ರಾಜ್ಯಸಭೆ ಸದಸ್ಯ ಮಾ. ನಾಗರಾಜ ಅವರಿಗೆ ದಂಡಿನ ಕುಟುಂಬದವರಿಂದ ಸನ್ಮಾನ

ರಾಜ್ಯಸಭೆ ಸದಸ್ಯ ಮಾ. ನಾಗರಾಜ ಅವರಿಗೆ ದಂಡಿನ ಕುಟುಂಬದವರಿಂದ ಸನ್ಮಾನ  Rajya Sabha member M. Nagaraja honored by Dandi family

ಲೋಕದರ್ಶನ ವರದಿ 

ಗದಗ  25 :   ಇತ್ತೀಚಿಗೆ ರಾಜ್ಯಸಭೆಯ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಪ್ರೋ. ಮಾ. ನಾಗರಾಜ ಅವರು ನಗರದ ಬಿ.ಎಫ್‌.ದಂಡಿನ ಅವರ ನಿವಾಸಕ್ಕೆ  ಆಗಮಿಸಿ ಅವರ ಆರೋಗ್ಯ, ಕುಶಲೋಪಹಾರಿ ವಿಚಾರಿಸಿದರು.  ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ ದಂಡಿನ ಹಾಗೂ ಕುಟುಂಬದವರು ರಾಜ್ಯಸಭೆಯ ನೂತನ ಸದಸ್ಯರಾದ ಮಾ. ನಾಗರಾಜ ಅವರನ್ನು ಸನ್ಮಾನಿಸಿದರು.