ಗಡಿಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಕಸಾಪ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಆಗ್ರಹ

ಕಾರವಾರ ಕನ್ನಡ ಭವನ ‌ಕಸಾಪ

ಕಾರವಾರ ಕನ್ನಡ ಭವನದಲ್ಲಿ ಕನ್ನಡ ರಾಜ್ಯೋತ್ಸವ :


ಗಡಿಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಕಸಾಪ ಅಧ್ಯಕ್ಷ  ನಾಗರಾಜ ಹರಪನಹಳ್ಳಿ  ಆಗ್ರಹ



ಕಾರವಾರ: ಇಲ್ಲಿನ ಕನ್ನಡ ಭವನದ ಬಳಿ  ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‌ಕಾರವಾರ ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದ ತಾಲ್ಲೂಕಾ ಕಸಾಪ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಗಡಿಭಾಗದಲ್ಲಿ ಕನ್ನಡ ಅನ್ನ ನೀಡುವ ಭಾಷೆ ಎಂದು ಇಲ್ಲಿನ ಜನತೆಯಲ್ಲಿ ಭರವಸೆ ಹುಟ್ಟಿಸಲು ಸರ್ಕಾರ ಗಡಿ ಕನ್ನಡಿಗರಿಗೆ ಉದ್ಯೋಗದಲ್ಲಿ  ಮೀಸಲಾತಿ ನೀಡಬೇಕು ಎಂದರು. ೧೯೦೫ ರಿಂದ ೧೯೨೦ರಲ್ಲಿ ಕರ್ನಾಟಕ ಏಕೀಕರಣದ ಹೋರಾಟ ಪ್ರಾರಂಭವಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಹೋರಾಟ ನಾಡು ಒಗ್ಗೂಡುವಿಕೆಯಲ್ಲಿ ಮಹತ್ವದ್ದು, ಇದನ್ನು ನಾವು ಯುವ ಜನತೆಗೆ ತಿಳಿಸಬೇಕಿದೆ ಎಂದರು.

ನಾಡು ನುಡಿ ಹಾಗೂ ಏಕೀಕರಣಕ್ಕಾಗಿ ನಡೆದ ಹೋರಾಟ ಮರೆಯುವಂಥದ್ದಲ್ಲ. ಆಲೂರು ವೆಂಕಟರಾಯರು, ರಾ.ಲ.ದೇಶಪಾಂಡೆ ಅವರ ಹೋರಾಟ ಹಾಗೂ ನಿಜಲಿಂಗಪ್ಪ  ಮತ್ತು ದೇವರಾಜು ಅರಸು ಅವರು ನೆನೆಪಿಟ್ಟುಕೊಳ್ಳುವಂತಹ ಆಡಳಿತ ನೀಡಿದವರು. ಕರ್ನಾಟಕ ನಾಮಕರಣದಿಂದ ಹಿಡಿದು ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು. ಇದರ ಜೊತೆಗೆ ಈಗ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಕರ್ನಾಟಕ ಸರ್ಕಾರಕ್ಕೆ ನೀಡಬೇಕಾದ ಅನುದಾನ ನೀಡುತ್ತಿಲ್ಲ. ಈ ಧೋರಣೆ ಸರಿಯಲ್ಲ. ಜನ ಮತ್ತು ಅಕ್ಷರ ಬಲ್ಲವರು ಸಹ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದ ಹಕ್ಕಿಗಾಗಿ ಒತ್ತಾಯಿಸಬೇಕಿದೆ .ಅಲ್ಲದೇ ಭಾರತ ಒಕ್ಕೂಟದ ದೇಶ. ಇಲ್ಲಿ ಹಲವು ಭಾಷೆ ಸಂಸ್ಕೃತಿಗಳ ರಾಜ್ಯಗಳಿವೆ. ಇಂಥ ಸನ್ನಿವೇಶದಲ್ಲಿ ಭಾಷಾವಾರು ಪ್ರಾಂತ ರಚನೆಯ ಮಹತ್ವವನ್ನು ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ನಾಗರಾಜ ಹರಪನಹಳ್ಳಿ ಹೇಳಿದರು. 

ರಾಜಸ್ಥಾನಿ ಬಾಲಕನಿಗೆ ಸನ್ಮಾನ:

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಕಲಿತು ಪ್ರಸ್ತಕ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೧೫ ಅಂಕಗಳಿಸಿದ ಲಲಿತ್‌ಎಂಬ ರಾಜಸ್ಥಾನಿ ಮೂಲದ ಬಾಲಕ ಲಲಿತ್‌ನನ್ನು ಪ್ರೋ.ಕೇರಳೀಕರ್‌ಕಸಾಪ ವತಿಯಿಂದ ಸನ್ಮಾನಿಸಿದರು. ಲಲಿತ್‌ಸುಶ್ರಾವ್ಯವಾಗಿ ಕುವೆಂಪು ಬರೆದ ನಾಡಗೀತೆ ಜೈ ಭಾರತ ಜನನಿಯ ತುನುಜಾತೆ ಜಯಯೇ ಕರ್ನಾಟಕ ಮಾತೆ ಹಾಡನ್ನು ಈ ಸಂದರ್ಭದಲ್ಲಿ ಹಾಡಿದ. 

ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ  ಕಸಾಪ ಕಾರ್ಯದರ್ಶಿ ಗಜಾ ಸುರಂಗೇಕರ್‌, ಉದಯ ಬರ್ಗಿ, , ಹಿರಿಯ ಸದಸ್ಯರಾದ ನಜೀರ್‌ಶೇಖ್,  ನಿವೃತ್ತ ದೈಹಿಕ ಉಪನ್ಯಾಸಕ  ಎಸ್.ಜಿ.ಭಟ್ . ಎ.ಜಿ.ಕೇರಳೀಕರ್, 

ಖೈರುನ್ನೀಸಾ ಶೇಖ್‌, ಮಾರುತಿ ಬಾಡಕರ್‌, ಅರವಿಂದ ನಾಯಕ, ರಮೇಶ್‌ಗುನಗಿ, ರಾಮ್‌ ನಾಯ್ಕ್ ,  ಗಣೇಶ್‌ಆಚಾರ್ಯ, ಮಚ್ಚೇಂದ್ರ ಮಹಾಲೆ, ಬಾಬು ಶೇಖ್‌, ಗಜಾನನ ಆಳ್ವಾ , ಶಾನಭಾಗ ಸೇರಿದಂತೆ ಕಸಾಪ ಸದಸ್ಯರು ಉಪಸ್ಥಿತರಿದ್ದರು.