ಪತಂಜಲಿ ಯೋಗ ಕಕ್ಷೆಯಲ್ಲಿ ರಕ್ಷಾಬಂಧನ

ಪತಂಜಲಿ ಯೋಗ ಕಕ್ಷೆಯಲ್ಲಿ ರಕ್ಷಾಬಂಧನ Rakshabandhan at the Patanjali Yoga

ಗದಗ 13: ನಗರದ ಮುನಸಿಪಲ್ ಮೈದಾನದಲ್ಲಿ ನಡೆಯುವ ನಿರಂತರ ಉಚಿತ ಯೋಗ ಕಕ್ಷೆಯಲ್ಲಿ ಇಂದು ಬೆಳಿಗ್ಗೆ ಏರ​‍್ಡಸಿದ ವಿಶೇಷ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕನವರಾದ ಬ್ರಹ್ಮಕುಮಾರಿ ರೇಖಾ ಅಕ್ಕನವರು ಮಾತನಾಡಿ ಈ ಜಗತ್ತಿಗೆ ಮುಖ್ಯವಾಗಿ ಬೇಕಾಗಿದ್ದು ಶಾಂತಿ. ಅದನ್ನು ನಾವು ಹುಡುಕುವ ಪ್ರಯತ್ನ ಮಾಡದೇ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು.  

ಅಂದರೆ ನಮ್ಮಲ್ಲಿರುವ ಕಾಮ, ಕ್ರೋದ, ಮದ, ಮತ್ಸರ, ಅಹಂಕಾರ, ನಕಾರಾತ್ಮಕ ಚಿಂತನೆಯಂತ ಕೆಟ್ಟ ಗುಣಗಳನ್ನು ಬಿಟ್ಟು, ಸ್ನೇಹ, ಪ್ರೀತಿ, ಸಕಾರಾತ್ಮಕ ಚಿಂತನೆ ಇವುಗಳನ್ನು ಬೆಳೆಸಿಕೊಂಡು, ಪ್ರತಿದಿನ ಈಶ್ವರಿಯ ಜ್ಞಾನವನ್ನು ಪಡೆದುಕೊಳ್ಳಬೆಕು.  ಪರಮಾತ್ಮನ ,ಮಕ್ಕಳಾದ ನಾವು ನೀವೆಲ್ಲರೂ ಸಹೋದರ ಸಹೋದರಿಯರು. ಹೆಣ್ಣು ಮಕ್ಕಳಿಗೆ ಸಹೋದರರಿಂದ ರಕ್ಷಣೆ ಅವಶ್ಯಕತೆ ಹೇಗೆ ಇದೆಯೋ, ಅದೇ ರೀತಿ ಸಹೋದರರಿಗೂ ಸಹೋದರಿಯರಿಂದ ರಕ್ಷಣ ಅವಶ್ಯವಿದೆ. ಪರಮಪಿತ ಪರಮಾತ್ಮ ರಕ್ಷಾಬಂಧನ ಕಾರ್ಯಕ್ರಮದಲ್ಲಿ ತಮ್ಮನ್ನು ಆಯ್ಕೆ ಮಢಿಕೊಂಡದ್ದು ತಾವುಗಳೇ ಧನ್ಯರು ಎಂದು ಶುಭ ಹಾರೈಸಿ ಯೋಗ ಕಕ್ಷೆಯಲ್ಲಿ  ಎಲ್ಲ ಸಾಧಕರಿಗೂ ರಾಖಿ ಕಟ್ಟಿ ಸಿಹಿ ವಿತರಿಸಿದರು. 

ಪ್ರಾರಂಭದಲ್ಲಿ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿಗಳಾದ ಗಿರಿಯಪ್ಪ ಮಡಿವಾಳರ ಸರ್ವರನ್ನು ಸ್ವಾಗತಿಸಿದರು, ಕೊನೆಯಲ್ಲಿ ಪತಂಜಲಿ ಯೋಗ ಸಮಿತಿಯ ಕಾರ್ಯದರ್ಶಿ ನಾಗರತ್ನಾ ಬಡಿಗಣ್ಣವರ ವಂದಿಸಿದರು.  ವೇದಿಕೆಯ ಮೇಲೆ ಜಿಲ್ಲಾ ಖಜಾಂಚಿಗಳಾದ ಕೆ.ಎಸ್‌.ಗುಗ್ಗರಿ, ಹಿರಿಯ ಯೋಗ ಶಿಕ್ಷಕರಾದ ವೆಂಕಟೇಶ ಮೆರವಾಡೆ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಎಸ್‌.ಎನ್‌.ಬಳ್ಳಾರಿ, ಹಿರಿಯ ಯೋಗ ಶಿಕ್ಷಕಿ ಬಸಮ್ಮ ಡಗಲಿ, ಹಿರಿಯ ಯೋಗ ಶಿಕ್ಷಕಿ ಶೋಭಾ ಬೆಂಗಳೂರು ಉಪಸ್ಥಿತರಿದ್ದರು. ಭಾರತ ಸ್ವಾಭಿಮಾನ ಟ್ರಸ್ಟ ಸಹಪ್ರಭಾರಿ ಬಸವರಾಜ ಹಿರೇಮಠ, ಕಿಸಾನ ಪಂಚಾಯತ ಜಿಲ್ಲಾ ಪ್ರಭಾರಿ ಪ್ರಮೋದ ಬೇಲಿ, ಮಹಿಳಾ ಸಂಘಟನಾ ಪ್ರಭಾರಿ ಲಕ್ಷ್ಮಿ ಗುರಿಕಾರ, ಬೇರೆ ಬೇರೆ ಕಕ್ಷೆಯಿಂದ ಸಮಸ್ತ ಯೋಗ ಸಾಧಕರು ಉಪಸ್ಥಿರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.