಕರು ಮತ್ತು ಮಹಿಳೆಯರು, ಭಕ್ತರು ಸೇರಿ ತೊಟ್ಟಿಲಿಗೆ ಹಾಕಿ ವಿವಿಧ ವಾದ್ಯಗಳೊಂದಿಗೆ ಶ್ರೀರಾಮನ ಭಜನೆಯಲ್ಲಿ ತೊಟ್ಟಿಲು ತೂಗಿ ಶ್ರೀರಾಮನ ಜನುಮ ದಿನ ಆಚರಿಸಿದರು.ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ನಂತರ ಕೊಸಂಬರಿ ಮತ್ತು ಪಾನಕಾ ಭಕ್ತರು ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು.ಶ್ರೀರಾಮ ನವಮಿ ಅಂಗವಾಗಿ ಶನಿವಾರ ಸೀತಾ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ ಪ್ರಧಾನ ಅರ್ಚಕರಾದ ದೀವಾಕರ ದೀಕ್ಷಿತ, ಮತ್ತು ಟ್ರಸ್ಟಿಗಳಾದ ಕೊದಂಡರಾಮ ಕುಷ್ಟಗಿ, ನವೀನ ಕುಷ್ಟಗಿ, ಭರತ ಕುಷ್ಟಗಿಯವರು ಸದ್ಭಕ್ತರು ಸೀತಾಕಲ್ಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕ ಅನ್ನಸಂತರೆ್ಣಯ ಪ್ರಸಾದ ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 