ಆಯೋಧ್ಯೆ,ಮಾ ೭, ಪ್ರತಿಪಕ್ಷ ನಾಯಕರುಗಳಾದ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಆಯೋಧ್ಯೆಗೆ ಭೇಟಿ ನೋಡಿ ರಾಮ ಲಲ್ಲಾನಿಗೆ ಪೂಜೆ ಸಲ್ಲಿಸಬೇಕು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಶನಿವಾರ ಕರೆ ನೀಡಿದ್ದಾರೆ.ತಮ್ಮ ಸರ್ಕಾರ ೧೦೦ ದಿನಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ, ರಾಮ ಲಲ್ಲಾಗೆ ಪೂಜೆ ಸಲ್ಲಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕುಟುಂಬ ಸಮೇತ ಆಯೋಧ್ಯೆಯ ರಾಮಜನ್ಮಭೂಮಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಶಿವಸೇನಾ ಮುಖ್ಯಸ್ಥರು ಆಯೋಧ್ಯೆ ಭೇಟಿಗೆ ಮುನ್ನ ಇಂದು ಬೆಳಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಜಯ್ ರಾವತ್, ರಾಮಲಲ್ಲಾ ದರ್ಶನ ಹಾಗೂ ರಾಮ ಮಂದಿರ ನಿರ್ಮಾಣ ಧಾರ್ಮಿಕ ಹಾಗೂ ರಾಜಕೀಯ ವಿಷಯವಲ್ಲ ಇದು ರಾಷ್ಟ್ರೀಯ ಹೊಣೆಗಾರಿಯಾಗಿದೆ ಎಂದು ಹೇಳಿದ್ದಾರೆ. ಆಯೋಧ್ಯೆಗೆ ಪ್ರತಿಪಕ್ಷಗಳ ನಾಯಕರೂ ಭೇಟಿ ನೀಡಬೇಕು ಎಂದು ನೀವು ಮನವಿ ಮಾಡಬಹುದೇ ? ಎಂಬ ಪ್ರಶ್ನೆಗೆ, ರಾಜಕೀಯ ಪಕ್ಷಗಳ ನಾಯಕರು ತಮ್ಮ ರಾಜಕೀಯ ಭಿನ್ನಾಭಿಪ್ರಾಯ ಬದಿಗೆಸರಿಸಿ, ರಾಮ ಮಂದಿರ ನಿರ್ಮಾಣ ಕುರಿತು ಒಗ್ಗಟ್ಟು ತೋರಬೇಕು. ರಾಮಲಲ್ಲಾ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ದೇಶದ ಜನರು ಭಾವಿಸಬೇಕು ಎಂದರು ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಇನ್ನೂ ಎಷ್ಟು ಕಾಲ ಮುಂದುವರಿಯಬಹುದು ಎಂಬ ಪ್ರಶ್ನೆಗೆ , ಇಂತಹ ವ್ಯವಸ್ಥೆ ೧೫ ವರ್ಷಗಳ ಕಾಲ ಸರ್ಕಾರ ನಡೆಸುವಂತೆ ಮಾಡಲಿದೆ ಎಂದು ಅವರು ಪ್ರತಿಪಾದಿಸಿದರು. ಉದ್ಧವ್ ಠಾಕ್ರೆ ಅವರ ಆಯೋಧ್ಯೆ ಭೇಟಿಗೆ ಯಾವುದೇ ಸಾಧು ಸಂತರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆಯನ್ನು ಸಂಜಯ್ ರಾವತ್ ತಳ್ಳಿ ಹಾಕಿದರು.
ಇಂದು ಅಪರಾಹ್ನ ಆಯೋಧ್ಯೆ ತಲುಪಲಿರುವ ಉದ್ಧವ್ ಠಾಕ್ರೆ, ರಾಮಲಲ್ಲಾ ದೇಗುಲದಲ್ಲಿ ಪೂಜೆ ನೆರೆವೇರಿಸಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೆ ಪಕ್ಷದ ೨೦ ಸಂಸದರು, ಹಲವು ಸಚಿವರು ಹಾಗೂ ಶಾಸಕರು ಜತೆಗಿದ್ದಾರೆ.ಕೊರೊನಾ ವೈರಸ್ ಬೆದರಿಕೆಯಿಂದಾಗಿ ಉದ್ಧವ್ ಠಾಕ್ರೆ ಸರಯೂ ನದಿಯಲ್ಲಿ ಆರತಿ ಅಥವಾ ಯಾವುದೇ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳದೆ ಸಂಜೆ ಮುಂಬೈಗೆ ಆಗಮಿಸಲಿದ್ದಾರೆ ಈ ನಡುವೆ ಶುಕ್ರವಾರ ಸಂಜೆ ಶಿವಸೈನಿಕರನ್ನು ಹೊತ್ತು ಹೊರಟಿದ್ದ ವಿಶೇಷ ರೈಲು ಸಹ ಇಂದು ಆಯೋಧ್ಯೆ ತಲುಪಿದೆ.