ನವದೆಹಲಿ, ಮಾ 9, ಕಳೆದ ಹಲವು ವರ್ಷಗಳಿಂದ ಸೇನೆಗೆ ಸೇರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಸೇನೆಯಿಂದ ಮಹಿಳೆಯರನ್ನು ದೂರವಿಡುವ ಪ್ರಶ್ನೆಯೇ ಇಲ್ಲ ಇಂತಹ ಅಲೋಚನೆಯೂ ಸರ್ಕಾರಕ್ಕೆ ಇಲ್ಲ ಕಡ್ಡಿಮುರಿದಂತೆ ಹೇಳಿದರು.ನೀತಿ ಆಯೋಗ ಆಯೋಜಿಸಿದ್ದ 'ವುಮನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಅವಾರ್ಡ್ಸ್' ಸಮಾರಂಭದಲ್ಲಿ ಮಾತನಾಡಿದ ಸಚಿವರು ಗಣರಾಜ್ಯೋತ್ಸವ ದಿನದಂದು ನಡೆದ ಪರೇಡ್ನಲ್ಲಿ ಪುರುಷರ ಪಡೆಯನ್ನು ಮುನ್ನಡೆಸಿದ ರಾನಿಯಾ ಶೇರ್ಗಿಲ್ ಅವರನ್ನು ಉದಾಹರಣೆಯಾಗಿ ನೀಡಿ, ಹಿಂದೆ ಮಹಿಳೆಯರಿಗೆ ಅವಕಾಶವೇ ಇಲ್ಲದಂತಿದ್ದ ಹಲವು ಕ್ಷೇತ್ರಗಳ ನೇತೃತ್ವವನ್ನು ಇಂದು ಮಹಿಳೆಯರು ವಹಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಶಸ್ತ್ರ ಪಡೆಗಳಿಂದ ಅವರನ್ನು ಹೊರಗಿಡುವುದಕ್ಕೆ ಅರ್ಥವಿಲ್ಲ ಅಂತಹ ಕ್ರಮವನ್ನು ಕೇಂದ್ರ ಅಲೋಚನೆ ಮಾಡುವುದು ಇಲ್ಲ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ