ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ: ಇಓ ಮಸಳಿ
Quick action to resolve the problem: EO Masali
ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ: ಇಓ ಮಸಳಿ
ತಾಳಿಕೋಟಿ 04: ತಾಲೂಕಿನ ಬಿ.ಸಾಲವಾಡಗಿ ಗ್ರಾಮ ಪಂಚಾಯತ್ ನಲ್ಲಿರುವ ಸಮಸ್ಯೆಗಳನ್ನು ಒಂದು ವಾರದ ಒಳಗಾಗಿ ಪರಿಹರಿಸುವುದಾಗಿ ತಾಲೂಕ್ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಅವರು ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಹಾಕಿದ ಬೀಗವನ್ನು ತೆಗೆಯಲು ಅವಕಾಶ ಮಾಡಿಕೊಟ್ಟರು.
ಸೋಮವಾರ ಬಿ.ಸಾಲವಾಡಗಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ತಾಪಂ ಇಓ ನಿಂಗಪ್ಪ ಮಸಳಿ ಅವರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಗ್ರಾಪಂ ಪಿಡಿಒ ಪ್ರಾಜಕ್ತಾ ತಟಗಾರ ಅವರ ಕಾರ್ಯ ವೈಖರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಪಂ ಕೆಲವು ಸದಸ್ಯರು ಹಾಗೂ ಗ್ರಾಮದ ಮುಖಂಡರು ಅವರ ನಿಷ್ಕ್ರಿಯತೆಯಿಂದಾಗಿ ಹಲವಾರು ಗಂಭೀರ ಸಮಸ್ಯೆಗಳು ಹುಟ್ಟಿಕೊಂಡಿವೆ ಎಂದು ದೂರಿದರು. ಗ್ರಾಪಂ ಸದಸ್ಯರ ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಶಾಂತ ಚಿತ್ತದಿಂದ ಆಲಿಸಿದ ಇಓ ನಿಂಗಪ್ಪ ಮಸಳಿ ಅವರು ನೀವು ನಿಮ್ಮ ಎಲ್ಲ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನನಗೆ ಕೊಟ್ಟಿದ್ದೀರಿ ಇವಳನ್ನು ಪರೀಶೀಲಿಸಿ ನಾನು ಕ್ರಮವಹಿಸುತ್ತೇನೆ. ಇಲ್ಲಿಯ ಪಿಡಿಒಗಳಾದ ಪ್ರಾಜಕ್ತಾ ತಟಗಾರ ಅವರು ಇಲ್ಲಿಂದ ಸೇವೆಯಿಂದ ನಿರ್ಗಮಿಸಲು ಬಯಸಿ ಈಗಾಗಲೇ ಮನವಿ ಕೊಟ್ಟಿದ್ದಾರೆ ಈ ಕುರಿತು ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಪರ್ಯಾಯ ವ್ಯವಸ್ಥೆಗಾಗಿ ಪ್ರಭಾರಿ ಅಧಿಕಾರಿಗಳನ್ನು ನೇಮಿಸುತ್ತೇವೆ ಒಂದು ವಾರದ ಒಳಗಾಗಿ ನಿಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುತ್ತೇನೆ ಎಂದರು. ಮುಖಂಡ ಎಂ.ಎಂ.ಪೊಲೀಸ್ ಪಾಟೀಲ ಮಾತನಾಡಿ ಗ್ರಾಮ ಪಂಚಾಯತಿಗೆ 400 ಮನೆಗಳು ಬಡವರಿಗೆ ನೀಡಲು ಮಂಜೂರಾಗಿವೆ ಈ ಕುರಿತು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಗ್ರಾಮ ಪಂಚಾಯತಗೆ ಉಳಿದ ಅವಧಿ ಕೇವಲ 2ರಿಂದ 3 ತಿಂಗಳು ಮಾತ್ರ ಆದಷ್ಟು ಬೇಗ ಇದರ ಕುರಿತು ಕ್ರಮವಹಿಸಬೇಕು, ನಮ್ಮ ಸಮಸ್ಯೆಗಳು ಪರಿಹಾರ ಆಗದೆ ಹೋದಲ್ಲಿ ನಾವು ತಾಲೂಕು ಪಂಚಾಯತ್ ಮುಂದುಗಡೆಗೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದರು.
ಸಭೆಯಲ್ಲಿ ಮುಖಂಡರಾದ ಸಾಹೇಬಗೌಡ ಗುಡಗುಂಟಿ, ಪ್ರಭುಗೌಡ ದೊಡಮನಿ, ಬಸನಗೌಡ ಪಾಟೀಲ, ಕುಮಾರಗೌಡ ಅನಂತರೆಡ್ಡಿ, ವೀರೇಶಗೌಡ ಚಿಂಚೋಳಿ, ಬಸವರಾಜ ಪೂಜಾರಿ, ನಿಂಗಣ್ಣ ಕೆಸರಟ್ಟಿ, ಹುಲುಗೆಪ್ಪ ಪೂಜಾರಿ, ಶಾಂತಪ್ಪ ಬರದೇನಾಳ, ದೇವಪ್ಪ ಬಿದರಕುಂದಿ, ಗುರುನಾಥಗೌಡ ಬಿಳೇಭಾವಿ, ಗ್ರಾಪಂ ಸದಸ್ಯರಾದ ವಿಶ್ವನಾಥ ಜಹಗೀರದಾರ, ಮಲ್ಲಿಕಾರ್ಜುನ ತಿಂಥಣಿ, ಕಾಶಪ್ಪ ಚಲವಾದಿ, ಮಲ್ಲಣ್ಣ ಕೇಸಾಪೂರ ತಾಪಂ ನ ಮಹಾಂತಗೌಡ ದೊರೆಗೋಳ, ಬಸನಗೌಡ ಚೌಧರಿ, ಗ್ರಾಪಂ ಕಾರ್ಯದರ್ಶಿ ಎಸ್.ಜಿ. ಅಲ್ಲಾಪೂರ ಹಾಗೂ ಗ್ರಾಮಸ್ಥರು ಇದ್ದರು.
ತಾಳಿಕೋಟಿ ಪಿಎಸ್‌ಐ ಜ್ಯೋತಿ ಖೋತ ಅವರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 