ರಾಜೀವ್ ಗಾಂಧಿ ಕೆಲಸ ಇಂದಿಗೂ ನಮಗೆ ಸ್ಫೂರ್ತಿ: ಮಧ್ಯಪ್ರದೇಶ ಮುಖ್ಯಮಂತ್ರಿ

ಭೋಪಾಲ್, ಆಗಸ್ಟ್ 20 (ಯುಎನ್ಐ)- 'ಭಾರತರತ್ನ' ಪುರಸ್ಕೃತ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್,  21 ನೇ ಶತಮಾನದ ಬಲಿಷ್ಠ  ಭಾರತಕ್ಕೆ ಅಡಿಪಾಯ ಹಾಕಿಕೊಟ್ಟ ರಾಜೀವ್ಗಾಂಧಿ ಅವರ ಸಾಧನೆಗಳು ಇಂದಿಗೂ ಸಾರ್ವತ್ರಿಕ ಸ್ಫೂತರ್ಿಯಾಗಿವೆ ಎಂದು ಅವರು ಹೇಳಿದ್ದಾರೆ.  

'ರಾಜೀವ್ ಗಾಂಧಿಯವರು ತಾಯ್ನಾಡಿಗಾಗಿನ ಕನಸನ್ನು ಸಾಧಿಸುವ ಗುರಿಯೊಂದಿಗೆ ರಾಷ್ಟ್ರವನ್ನು ಸೂಕ್ತ ಪಥದಲ್ಲಿ ಸಾಗಿಸಿದರು" ಎಂದು ಕಮಲ್ನಾಥ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಹೇಳಿದ್ದಾರೆ.  

'ರಾಜೀವ್ ಗಾಂಧಿಯವರು ಕಂಪ್ಯೂಟರ್ ಕ್ರಾಂತಿ ಮೂಲಕ ಗ್ರಾಮೀಣ ಮತ್ತು ಆಧುನಿಕ ಭಾರತದ ನಡುವಿನ ಅಂತರವನ್ನು ನಿವಾರಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿದರು. ಗ್ರಾಮೀಣ ವಾಸಿಗಳು ಪ್ರಜಾಪ್ರಭುತ್ವದಲ್ಲಿ ಪ್ರತಿಪಾದಿಸಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳುವಂತೆ ಮಾಡಿದರು ಎಂದು ಕಮಲ್ನಾಥ್ ಹೇಳಿದ್ದಾರೆ.