ರಾಜ್ಯೋತ್ಸವ: 8ರಂದು ಕರೋಕೆ ಕನ್ನಡ ಹಾಡು, ಭಾವಗೀತೆಗಳು
Rajyotsava: Karaoke Kannada songs and lyrics on the 8th
ಬೆಳಗಾವಿ 05: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 8 ಶನಿವಾರದಂದು ಸಾಯಂಕಾಲ 4.30 ಕ್ಕೆ ನಗರದ ಚೆನ್ನಮ್ನ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯೋತ್ಸವ ನಿಮಿತ್ತ "ಕರೋಕೆ ಕನ್ನಡ ಹಾಡುಗಳು - ಭಾವಗೀತೆಗಳು" ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಹಿರಿಯ ಕವಿ ಪ್ರೊ. ಎಂ. ಎಸ್. ಇಂಚಲ ವಹಿಸಿಕೊಂಡಿದ್ದಾರೆ. ಉಸಿರಾಗಲಿ ಕನ್ನಡ ವಿಷಯ ಕುರಿತಂತೆ ಎಂ. ಬಿ. ಹೊಸಳ್ಳಿ ಮಾತನಾಡಲಿದ್ದಾರೆ. ಅತಿಥಿಗಳಾಗಿ ಸ್ವರಾಂಜಲಿ ಕರೋಕೆ ಶಾಲೆ ಸಂಸ್ಥಾಪಕರಾದ ಚಂದ್ರಶೇಖರ ಹಿರೇಮಠ ಆಗಮಿಸಲಿದ್ದಾರೆ. ಖ್ಯಾತ ನಗೆಮಾತುಗಾರ ಪ್ರೊ. ಜಿ. ಕೆ. ಕುಲಕರ್ಣಿಯವರು ಬಾಷಾ ವಿನೋದಗಳಿಂದ ರಂಜಿಸಲಿದ್ದು ಪ್ರಾಯೋಜಕತ್ವವನ್ನು ಚಿದಂಬರ ಮುನವಳ್ಳಿ ವಹಿಸಿಕೊಂಡಿದ್ದಾರೆ.
ನಾಡು ನುಡಿ ಕುರಿತಾದ ಹಾಡು ಮತ್ತು ಭಾವಗೀತೆಗಳನ್ನು ಗುಂಡೇನಟ್ಟಿ ಮಧುಕರ, ಜಿ. ಎಸ್. ಸೋನಾರ, ಎಂ. ಬಿ. ಹೊಸಳ್ಳಿ, ಚಂದ್ರಶೇಖರ ಹಿರೇಮಠ, ಚಂದ್ರಕಾಂತ ಅಪ್ಪಣ್ಣವರ, ಪ್ರೇಮಾ ಎಸ್. ಹಾಡಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 