ರಾಜೀವ್ ಗಾಂಧಿ 75 ನೇ ಜನ್ಮ ದಿನ; ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಸೇರಿ ಗಣ್ಯರ ನಮನ

ನವದೆಹಲಿ,  ಆಗಸ್ಟ್ 20      ಮಾಜಿ ಪ್ರಧಾನಿ  ದಿ ರಾಜೀವ್ ಗಾಂಧಿ  ಅವರ   75 ನೇ   ಜನ್ಮ ದಿನವನ್ನು ದೇಶಾದ್ಯಂತ  ಇಂದು  ಆಚರಿಸಲಾಗುತ್ತಿದೆ.  

ಈ ಸಂದರ್ಭದಲ್ಲಿ  ಅವರ ಪತ್ನಿ  ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ,  ರಾಜೀವ್  ಗಾಂಧಿ ಸ್ಮಾರಕ ಸ್ಥಳ  ವೀರ್ ಭೂಮಿಗೆ  ತೆರಳಿ  ಗೌರವ ನಮನ ಸಲ್ಲಿಸಿದರು.  

ದೆಹಲಿಯಲ್ಲಿರುವ  ರಾಜೀವ್ ಗಾಂಧಿ ಸ್ಮಾರಕ ವೀರ್ ಭೂಮಿ ಗೆ  ಸೋನಿಯಾ ಗಾಂಧಿ,  ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ  ತೆರಳಿ    ಗೌರವ  ನಮನ ಸಲ್ಲಿಸಿದರು.  

ಈ ಸಂದರ್ಭದಲ್ಲಿ   ತಮ್ಮ ತಂದೆಯನ್ನು  ಸ್ಮರಿಸಿರುವ  ರಾಹುಲ್ ಗಾಂಧಿ , ಎಲ್ಲರನ್ನೂ ಗೌರವಿಸುವುದು  ಮತ್ತು ಪ್ರೀತಿಸುವುದನ್ನು   ತನ್ನ ತಂದೆ ನನಗೆ ಕಲಿಸಿಕೊಟ್ಟಿದ್ದಾರೆ  ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ. 

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮಾಜಿ  ರಾಷ್ಟ್ರಪತಿ  ಪ್ರಣಬ್ ಮುಖರ್ಜಿ  ಹಾಗೂ  ಹಿರಿಯ ನಾಯಕ  ಗುಲಾಮ್ ನಬಿ ಆಜಾದ್, ಭೂಪಿಂದರ್ ಸಿಂಗ್ ಹೂಡಾ ಮತ್ತು ಅಹ್ಮದ್ ಪಟೇಲ್  ಮತ್ತಿತರ ಗಣ್ಯರು ರಾಜೀವ್ ಗಾಂಧಿ  ಸ್ಮಾರಕಕ್ಕೆ ನಮನ ಸಲ್ಲಿಸಿದರು.