ಡಿ 2 ರಂದು ರಾಹುಲ್ ಗಾಂಧಿ ಮೊದಲ ಚುನಾವಣಾ ಪ್ರಚಾರ ಸಭೆ

rahul gandi

ರಾಂಚಿ, ನ 27-ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ರಾಹುಲ್ ಗಾಂಧಿ ಜಾರ್ಖಂಡ್ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಡಿಸೆಂಬರ್ 2 ರಂದು ಸಿಮ್ಡೆಗಾ ಕ್ಷೇತ್ರದಲ್ಲಿ ಮೊದಲ ಪ್ರಚಾರ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

ರಾಹುಲ್ ಗಾಂಧಿ ಅವರ ಆಗಮನವನ್ನು ಜನರು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ ಎಂದು ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಅಲೋಕ್ ಕುಮಾರ್ ದುಬೆ ಹೇಳಿದ್ದಾರೆ.  ಈ ಪ್ರಚಾರ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಮಹಾಘಟಬಂಧನ್ ಆದ್ಯತೆಯ ಬಗ್ಗೆ ವಿವರಿಸಲಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಇತರ ಪ್ರಮುಖ ನಾಯಕರು ಸಹ ಭಾಗಿಯಾಗಲಿದ್ದಾರೆ ಎಂದು ದುಬೆ ತಿಳಿಸಿದ್ದಾರೆ.