6080 ಹೊಸ ಬಸ್ ಖರೀದಿ ; 9000 ಕಂಡಕ್ಟರ್‌-ಡ್ರೈವರ್ಸ ನೇಮಕಾತಿ1300 ಜನ ಅನುಕಂಪದ ಆಧಾರದಲ್ಲಿ ನೇಮಕಾತಿ *20 ನೇ ಸ್ವಯಂ ಚಾಲಿತ ಡ್ರೈವಿಂಗ್ ಟ್ರಾಕ್ ಉದ್ಘಾಟನೆ. 25 ಟ್ರಾಕ್ ಸದ್ಯದಲ್ಲೇ ಲೋಕಾರೆ​‍್ಣ

6080 ಹೊಸ ಬಸ್ ಖರೀದಿ ; 9000 ಕಂಡಕ್ಟರ್‌-ಡ್ರೈವರ್ಸ ನೇಮಕಾತಿ1300 ಜನ ಅನುಕಂಪದ ಆಧಾರದಲ್ಲಿ ನೇಮಕಾತಿ *20 ನೇ ಸ್ವಯಂ ಚಾಲಿತ ಡ್ರೈವಿಂಗ್ ಟ್ರಾಕ್ ಉದ್ಘಾಟನೆ. 25 ಟ್ರಾಕ್ ಸದ್ಯದಲ್ಲೇ ಲೋಕಾರೆ​‍್ಣ  Purchase of 6080 new buses; Recruitment of 9000 conductors-drivers; Recruitment of 1300 people on co

 ಕಾರವಾರ 20 : ಬಿಜೆಪಿ ಸರ್ಕಾರದ ಅವಧಿ  2019-2023ರಲ್ಲಿ ಕೆ.ಎಸ್‌. ಆರ್ .ಟಿ.ಸಿ. ಗೆ ಒಂದೇ  ಒಂದು ಹೊಸ ಬಸ್ ಖರೀದಿ ಮಾಡಲಿಲ್ಲ , ಒಬ್ಬ ಸಿಬ್ಬಂದಿಯನ್ನೂ  ನೇಮಕಾತಿ ಸಹ ಆಗಲಿಲ್ಲ ಎಂದು  ಸಾರಿಗೆ  ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟವಾಗಿ ಹೇಳಿದರು. ದಾಂಡೇಲಿ ಎ ಆರ್ ಟಿ ಒ ಕಚೇರಿಯ ಆವರಣದಲ್ಲಿ ಡ್ರೈವಿಂಗ್ ಟೆಸ್ಟ ಸ್ವಯಂ ಚಾಲಿತ ಟ್ರಾಕ್ ಉದ್ಘಾಟಿಸಿದ ನಂತರ ಮಾಧ್ಯಮಗಳ ಜೊತೆಗೆ  ಅವರು ಮಾತನಾಡಿದರು. ಶುಕ್ರವಾರ ರಾಜ್ಯದ 20 ನೇ ಸ್ವಯಂ ಚಾಲಿತ ಡ್ರೈವಿಂಗ್ ಟ್ರಾಕ್ ಉದ್ಘಾಟನೆ ಮಾಡಿರುವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನು 25 ಟ್ರಾಕ್ ಸದ್ಯದಲ್ಲೇ ಲೋಕಾರೆ​‍್ಣ ಯಾಗಿಲಿವೆ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವೊರೆ ವರ್ಷದಲ್ಲಿ ಕೆ.ಎಸ್ .ಆರ್‌. ಟಿ.ಸಿ.ಗೆ 6080 ಹೊಸ ಬಸ್ ಖರೀದಿ ಮಾಡಿದ್ದೇವೆ. 2000 ಬಸ್ ನವೀಕರಣ ಮಾಡಿದ್ದೇವೆ ಎಂದರು.  

ಒಂದು  ಸಾವಿರ  ಹೊಸ ಬಸ್ ಖರೀದಿಗೆ ಮತ್ತೆ ನಿರ್ಧಾರ ಮಾಡಲಾಗಿದೆ. ಬಜೆಟ್ ನಲ್ಲಿ ಇದಕ್ಕೆ ಅನುದಾನ ಸಹ ಕಲ್ಪಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ನುಡಿದರು. 9000 ಕಂಡಕ್ಟರ್‌-ಡ್ರೈವರ್ಸ ನೇಮಕಾತಿ ಮಾಡಿಕೊಳ್ಳಲಾಗಿದೆ.1300 ಜನ ಸಿಬ್ಬಂದಿಗಳನ್ನು ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಲಾಗಿದೆ. ಕರ್ನಾಟಕದಲ್ಲಿ 24000 ಸಾವಿರ ಸರಕಾರಿ ಬಸ್ ಇವೆ. ಮಹಾರಾಷ್ಟ್ರ ಹೊರತು ಪಡಿಸಿದರೆ ಅತೀ ಹೆಚ್ಚು ಸರ್ಕಾರಿ ಬಸ್ ಇರುವುದು ಕರ್ನಾಟಕದಲ್ಲಿ. ಮಹಾರಾಷ್ಟ್ರ ದಲ್ಲಿ 25000 ಸರ್ಕಾರಿ ಬಸ್ ಇವೆ. ನಮ್ಮಷ್ಟೇ ಜನಸಂಖ್ಯೆ ಇರುವ ಗುಜರಾತ್ ನಲ್ಲಿ ಕೇವಲ 10000 ಸರ್ಕಾರಿ ಬಸ್ ಇವೆ.

20 ಕೋಟಿ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ  10000 ಸರ್ಕಾರಿ ಬಸ್ ಇವೆ . ಅಲ್ಲಿನ ಸಾರಿಗೆ ಪರಿಸ್ಥಿತಿ ಕಲ್ಪಿಸಿಕೊಳ್ಳಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.ಸಾರಿಗೆ ವ್ಯವಸ್ಥೆ ಜನರ ಕಲ್ಯಾಣಕ್ಕೆ ಇರುವುದು. ಅದನ್ನು ಲಾಭದ ದೃಷ್ಟಿಯಿಂದ ನೋಡಬಾರದು. ಕೃಷಿ ಇಲಾಖೆ, ಆರೋಗ್ಯ ,ಶಿಕ್ಷಣ ಇಲಾಖೆಗಳು ಜನರಿಗೆ ಸೇವೆ ನೀಡಲು ಇರುವುದು. ಈ ಇಲಾಖೆ ಗಳಿಂದ ಸರ್ಕಾರ ಲಾಭದ ಯೋಚನೆ ಮಾಡುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿ ಹೇಳಿದರು. ದಾಂಡೇಲಿಯಲ್ಲಿ  ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡುವುದಾಗಿ ಅವರು ಘೋಷಿಸಿದರು. ಅಲ್ಲದೆ ದಾಂಡೇಲಿ  ಯಿಂದ ಬೆಂಗಳೂರಿಗೆ ಪಲ್ಲಕ್ಕಿ  ಬಸ್ ಸಂಚಾರವನ್ನು ಮೂರು ವಾರದಲ್ಲಿ  ಪ್ರಾರಂಭಿಸುವ ಭರವಸೆ ನೀಡಿದರು.