ರಾಜೀವ್ ಗಾಂಧಿಯವರ 75ನೇ ಜಯಂತಿ: ಮನಮೋಹನ್ ಸಿಂಗ್, ಸೋನಿಯಾ ಗೌರವ ಸಲ್ಲಿಕೆ

ನವದೆಹಲಿ, ಆ 20      ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ 75ನೆ ಜಯಂತಿ ಅಂಗವಾಗಿ ಇಲ್ಲಿನ ವೀರ್ ಭೂಮಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತೆರಳಿ ಗೌರವ ಸಮರ್ಪಿಸಿದರು. ರಾಜೀವ್ ಗಾಂಧಿಯವರ ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತಮ್ಮ ತಂದೆ, ಮಾಜಿ ಪ್ರಧಾನಿಗೆ ಪುಷ್ಪನಮನ ಸಲ್ಲಿಸಿದರು. ಭಾರತದ ಶಕ್ತಿ  ಅದರ ಏಕತೆ ಮತ್ತು ವಿವಿಧತೆಯಲ್ಲಿ ಅಡಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಜೀವ್ ಗಾಂಧಿಯವರ 75 ನೇ ಜನ್ಮ ದಿನದಂದು ನಾವು ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ, ಅವರ ಮಾತುಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ನಮ್ಮೆಲ್ಲರ ನಡುವೆ ಏಕತೆಯ ಬಂಧವನ್ನು ಮುರಿಯಲು ಹುಚ್ಚುತನದ ಕೋಮುವಾದಕ್ಕೆ ನಾವು ಎಂದಿಗೂ ಅವಕಾಶ ಕೊಡಬಾರದು ಎಂದು ಪಕ್ಷ ಟ್ವೀಟ್ ಮಾಡಿದೆ.

*