ಪ್ರಾದೇಶಿಕ ದಿನ ಪತ್ರಿಕೆಗಳ ವರದಿಗಾರರ ಸಂಘ ಅಸ್ತಿತ್ವಕ್ಕೆ ಹಂಚಿನಾಳ ಅಧ್ಯಕ್ಷ-ಬಡಿಗೇರ ಕಾರ್ಯದರ್ಶಿ ಆಯ್ಕೆ

ಲೋಕದರ್ಶನ ವರದಿ

ಕೊಪ್ಪಳ : ಪ್ರಾದೇಶಿಕ ಕನ್ನಡ ದಿನಪತ್ರಿಕೆಗಳ ಕೊಪ್ಪಳ ಜಿಲ್ಲಾ ವರದಿಗಾರರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಸಂಘ ಪತ್ರಕರ್ತರ ಯಾವುದೇ ಸಂಘಕ್ಕೆ ಪರ್ಯಾಯ ಸಂಘ ಅಲ್ಲ. ಸಂಘಾತೀತವಾದ ಒಕ್ಕೂಟ ಇದಾಗಿದ್ದು, ಕೇವಲ ಪತ್ರಿಕೆಯ ಪ್ರಸಾರ ಮತ್ತು ಜಾಹೀರಾತು ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಸಂಘ ರಚಿಸಿಕೊಳ್ಳಲಾಗಿದೆ. ಇದಕ್ಕೆ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸಿದ್ದಪ್ಪ ಹಂಚಿನಾಳ ಮತ್ತು ಕಾರ್ಯದಶರ್ಿಯನ್ನಾಗಿ ರವಿಚಂದ್ರ ಬಿ.ಬಡಿಗೇರ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 

ಕೊಪ್ಪಳ ಜಿಲ್ಲೆಯಲ್ಲಿ ಪ್ರಸಾರದಲ್ಲಿರುವ ಪ್ರಾದೇಶಿಕ ಕನ್ನಡ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವರದಿಗಾರರು ಇದಕ್ಕೆ ಸದಸ್ಯರಾಗಬಹುದು. ಈಗಾಗಲೇ ಒಕ್ಕೂಟಕ್ಕೆ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಎಂ. ಸಾದಿಕ್ ಅಲಿ, ಸಂತೋಷ ದೇಶಪಾಂಡೆ, ಶಿವರಾಜ ನುಗಡೋಣಿ, ರಮೇಶ ಪವಾರ್, ಶಿವಕುಮಾರ ಹಿರೇಮಠ, ಖಲೀಲ್ ಉಡೇವು, ರವೀಂದ್ರ ತೋಟದ ಸೇರಿದಂತೆ ಮತ್ತೀತರರು ಸದಸ್ಯರಾಗಿದ್ದಾರೆ.