RCB ವಿಜಯೋತ್ಸವ ಕಾರ್ಯಕ್ರಮ ರದ್ದು
RCB Victory Day event cancelled
ವಿಜಯಪುರ 05: ಜೂನ್ 8 ರಂದು ಎಂ.ಬಿ.ಪಿ ಮತ್ತು ಎಸ್.ಬಿ.ಪಿ ಅಭಿಮಾನಿಗಳಿಂದ ನಗರದಲ್ಲಿ ಆಯೋಜಿಸಲಾಗಿದ್ದ ಆರಿ್ಸ.ಬಿ ವಿಜಯೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಆಕಾಶ ಪಿ. ಕಲಬುರ್ಗಿ ಮತ್ತು ಶ್ರೀಶೈಲ ರೆಡ್ಡಿ ತಿಳಿಸಿದ್ದಾರೆ.
ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಐಪಿಎಲ್- 2025 ಗೆಲ್ಲುವ ಮೂಲಕ 18 ವರ್ಷಗಳ ನಮ್ಮ ಕನಸನ್ಮು ನನಸು ಮಾಡಿತ್ತು. ಆದರೆ, ಬುಧವಾರ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಅವಘಡದಲ್ಲಿ ಆರಿ್ಸ.ಬಿ ತಂಡದ 11 ಜನ ಅಪ್ಪಟ ಅಭಿಮಾನಿಗಳು ಸಾವೀಗೀಡಾಗಿದ್ದಾರೆ. ಇದರಿಂದ ನಾವಷ್ಟೇ ಅಲ್ಲ, ಇಡೀ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಈ ಘಟನೆ ಆರಿ್ಸ.ಬಿ ತಂಡದ ಗೆಲುವಿನ ಸಂತಸಕ್ಕಿಂತ ಹೆಚ್ಚು ನೋವು ತಂದಿದೆ. ಸೂತಕದ ಈ ಸಮಯದಲ್ಲಿ ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ.
ಈ ಹಿನ್ನೆಲೆಯಲ್ಲಿ ಜೂನ್ 8 ರಂದು ನಗರದಲ್ಲಿ ಆಯೋಜಿಸಲಾಗಿದ್ದ ಆರಿ್ಸ.ಬಿ ಸಂಭ್ರಮಾಚರಣೆಯನ್ನು ರದ್ದು ಪಡಿಸಲಾಗಿದೆ ಎಂದು ಆಕಾಶ ಪಿ. ಕಲಬುರ್ಗಿ ಮತ್ತು ಶ್ರೀಶೈಲ ರೆಡ್ಡಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 