ರಾಹುಲ್ ಗಾಂಧಿ, ಶರದ್ ಪವಾರ್, ಜುಅಲ್ ಓರಾಮ್ ಕಾರವಾರಕ್ಕೆ
ಕಾರವಾರ ಜ.18 : ದೇಶದ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿ ಜ.೨೦ ಮತ್ತು ೨೧ ರಂದು ಕಾರವಾರ ಬಳಿಯ ಐಎನ್ ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಲಿದೆ.. ಸಮಿತಿಯ ಅಧ್ಯಕ್ಷ ಜುಅಲ್ ಓರಾಮ್, ಸಮಿತಿಯ ಸದಸ್ಯರಾದ ಸಂಸದ ರಾಹುಲ್ ಗಾಂಧಿ,ಶರದ್ ಪವಾರ್, ಸಂಜಯ್ ರಾಹುತ್ , ಜುಗಲ್ ಕಿಶೋರ್ ಶರ್ಮ, ಅಶೋಕ್ ಬಾಜಪೇಯಿ, ಪ್ರೇಮಚಂದ ಗುಪ್ತಾ , ಟಿ.ಆರ್.ಪರವಿಂದರ್ ಸೇರಿದಂತೆ ಒಟ್ಟು ೩೧ ಜನ ಸಮಿತಿ ಸದಸ್ಯರು ಕಾರವಾರ ನೇವಿಯ ಪ್ರಗತಿ ಕಾಮಗಾರಿಗಳು ಹಾಗೂ ಈಗ ಲಭ್ಯ ಇರುವ ಸೌಕರ್ಯಗಳನ್ನು ವೀಕ್ಷಿಸಿ ಮಾಹಿತಿ ಪಡಯಲಿದ್ದಾರೆ. ೨೧ ಜನ ಲೋಕಸಭಾ ಸದಸ್ಯರು, ೧೧ ಜನ ರಾಜ್ಯ ಸಭಾ ಸದಸ್ಯರು ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಇರಲಿದ್ದಾರೆ. ಸದಸ್ಯರು ಜ.೨೧ ರಂದು ಗೋವಾಕ್ಕೆ ಆಗಮಿಸಿ, ನಂತರ ಕಾರವಾರ ಬಳಿಯ ನೇವಿ ತಲುಪಲಿದ್ದಾರೆ. ಅಜ್ಜಿ ಇಂದಿರಾ ಗಾಂಧಿ ಕಾಲದ ಕನಸಿನ ನೌಕಾನೆಲೆ, ರಾಜೀವ್ ಗಾಂಧಿ ಪ್ರಧಾನಿಯಾದಾಗ ಶಂಕುಸ್ಥಾಪನೆ ಯಾಗಿತ್ತು.ಆದರೆ ಅನುಷ್ಠಾನಕ್ಕೆ ಬಂದದ್ದು ಜಾರ್ಜ ಪರ್ನಾಂಡೀಸ್ ರಕ್ಷಣಾ ಸಚಿವರಾಗಿದ್ದಾಗ ,೧೯೯೮ ರಲ್ಲಿ.
ನೌಕಾನೆಲೆ ದೇಶಕ್ಕೆ ಸಮರ್ಪಣೆಯಾದುದು ಪ್ರಣವ್ ಮುಖರ್ಜಿ ರಕ್ಷಣಾ ಸಚಿವರಾದ ೨೦೦೫ ನೇ ಇಸ್ವಿಯಲ್ಲಿ. ಆಗ ಸಂಸದೆ ಸೋನಿಯಾ ಗಾಂಧಿ ಕಾರವಾರ ನೇವಿಗೆ ಭೇಟಿ ನೀಡಿದ್ದು ಸ್ಮರಣೀಯ