ಬಾಗಲಕೋಟೆ: ಗದ್ದನಕೇರಿ ಕ್ರಾಸ್ನಲ್ಲಿ ನಾಲ್ಕು ಕಡೆಗಳಲ್ಲಿ ಶೀಘ್ರವೇ ಬಸ್ ಬೇ ನಿಮರ್ಿಸುವಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಹಿಂದಿನ ಸಭೆಗಳಲ್ಲಿ ಚಚರ್ಿಸಿದಂತೆ ಗದ್ದನಕೇರಿ ಕ್ರಾಸ್ನಲ್ಲಿ ಬಸ್ ನಿಲ್ದಾಣ ನಿಮರ್ಿಸಲು ಅರಣ್ಯ ಇಲಾಖೆಯಿಂದ ನಿವೇಶನಕ್ಕಾಗಿ ಆನ್ಲೈನ್ನಲ್ಲಿ ಅಜರ್ಿ ದಾಖಲಿಸಿ ಅನುಮತಿ ಕಾಯ್ದಿರಿಸಲಾಗಿದ್ದು, ಈ ಪ್ರಸ್ತಾವನೆಯನ್ನು ಕೈಬಿಡಲು ತಿಳಿಸಲಾಗಿತ್ತು. ಇದರ ಬದಲಾಗಿ ನಾಲ್ಕು ಕಡೆಗಳಲ್ಲಿ ಬಸ್ ಬೇ ನಿಮರ್ಿಸಲು ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರು ಬಸ್ ಬೇ ನಿಮರ್ಿಸಲು ಒಪ್ಪಿಗೆ ನೀಡಿದ್ದು, ಬಸ್ ಬೇ ನಿಮರ್ಾಣಕ್ಕೆ ಕ್ರಮವಹಿಸಲು ಸೂಚಿಸಿದರು.
ಹುಬ್ಬಳ್ಳಿ ಮತ್ತು ವಿಜಯಪೂರ ಮಾರ್ಗದ ಎರಡು ಕಡೆಗಳಲ್ಲಿ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ಬೆಳಗಾವಿ ಮತ್ತು ಬಾಗಲಕೋಟೆ ಎರಡು ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶೀಘ್ರದಲ್ಲಿ ಬಸ್ ಬೇ ನಿಮರ್ಿಸಲು ಸೂಚಿಸಿದರು. ಮುಧೋಳ ಮತ್ತು ಲೋಕಾಪೂರದಲ್ಲಿ ಪಾಕರ್ಿಂಗ್ ಸಮಸ್ಯೆ ನಿವಾರಣೆಗೆ ಒನ್ವೇ ವ್ಯವಸ್ಥೆ ಪೊಲಿಸ್ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಸಲಹೆ ಪಡೆದು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಸರಕು ಸಾಗಾಣಿಕೆ ವಾಹನಗಳಲ್ಲಿ ಹಾಗೂ ಕನ್ಸಸ್ಟ್ರಕ್ಷನ್ ಇಕ್ಯೂಪಮೆಂಟ್ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು, ಟಂಟಂಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಬಗ್ಗೆ ಕ್ರಮಕೈಗೊಳ್ಳಬೇಕು. ಅಲ್ಲದೇ ಈ ಕುರಿತು ಆಯಾ ತಾಲೂಕಿನ ಟಂಟಂ ಅಶೋಷಿಯೇಶನ್ಗಳ ಪ್ರತಿನಿಧಿಗಳನ್ನು ಕರೆಯಿಸಿ ಸಭೆಗಳನ್ನು ನಡೆಸಿ ಸೂಕ್ತ ನಿದರ್ೇಶನ ನೀಡುವಂತೆ ಪ್ರಾದೇಶಿ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಮುಧೋಳದಲ್ಲಿ ರೋಡ ವೈಡಿಂಗ್ ಮಾಡಲಾಗುತ್ತಿರುವುದಾಗಿ ಲೋಕೋಪಿ ಇಲಾಖೆಯ ಕಾರ್ಯನಿವರ್ಾಹಕ ಇಂಜಿನೀಯರ್ ಪ್ರಶಾಂತ ಸಭೆಗೆ ತಿಳಿಸಿದರು. ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲ ಸೇರಿದಂತೆ ಇತರೆ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಲು ತಿಳಿಸಲಾಯಿತು. ಗದ್ದನಕೇರಿ ಕ್ರಾಸ್, ಸೀಮಿಕೇರಿ ಕ್ರಾಸ್ಗಳಲ್ಲಿ ಲೈಟಿಂಗ್ ಸಮಸ್ಯೆ ಇದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಈ ಕುರಿತು ಪತ್ರ ಬರೆಯಲು ತಿಳಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಪ್ರಸಕ್ತ ವರ್ಷದಲ್ಲಿ ಟ್ರಾಪಿಕ್ ವಾಯಿಲೇಷನ್ಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ ಮಾಹೆಯೊಂದರಲ್ಲಿಯೇ 50 ಲಕ್ಷ ರೂ. ಸೇರಿದಂತೆ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 1.65 ಕೋಟಿ ರೂ.ಗಳ ದಂಡದ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೇ ವಿದ್ಯಾಥರ್ಿಗಳಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳುವ ಕುರಿತು ಶಿಕ್ಷಣ ಸಂಸ್ಥೆಯಗಳೊಂದಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕೂಡಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ, ಜಿಲ್ಲಾ ಉಪ ಅರಣ್ಯಾಧಿಕಾರಿ ದೇವರಾಜ, ಜಿಲ್ಲಾ ಸಾರಿಗೆ ಅಧಿಕಾರಿ ಪಡಿಯಪ್ಪ ಮೈತ್ರಿ, ನಗರಸಭೆಯ ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.