ವಿಜಯಪುರ 27: ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ-5 ನೇಯ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ರಾಜು ಮಾನೆ ಇವರು ಇತ್ತೀಚೆಗೆ ಭುವನೇಶ್ವರಿಯಲ್ಲಿ ಜರುಗಿದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ರಾಜು ಮಾನೆ ಇವರು ಮೂಲತಃ ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ಗ್ರಾಮೀಣ ಪ್ರತಿಭೆ. ಇವರು ಈ ಯೋಗಾಸನ ಸ್ಪರ್ಧೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯೋಗಪಟುವಾಗಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.
ಈ ಗ್ರಾಮೀಣ ಪ್ರತಿಭೆ ರಾಜು ಮಾನೆ ಇವರ ಕ್ರೀಡಾ (ಯೋಗ )ಸಾಧನೆಗೆ ಕಾಲೇಜಿನ ಅಭಿವೃದ್ಧಿ ಸಮೀತಿ ಅಧ್ಯಕ್ಷರೂ ಹಾಗೂ ವಿಜಯಪುರ ನಗರದ ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ. ಆರ್. ಪಾಟೀಲ (ಯತ್ನಾಳ) ಇವರು ಹಾಗೂ ಕಾಲೇಜಿನ ಸಿ,ಡಿ.ಸಿ. ಸದಸ್ಯರು, ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ಕ್ರೀಡಾ ನಿರ್ದೇಶಕ ಪ್ರೊ. ಸಂಗಮೇಶ ಗುರವ, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಸಂತೋಷ ಕಬಾಡೆ, ಕ್ರೀಡಾ ಸಮೀತಿಯ ಸದಸ್ಯರಾದ ಡಾ. ರಾಜಶ್ರೀ ಮಾರನೂರ, ಡಾ. ಚಂದ್ರಕಾಂತ. ಬಿ. ಪ್ರೊ. ಎಂ.ಎಸ್.ಖೊದ್ನಾಪೂರ, ಡಾ. ಎಸ್.ಪಿ.ಚವ್ಹಾಣ, ಪ್ರೊ. ಎಸ್.ಡಿ.ತೋಂಟಾಪೂರ ಡಾ. ದೇವೆಂದ್ರಗೌಡ ಹಾಗೂ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಯೋಗ ಪಟು ರಾಜು ಮಾನೆ ಮನದಾಳದ ಮಾತು:
ಯೋಗ ಪಟು ಆಗಬೇಕೆಂಬ ಕನಸು ಕಂಡ ನಾನು ಮನೆಯಲ್ಲಿಯೇ ನನ್ನಷ್ಟಕ್ಕೆ ನಾನೇ ಯೋಗಾಸನಗಳನ್ನು ಮಾಡುತ್ತಿದ್ದೆ. ನಂತರ ಯೋಗ (ಕ್ರೀಡೆ) ಕ್ಷೇತ್ರದಲ್ಲಿಯೇ ಏನನ್ನಾದರೂ ಸಾಧನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಮನದಲ್ಲಿ ಮೂಡಿದಾಗ ನನಗೆ ಮಡಿವಾಳ ದೊಡಮನಿ ಸರ್ ಅವರು ಗುರುಗಳಾಗಿ ಯೋಗ ಮತ್ತು ಯೋಗಾಸನದಲ್ಲಿ ಇಷ್ಟೆಲ್ಲ ಸಾಧನೆ ಮಾಡಲು ತರಬೇತಿ ನೀಡಿದ್ದಾರೆ, ಅಷ್ಟೇ ಅಲ್ಲದೇ ನನ್ನ ಈ ಸಾಧನೆಗೆ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಎಲ್ಲ ಪ್ರಾಧ್ಯಾಪಕರ ಮಾರ್ಗದರ್ಶನ ಮತ್ತು ಪ್ರೇರಣೆಯೇ ಸ್ಪೂರ್ತಿ” ಎಂದು ಅಬಿಪ್ರಾಯಪಟ್ಟರು.