ಮಹಾಲಿಂಗಪೂರ : ರಕ್ಷಾ ಬಂಧನದ ಅಂಗವಾಗಿ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಸುವಣರ್ಾ ಮಹಿಳಾ ಸಂಘ ಹಾಗೂ ಬಿಜೆಪಿ ಮಹಿಳಾ ಮೋಚರ್ಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಊರಿನ ಕೆಲ ಯುವಕರಿಗೆ ರಾಖಿಯನ್ನು ಕಟ್ಟುವ ಮುಖಾಂತರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.
ಠಾಣಾಧಿಕಾರಿ ರವಿಕುಮಾರ್ ಧರ್ಮಟ್ಟಿ ರಕ್ಷಾ ಬಂಧನ ಸ್ವೀಕರಿಸಿ ಮಾತನಾಡುತ್ತಾ ಹಬ್ಬವು ಜಾತಿ,ಬೇಧ ಹೋಗಲಾಡಿಸಿ ಸಹೋದರತೆಯ ಭಾವವನ್ನು ಬಿಂಬಿಸುವುದಾಗಿದೆ. ನಮ್ಮ ದೇಶದಲ್ಲಿ ಸಂಬಂಧಗಳಿಗಿರುವ ಮಹತ್ವ ಜಗತ್ತಿನ ಯಾವ ದೇಶದಲ್ಲಿಯೂ ಕಂಡು ಬರುವುದಿಲ್ಲ.
ಈ ಕಾರ್ಯಕ್ರಮದ ಉಸ್ತುವಾರಿಯನ್ನು ಸಂಘದ ಹಾಗೂ ನಗರ ಬಿಜೆಪಿ ಮಹಿಳಾ ಮೋಚರ್ಾ ಅಧ್ಯೆಕ್ಷೆ ಸುವರ್ಣ ಆಸಂಗಿ ನೆರೆವೇರಿಸಿದರು.
ಈ ಸಮಯದಲ್ಲಿ ನಾಗಪ್ಪ ಭಜಂತ್ರಿ, ಹಣ್ಮಂತ್, ಪ್ರಶಾಂತ್, ಬಸವರಾಜ್, ರೂಪಾ ರಾಚಣ್ಣವರ್ಮಿನಾಕ್ಷಿ ಹಿರೇಮಠ, ವಿಜಯಲಕ್ಶ್ಮಿ ಕುಳ್ಳೋಳ್ಳಿ, ಮಹಾದೇವಿ, ಹೇಮಾ, ರೇಣುಕಾ, ಸವಿತಾ ಹುರಕಡ್ಲಿ, ನಂದಿನಿ, ಇದ್ದು ಶಾರದಾ ವಂದಿಸಿದರು.