ಆರ್ಥಿಕ ಭಾರವಿಲ್ಲದ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೇ ಸಾಧ್ಯ: ಶಿಡೇನೂರು

ಆರ್ಥಿಕ ಭಾರವಿಲ್ಲದ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲೇ ಸಾಧ್ಯ: ಶಿಡೇನೂರು  Quality education without financial burden is possible only in government schools: Shidenuru

ರಾಣೆಬೆನ್ನೂರು 30: ಆರ್ಥಿಕ ಭಾರವಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯಲು ಸರ್ಕಾರಿ ಶಾಲೆಗಳೇ ಅತ್ಯುತ್ತಮ ಆಯ್ಕೆಯಾಗಿವೆ ಎಂದು ಸರ್ಕಾರಿ ಶಾಲೆ ನಂ.17ರ ಮುಖ್ಯೋಪಾಧ್ಯಾಯ ಬಿ.ಪಿ. ಶಿಡೇನೂರು ಹೇಳಿದರು.  

ಶಾಲಾ ಆವರಣದಲ್ಲಿ ಆಯೋಜಿಸಿದ್ದ ಶಾಲಾ ಪ್ರವೇಶೋತ್ಸವ, ಜನಜಾಗೃತಿ ಅಭಿಯಾನ ಹಾಗೂ ಮಕ್ಕಳಿಗೆ ಪಲ್ಸ್‌ ಪೋಲಿಯೊ ಹನಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕರು ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದಿದ್ದಾರೆ ಎಂಬುದನ್ನು ಪಾಲಕರು ಅರಿಯಬೇಕು ಎಂದರು.  

ಸರ್ಕಾರಿ ಶಾಲೆಗಳ ಉಳಿವು ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿ ಶಿಕ್ಷಕರ ಪ್ರಮುಖ ಗುರಿಯಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆರಿ​‍್ಬ. ಚಲವಾದಿ, ವನಜಾಕ್ಷಿ ಪಾಟೀಲ, ಕುಸುಮಾ ಹಲಗೇರಿ, ಪ್ರತಿಭಾ ಮೈಲಾರಕಳ್ಳಿ, ಶ್ವೇತಾ ಎಚ್‌.ವಿ., ಸುಮಾ ಎ.ಜಿ., ಗಣೇಶ್ ಬಣಕಾರ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ಶಾಲೆಯಿಂದ ಜನಜಾಗೃತಿ ಜಾಥಾ ನಗರದಲ್ಲಿ ಸಂಚರಿಸಿತು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್‌, ಕ್ಷೀರಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.