ಸಾರ್ವಜನಿಕರ ಆಸ್ತಿ ರಕ್ಷಣೆಗೆ ಬ್ಯಾಂಕುಗಳಲ್ಲಿ ಗುಣಮಟ್ಟದ ಲಾಕರ್ ಗಳು ಅವಶ್ಯಕ: ರಾಘವೇಂದ್ರ ಔರಾದ್ಕರ್

ಬೆಂಗಳೂರು, ಜ.23,  ಬ್ಯಾಂಕುಗಳು, ದೇವಾಲಯಗಳು, ಆಭರಣ ಮಳಿಗೆಗಳು, ವಸತಿ ಪ್ರದೇಶಗಳಲ್ಲಿರುವ ಸಮುದಾಯ ಕೇಂದ್ರಗಳು ಸಾರ್ವಜನಿಕರ ಆಸ್ತಿ ರಕ್ಷಣೆಗಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುರಕ್ಷಿತ ಹಾಗೂ ಗುಣಮಟ್ಟದ ಲಾಕರ್ ಗಳನ್ನು ಹೊಂದುವುದು ಇಂದಿನ ದಿನಗಳಲ್ಲಿ ಬಹಳ ಪ್ರಮುಖವಾಗಿದೆ ಎಂದು ಕರ್ನಾಟಕ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.ನಗರದ ಬಸವನಗುಡಿ ಆರ್.ವಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಗುನ್ನೆಬೋ ಇಂಡಿಯಾ ಅನುಭವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಪೊಲೀರಿಗೆ ಇಂದಿನ ದಿನಗಳಲ್ಲಿ ಸಾರ್ವಜನಿಕರ ಆಸ್ತಿ ರಕ್ಷಣೆ ಮಾಡುವುದು ಬಹಳ ಪ್ರಮುಖವಾದ ಕರ್ತವ್ಯವಾಗಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಗುನ್ನೆಬೋ ಇಂಡಿಯಾ ತನ್ನ ನವೀನ ಅತ್ಯಾಧುನಿಕ ಮತ್ತು ಪರಿಣಾಮಕಾರಿ ವ್ಯವಸ್ಥೆಗಳೊಂದಿಗೆ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಮುಖ್ಯವಾಗಿ ಕಳ್ಳರು ಕನ್ನ ಹಾಕಲು ಯತ್ನಿಸಿದರೆ ತಕ್ಷಣವೇ ಹತ್ತಿರದ ಪೋಲಿಸ್ ಠಾಣೆ ಸೇರಿದಂತೆ, ನೋಂದಣಿ ಮಾಡಿದ 10 ಮೊಬೈಲ್ ಗಳಿಗೆ ಸಂದೇಶ ರವಾನೆಯಾಗಲಿದೆ ಎಂದರು.

 ದಕ್ಷಿಣ ಭಾರತ ಸೇರಿದಂತೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಇರುವುದರಿಂದ, ಇದು ಭದ್ರತೆಗೆ ಸಂಬಂಧಿಸಿದ ಪ್ರಮುಖ ಮಾರುಕಟ್ಟೆಯನ್ನು ಒದಗಿಸುತ್ತದೆ. ಆರ್‌.ವಿ. ರಸ್ತೆಯಲ್ಲಿರುವ ಈ ರೀತಿಯ ಅನುಭವ ಕೇಂದ್ರವು ವೈಯಕ್ತಿಕ ಮತ್ತು ಸಾಮೂಹಿಕ ಆಧಾರಿತ ವ್ಯವಸ್ಥೆಗಳಿಗೆ ಪ್ರಸ್ತುತ ಅಗತ್ಯವಾಗಿದೆ ಎಂದು ಅವರು ಹೇಳಿದರು.ವಾಣಿಜ್ಯ ಕಂಪನಿಗಳಿಗಳು, ವ್ಯಾಪಾರ ಸ್ಥಳಗಳು, ಸಮಾವೇಶ ಕೇಂದ್ರಗಳು, ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳಲ್ಲಿರುವ ಸಮುದಾಯ ಕೇಂದ್ರಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಇರುವಲ್ಲಿಯೂ ಭದ್ರತೆಯು ಇಂದು ಒಂದು ಪ್ರಮುಖ ಕಾಳಜಿಯಾಗಿದೆ ಎಂದು ಔರಾದ್ಕರ್ ಹೇಳಿದರು.

 ಗುನ್ನೆಬೊ ಸೇಫ್ ಸ್ಟೊರೇಜ್‌ ನ ಉಪಾಧ್ಯಕ್ಷ ರಾಮ್ ಶ್ರೀನಿವಾಸನ್ ಮಾತನಾಡಿ, ಗುಜಾರಾತ್ ನಲ್ಲಿರುವ ಗುನ್ನೆಬೊ ಇಂಡಿಯಾದ ಹಲೊಲ್ ಘಟಕವು ಸೇಫ್ ಡಿಪಾಸಿಟ್ ಲಾಕರ್ಸ್, ವಾಲ್ಟ್ ಮತ್ತು ಸ್ಟ್ರಾಂಗ್ ರೂಮ್ ಡೋರ್ಸ್, ಫೈರ್ ರೆಸಿಸ್ಟೆಂಟ್ ಸೇಫರ್ ಗಳು (ಅಗ್ನಿ ನಿರೋಧಕ ಲಾಕರ್ ಗಳು), ಫೈಲಿಂಗ್ ಕ್ಯಾಬಿನೆಟ್ ಮತ್ತು ಫೈರ್ ಸೇಫ್ಟಿ ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಉತ್ಪನ್ನಗಳನ್ನು ಭಾರತದ ದೇಶೀಯ ಮಾರುಕಟ್ಟೆ ಮತ್ತು ಭಾರತದ ಹೊರಗಿನ ಹಲವಾರು ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ ಎಂದು ತಿಳಿಸಿದರು.ಪ್ರಮುಖವಾಗಿ ಗುನ್ನೆಬೋ ಇಂಡಿಯಾವು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಲಾಕರ್ ಮತ್ತು ಸ್ಪ್ರಾಂಗ್ ರೂಮ್ ಗಳನ್ನು ತಯಾರಿಸಿ ಕೊಡುತ್ತದೆ. ಇದರಿಂದಾಗಿ ಸುರಕ್ಷಿತ ಭವಿಷ್ಯವನ್ನು ಕಲ್ಪಿಸಿಕೊಂಡು, ಭಾರತದಲ್ಲಿ ಎಂಟು ದಶಕಗಳ ಅನುಭವವನ್ನು ಹೊಂದಿರುವ ಕಂಪನಿಯು, ಭಾರತದಲ್ಲಿ ಮೊದಲ ಅನುಭವ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.