ಹಿಚ್ಕಿ ಚಿತ್ರಕ್ಕಾಗಿ ರಾಣಿಗೆ 'ಪ್ರಭಾವಶಾಲಿ ನಟಿ' ಪ್ರಶಸ್ತಿ

ನವದೆಹಲಿ ನ 10 :    ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ 'ಹಿಚ್ಕಿ' ಚಿತ್ರಕ್ಕಾಗಿ ಅತ್ಯಂತ ಪ್ರಭಾವಶಾಲಿ ಸಿನಿಮಾ ನಟಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ನೈಋತ್ಯ ಏಷಿಯಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಾಣಿ ಮುಖರ್ಜಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಣಿ ಸಿದ್ದಾರ್ಥ್ ಪಿ.ಮಲ್ಹೋತ್ರ ನಿರ್ದೇಶನದ 'ಹಿಚ್ಕಿ' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದರು.  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಣಿ, ಈ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸವಾಗಿದೆ. ಕೆಲ ಚಿತ್ರಗಳು ಜನರನ್ನು ಚಿಂತಿಸುವಂತೆ ಮಾಡಿ ಅವರ ಮನಸ್ಸು, ಹೃದಯದಲ್ಲಿ ಮನೆ ಮಾಡಿ ಬಿಡುತ್ತದೆ. ನನಗೆ ಅಂತಹ ಚಿತ್ರಗಳಲ್ಲಿ ನಟಿಸುವುದೆಂದರೆ ಇಷ್ಟ ಎಂದಿದ್ದಾರೆ.     ಇಂತಹ ಚಿತ್ರಗಳಿಗೆ, ಇಂತಹ ಪಾತ್ರಗಳಿಗೆ ನಟಿಯರು ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಮಾಜಕ್ಕೆ ಸಕಾರಾತ್ಮಕ ಸಂದೇಶ ರವಾನೆಯಾಗುತ್ತದೆ ಎಂದರು. ಹಿಚ್ಕಿ ಚಿತ್ರದಲ್ಲಿ ರಾಣಿ ಮುಖರ್ಜಿ, ಟೌರೆಟ್ಟೆ ಸಿಂಡ್ರೋಮ್ ಹೊಂದಿರುವ ಶಿಕ್ಷಕಿಯ ಪಾತ್ರ ನಿಭಾಹಿಸಿದ್ದರು. ಜೊತೆಗೆ, ಚಿತ್ರದಲ್ಲಿ ಕೆಲ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.  ಇದು ರಾಣಿ ಮುಖರ್ಜಿ ಮಗುವಿನ ತಾಯಿಯಾದ ನಂತರ ನಟಿಸಿದ ಮೊದಲ ಚಿತ್ರವಾಗಿತ್ತು.