ರೇಲ್ವೆ ಹೋರಾಟ ಸಮಿತಿಯಿಂದ ರೇಲ್ವೆ ದಿನಾಚರಣೆ
Railway Day celebrated by Railway Struggle Committee
ಲೋಕದರ್ಶನ ವರದಿ
ಬೆಟಗೇರಿ 16: ಭಾರತೀಯ ರೇಲ್ವೆಗೆ 173 ಹಾಗೂ ಗದಗ ರೇಲ್ವೆಗೆ 143 ರ ಸಂಭ್ರಮ ದಿನಾಚರಣೆಯನ್ನು ದಿ. 16 ರಂದು ಗುರುವಾರ ಮುಂಜಾನೆ 9.30 ಗಂಟೆಗೆ ಗದಗ ರೈಲು ನಿಲ್ದಾಣದಲ್ಲಿ ಆಚರಿಸಲಾಯಿತು. ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ನೇತೃತ್ವದಲ್ಲಿ ಸಮಿತಿಯ ಸದಸ್ಯರು ರೇಲ್ವೆ ಅಧಿಕಾರಿಗಳಿಗೆ, ಸಿಬ್ಬಂದಿಯವರಿಗೆ, ರೇಲ್ವೆ ಪೊಲೀಸ್ ಹಾಗೂ ಆರ್.ಪಿ.ಎಫ್. ಸಿಬ್ಬಂದಿಗೆ ಪುಷ್ಪಗುಚ್ಚ ನೀಡಿ, ಸಿಹಿ ವಿತರಿಸಿ ಶುಭ ಕೋರಲಾಯಿತು. ರೇಲ್ವೆ ನಿಲ್ದಾಣದ ಮುಖ್ಯ ಅಧೀಕ್ಷಕ ಮನೋಜ ಬಾಗಡೆ, ಪರಿಸರ ಅಧಿಕಾರಿ ತೇಜರಾಜ, ಆರ್.ಪಿ.ಎಫ್., ಐ.ಪಿ.ಎಫ್. ರೀತೇಶಕುಮಾರ, ಸ್ಟೇಶನ್ ಆಟೋ ರಿಕ್ಷಾ ಚಾಲಕರು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದು ಬೆಟಗೇರಿ ರೇಲ್ವೆ ಹೋರಾಟ ಸಮಿತಿಯವರು ಪ್ರತಿ ವರ್ಷ ತಪ್ಪದೇ ರೇಲ್ವೆ ದಿನಾಚರಣೆ ಆಚರಿಸಿ ನಮಗೆಲ್ಲ ಸಂತಸ ನೀಡಿದ್ದಕ್ಕಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಎಸ್.ವಿ. ಸುಲಾಖೆ, ಮನ್ಸೂಖಲಾಲ ಪುಣೇಕರ, ಸಂಧ್ಯಾ ಗುಂಡಿ, ಎಂ.ಟಿ. ಕಬ್ಬಿಣ, ಅರ್ಜುನಸಾ ಮೇರವಾಡೆ, ಈರಣ್ಣ ಜ್ಯೋತಿ, ಕೃಷ್ಣಾಸಾ ಮೇರವಾಡೆ, ಅಶೋಕ ಅಂಗಡಿ, ಜಂಬಣ್ಣ ಹುಡೇದ, ಬಸವರಾಜ ಕಿರೇಸೂರ, ಜ್ಞಾನೇಶ್ವರ ಉತ್ತರಕರ, ಗಿರಿಧರಸಿಂಗ್ ಬ್ಯಾಳಿ, ರೇಖಾ ಹುಲ್ಲೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 