ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ Raksha Bandhan program at Prajapita Brahmakumari Ishwari Vidyalaya

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ 

ಕುಕನೂರ 06: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಗಳು ಮತ್ತು ಸೇವಾ ಕೇಂದ್ರಗಳು ಮನುಷ್ಯನಲ್ಲಿ ಮನಶಾಂತಿ ತುಂಬುತ್ತವೆ ಎಂದುದಕ್ಷಿಣ ಕನ್ನಡ ಮಂಗಳೂರಿನ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಸೇವಾ ಸಂಚಾಲಕರಾದ ಬ್ರಹ್ಮಕುಮಾರಿ ವಿಶ್ವೇಶ್ವರಿ ಅಕ್ಕನವರು  ಕುಕನೂರು ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಸೇವಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ನೆರವೇರಿಸುವ ಮೂಲಕ ಮಾತನಾಡಿಪ್ರತಿಯೊಬ್ಬರು ಹಣ ಆಸ್ತಿ ಎಷ್ಟಿದ್ದರೇನು  ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯವಿರುವುದು ನೆಮ್ಮದಿ ಮತ್ತು ಮನಶಾಂತಿ. ಅಂತಹ ಶಾಂತಿಯನ್ನು ಮತ್ತು ನೆಮ್ಮದಿಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯಗಳು ಪ್ರತಿಯೊಬ್ಬರಲ್ಲಿ ಮನಶಾಂತಿ ನೆಮ್ಮದಿ ಸಿಗುವ ಹಾಗೆ ಕಾರ್ಯಗಳನ್ನು ಮಾಡುತ್ತವೆ. ಈಗಿನ ಪ್ರಸ್ತುತ ದಿನಮಾನಗಳಲ್ಲಿ ಒತ್ತಡದ ಬದುಕು, ಮೈಗೂಡಿಸಿಕೊಂಡವರು, ಈಶ್ವರಿ ವಿದ್ಯಾಲಯದಲ್ಲಿರುವ ಜ್ಞಾನ ಸಂಪತ್ತು ಪಡೆದುಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕಾದರೆ. ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಲ್ಲಿ ಉಚಿತವಾಗಿ ಪ್ರಾಪ್ತಿಯಾಗುವ ಶಿವನ ಜ್ಞಾನ, ಯೋಗ ಏಕಾಗ್ರತೆ ಪಡೆದುಕೊಳ್ಳಬೇಕು.ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ರಕ್ಷಾಬಂಧನ ಆಚರಣೆಯು, ಈ ಹಬ್ಬದ ಆಧ್ಯಾತ್ಮಿಕ ಮಹತ್ವವನ್ನು ಒತ್ತಿ ಹೇಳುತ್ತದೆ ಮತ್ತು ಶಾಂತಿ ಪ್ರೀತಿ ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ನೀಡುವ ಸಂದೇಶವಾಗಿದೆ ಎಂದರು.ನಂತರ ಮಾತನಾಡಿದ ಕುಕನೂರು ಪಟ್ಟಣದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ಸುನಂದಕ್ಕ ಮಾತನಾಡಿ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಜಾಪಿತ ಬ್ರಹ್ಮಕುಮಾರಿ ಸೇವಾ ಕೇಂದ್ರದ ದಕ್ಷಿಣ ಕನ್ನಡ ಮಂಗಳೂರಿನ ವಿಶ್ವೇಶ್ವರಿ ಅಕ್ಕನವರು ಒಳ್ಳೆಯ ಮಾರ್ಗದರ್ಶನಗಳನ್ನು ನೀಡಿ ಮಾತನಾಡಿದರು ಪ್ರತಿಯೊಬ್ಬರು ಶಾಂತಿ ನೆಮ್ಮದಿ ಪಡೆಯಬೇಕಾದರೆ ಶಿವ ಬಾಬಾ  ಅವರ ಶಿವ ಜ್ಞಾನ, ಯೋಗ ಅಂತವುಗಳಿಂದ ಮನಸ್ಸಿನಲ್ಲಿ ಶಾಂತಿಯನ್ನು ಪಡೆದುಕೊಳ್ಳಬಹುದು ಎಂದರು.ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಆಶ್ರಮದ ಚಂದ್ರಣ್ಣ,ವೀರಯ್ಯ ಹಿರೇಮಠ, ಶಿವಪ್ಪ ತಟ್ಟಿ, ಗಂಗಾಧರ ಜತ್ತಿ, ಸುರೇಶಣ್ಣ, ಶರಣಪ್ಪ, ಶ್ರೀದೇವಿ ಅಕ್ಕನವರು, ಶಕುಂತಲಾ ಅಕ್ಕ, ರೇಣುಕಾ ಅಕ್ಕ, ಪದ್ಮಕ್ಕ, ಸಾವಿತ್ರಿ ಅಕ್ಕ, ಕಾಳಮ್ಮಕ್ಕ, ಸರೋಜಕ್ಕ, ಗಿರಿಜಕ್ಕ, ಮಂಜುಳಕ್ಕ, ನಿಂಗಪ್ಪ ಕಂಬಳಿ, ಸೋಮಶೇಖರ, ಶಶಿಕಲಾ ಅಕ್ಕನವರು, ಶಿವಲೀಲಕ್ಕ, ಮತ್ತು ಸಹೋದರ ಸಹೋದರಿಯರು ಮಕ್ಕಳು ಇತರರು ಇದ್ದರು.ವರದಿ ಚನ್ನಯ್ಯ ಹಿರೇಮಠ ಕುಕನೂರು