ಪ್ರಮುಖ ಬೇಡಿಕೆ ಈಡೇರಿಸಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಒತ್ತಾಯ

ಪ್ರಮುಖ ಬೇಡಿಕೆ ಈಡೇರಿಸಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಒತ್ತಾಯ Quarry and stone crusher owners urge fulfillment of key demand


ಕೊಪ್ಪಳ 18 : ರಾಜ್ಯ ಸರ್ಕಾರ ಹೊಸ ಹೊಸ ನಿಯಮ ಜಾರಿ ಮಾಡುತ್ತದೆ ಇದರಿಂದ ತೊಂದರೆ ಉಂಟಾಗುತ್ತದೆ ಇತ್ತೀಚಿಗಷ್ಟೇ ಶಿವಮೊಗ್ಗ ದಲ್ಲಿ ಕ್ರಷರ್ ಮಾಲೀಕ ಆತ್ಮಹತ್ಯೆ ಮಾಡಿ ಕೊಂಡಿರುವುದು ನಮ್ಮೆಲ್ಲರಿಗೆ ತೀವ್ರ ಆತಂಕ ಮತ್ತು ದುಃಖ ಉಂಟಾಗಿದೆ ಅದನ್ನು ನಾವು ವಿರೋಧಿಸಿ ಒಂದು ದಿನ ರಾಜ್ಯದ್ಯಂತ ಎಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ, ಕೂಡಲೇ ಸರ್ಕಾರ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ನಾಲ್ವಾಡ  ತಿಳಿಸಿದ್ದಾರೆ, ಅವರು ಶುಕ್ರವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಜಿಲ್ಲೆಯಲ್ಲಿ ಸುಮಾರು 37 ಕ್ರಷರ್ ಹಾಗೂ ರಾಜ್ಯದಲ್ಲಿ ಸುಮಾರು 2, ಸಾವಿರ ಕ್ರಷರ್ ಗಳನ್ನು ಒಂದು ದಿನ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ ಎಂದ ಅವರು ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದನೆ ನೀಡಬೇಕು ಕೂಡಲೇ ನಮ್ಮ ಪ್ರಮುಖ ಬೇಡಿಕೆಗಳಾದ ಏಕಮುಖ ರಾಜಧನ್ ಸಂಗ್ರಹಣ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಇಮ್ಮಡಿ ಸಂಗ್ರಹ ತಕ್ಷಣ ರದ್ದು ಪಡಿಸಬೇಕು.

ಕಾನೂನುಬಾಹಿರ ಇಮ್ಮಡಿ ಸಂಗ್ರಹಣೆ ರಾಜ್ಯ ಸರ್ಕಾರವು ತೀವ್ರ ವಿರೋಧದ ನಡುವೆಯೂ ಇತರ ಸರ್ಕಾರಿ ಇಲಾಖೆಗಳ ಲೋಕೋಪಯೋಗಿ ಜಲ ಸಂಪನ್ನಮೂಲ ಇತ್ಯಾದಿ ಇಲಾಖೆಗಳ ಮುಖಾಂತರ ರಾಜಧನ್ ಕಡಿತ ಮಾಡುತ್ತಿದ್ದು ಅದೇ ಸಮಯದಲ್ಲಿ ಕಲ್ಲು ಗಣಿ ಮತ್ತು ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಜಧನವನ್ನು ಸಂಗ್ರಹಿಸುತ್ತಿದೆ ಇದು ನಿಲ್ಲಿಸಬೇಕು ಎಂದು ಹೇಳಿದರು, ಮುಂದುವರಿದು ಮಾತನಾಡಿ ಒಂದೇ ವಸ್ತುವಿಗೆ ಎರಡು ಬಾರಿ ರಾಜಧನ ವಸೂಲಿ ಮಾಡುತ್ತಿರುವುದು ಸಂಪೂರ್ಣ ಕಾನೂನು ಬಾಹಿರವಾಗಿದೆ ಹಾಗೂ ನಮಗೆ ಅನ್ಯಾಯ ಮಾಡಿದಂತಾಗುತ್ತಿದೆ, ಸರ್ಕಾರ ಗಣಿಮಾಲೀಕರಿಂದಾಗಲಿ ಅಥವಾ ಅಂತಿಮ ಬಳಕೆದಾರರಿಂದ ಆಗಲಿ ಯಾವುದಾದರೂ ಒಂದೇ ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸಬೇಕು, ಅವೈಜ್ಞಾನಿಕ ಇಮ್ಮಡಿ ವಸೂಲಿಯನ್ನು ತಕ್ಷಣ ಕೈ ಬಿಟ್ಟು ಸ್ಪಷ್ಟ ನಿಯಮಾವಳಿ ರೂಪಿಸಬೇಕೆಂದು ಒಕ್ಕೂಟ ಒಕ್ಕೂರಿನಿಂದ ಸರ್ಕಾರಕ್ಕೆ ಆಗ್ರಹಿಸುತ್ತಿದೆ ಎಂದು ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ರಾಜು ನಾಲ್ವಾಡ ತಿಳಿಸಿದ್ದಾರೆ, ಪತ್ರಿಕಾಗೋಷ್ಠಿಯಲ್ಲಿ ಸಂಘದ ಬಸಯ್ಯ ಮಹಾಂತಯ್ಯನ ಮಠ ಜಡಿಯಪ್ಪ ಬಂಗಾಳಿ ಅಮರೇಶ್ ಹೂಗಾರ್ ಅನೇಕರು ಉಪಸ್ಥಿತರಿದ್ದರು,