ರೇಲ್ವೆ ಹೋರಾಟ ಸಮಿತಿಯಿಂದ ರೇಲ್ವೆ ದಿನಾಚರಣೆ ಸಂಭ್ರಮಾಚರಣೆ
Railway Day celebration by Railway Struggle Committee
ಲೋಕದರ್ಶನ ವರದಿ
ಬೆಟಗೇರಿ 16 : ಭಾರತೀಯ ರೇಲ್ವೆಗೆ 173 ಹಾಗೂ ಗದಗ ರೇಲ್ವೆಗೆ 143 ರ ಸಂಭ್ರಮ ದಿನಾಚರಣೆಯನ್ನು ದಿ. 16 ರಂದು ಗುರುವಾರ ಮುಂಜಾನೆ 9.30 ಗಂಟೆಗೆ ಗದಗ ರೈಲು ನಿಲ್ದಾಣದಲ್ಲಿ ಆಚರಿಸಲಾಯಿತು.
ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ನೇತೃತ್ವದಲ್ಲಿ ಸಮಿತಿಯ ಸದಸ್ಯರು ರೇಲ್ವೆ ಅಧಿಕಾರಿಗಳಿಗೆ, ಸಿಬ್ಬಂದಿಯವರಿಗೆ, ರೇಲ್ವೆ ಪೊಲೀಸ್ ಹಾಗೂ ಆರ್.ಪಿ.ಎಫ್. ಸಿಬ್ಬಂದಿಗೆ ಪುಷ್ಪಗುಚ್ಚ ನೀಡಿ, ಸಿಹಿ ವಿತರಿಸಿ ಶುಭ ಕೋರಲಾಯಿತು. ರೇಲ್ವೆ ನಿಲ್ದಾಣದ ಮುಖ್ಯ ಅಧೀಕ್ಷಕ ಮನೋಜ ಬಾಗಡೆ, ಪರಿಸರ ಅಧಿಕಾರಿ ತೇಜರಾಜ, ಆರ್.ಪಿ.ಎಫ್., ಐ.ಪಿ.ಎಫ್. ರೀತೇಶಕುಮಾರ, ಸ್ಟೇಶನ್ ಆಟೋ ರಿಕ್ಷಾ ಚಾಲಕರು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದು ಬೆಟಗೇರಿ ರೇಲ್ವೆ ಹೋರಾಟ ಸಮಿತಿಯವರು ಪ್ರತಿ ವರ್ಷ ತಪ್ಪದೇ ರೇಲ್ವೆ ದಿನಾಚರಣೆ ಆಚರಿಸಿ ನಮಗೆಲ್ಲ ಸಂತಸ ನೀಡಿದ್ದಕ್ಕಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಸ್.ವಿ. ಸುಲಾಖೆ, ಮನ್ಸೂಖಲಾಲ ಪುಣೇಕರ, ಸಂಧ್ಯಾ ಗುಂಡಿ, ಎಂ.ಟಿ. ಕಬ್ಬಿಣ, ಅರ್ಜುನಸಾ ಮೇರವಾಡೆ, ಈರಣ್ಣ ಜ್ಯೋತಿ, ಕೃಷ್ಣಾಸಾ ಮೇರವಾಡೆ, ಅಶೋಕ ಅಂಗಡಿ, ಜಂಬಣ್ಣ ಹುಡೇದ, ಬಸವರಾಜ ಕಿರೇಸೂರ, ಜ್ಞಾನೇಶ್ವರ ಉತ್ತರಕರ, ಗಿರಿಧರಸಿಂಗ್ ಬ್ಯಾಳಿ, ರೇಖಾ ಹುಲ್ಲೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 