ಹುಕ್ಕೇರಿ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ಮಠದ ಪೂಜ್ಯಶ್ರೀ ಶರಣಬಸವ ಪ್ರವಚನ
Pujyashri Sharanbasava Sermon of Hukkeri Basava Belavi Charamurthy Charantheshwara Mutt
ಲೋಕದರ್ಶನ ವರದಿ
ಸಿಂದಗಿ 09 : ಶರಣರ ಪೊಟೋಗಳನ್ನು ಹಾಕಿಕೊಂಡು ಅವರ ತತ್ವಗಳನ್ನು ಹೇಳುತ್ತ ಜನರನ್ನು ಮಳ್ಳ ಮಾಡುತ್ತಿರುವ ಕೆಲವು ಗುಂಪು ಒಂದಾದರೆ ನಿಜವಾದ ತತ್ವಗಳನ್ನು ಹೇಳುತ್ತ ಕೆಟ್ಟರಾಗುತ್ತಿದ್ದೇವೆ ಈ ಬೂಟಾಟಿಕೆ ಮಾತುಗಳನ್ನು ಹೇಳಿ ಎಷ್ಟು ದಿನ ಜೀವನ ನಡೆಸೋರಿದ್ದಿರಿ ನಿಜವಾದ ಬಸವಾದಿ ತತ್ವಗಳೆ ಚಲಾವಣೆಗೆ ಬರುತ್ತದೆ ಸೋಳ್ಳು ಜೋಳವೆಲ್ಲ ಹೋಗಿ ಗಟ್ಟಿ ಕಾಳು ಮಾತ್ರ ಉಳೀಯುತ್ತವೆ ಅದಕ್ಕೆ ಶ್ರೇಷ್ಠ ಮತ್ತು ಕನಿಷ್ಠತೆಗಳನ್ನು ಎಣೀಸದೆ ಶರಣರ ತತ್ವಗಳನ್ನು ಪಾಲಿಸಿದ್ದಾದರೆ ಒಳಿತಾಗುವುದು ಸತ್ಯ ಎಂದು ಹುಕ್ಕೇರಿ ತಾಲೂಕಿನ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ಮಠದ ಪೂಜ್ಯಶ್ರೀ ಶರಣಬಸವ ಅಪ್ಪಗಳು ಹೇಳಿದರು.
ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳವತಿಯಿಂದ ವಿಶ್ವಗುರು ಬಸವಣ್ಣವರ 893ನೇ ಜಯಂತಿ ನಿಮಿತ್ಯ 06 ರಿಂದ 20 ರವರೆಗೆ ಹಮ್ಮಿಕೊಂಡ ಬಸವ ತತ್ವ ದರ್ಶನ ಪ್ರವಚನದ 3ನೇ ದಿನದಲ್ಲಿ ಪ್ರವಚನ ನೀಡಿ, ಶರಣರು ಹಾಗೆ ಹೇಳೀಲ್ಲ ಸ್ವಾಮಿಗಳು ಹೀಗೆ ಹೇಳಿಲ್ಲ ಅನ್ನೋರು ಬಸವಣ್ಣನವರ ಕಟೋರ ತತ್ವಗಳನ್ನು ಜನರಿಗೆ ಬಿತ್ತಲು ನಾವು ಹೋರಟು ಜನರಲ್ಲಿ ಕೆಟ್ಟವರನ್ನಾಗಿ ಬಿಂಬಿಸುತ್ತಿರಿ ಅವರ ಪೊಟೋಗಳನ್ನು ಹಾಕಿಕೊಂಡು ವಿನಾಕಾರಣ ಕಳ್ಳರ ಬುದ್ದಿ ಹುಳ್ಳಹುಳ್ಳಗ್ ಅನ್ನುವ ರೀತಿಯಲ್ಲಿ ಇವರು ಸೋಗು ಹಾಕಿಕೊಂಡು ನಾಟಕ ಮಾಡಬೇಡಿ 12ನೇ ಶತಮಾನದ ಶರಣರ 20 ಸಾವಿರ ವಚನಗಳನ್ನು ಸಾಕ್ಷಿಗಳನ್ನು ಚರ್ಚೆಗೆ ಬರುತ್ತೇವೆ ಮುಕ್ತವಾಗಿ ಚರ್ಚೆಗೆ ಬನ್ನಿ ಎಂದು ಬಂಡಾಯ ವ್ಯಕ್ತಿಗಳಿಗೆ ಸವಾಲೆಸೆದರು.
ಟಿಎಸ್‌ಪಿ ಮಂಡಳಿ ನಿರ್ದೆಶಕ ವಿಶ್ವನಾಥ ಕುರಡಿ, ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಸಮಗಾರ ಹರಳಯ್ಯ ಸಮಾಜದ ಮುಖಂಡ ಶ್ರೀಕಾಂತ ಸಿಂಧೆ, ವಯೋಲಿನವಾದಕ ಕಂಚಿನೆಗಳೂರಿನ ನಾದಶ್ರೀ ಷನ್ಮುಖಯ್ಯ ಹಿರೇಮಠ, ಹಾರಕೋಡನ ಗವಾಯಿ ಕಲ್ಯಾಣಕುಮಾರ ಶೀಲವಂತ, ತಬಲಾವಾದಕ ರಮೇಶ ಕಟ್ಟಿಸಂಗಾವಿ ಸಂಗೀತ ಸೇವೆ ನಡೆಸಿಕೊಟ್ಟರು.
ರಾಷ್ಟ್ರೀಯ ಬಸವದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಶರಣು ಸುಣಗಾರ, ಮಹಾಂತೇಶ ನಡುವಿಮನಿ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಶಿವಕುಮಾರ ಶಿವಶಿಂಪಿ ನಿರೂಪಿಸಿ ಮಂಗಲ ಗೈದರು. ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳವತಿಯಿಂದ ವಿಶ್ವಗುರು ಬಸವಣ್ಣವರ 893ನೇ ಜಯಂತಿ ನಿಮಿತ್ಯ 06 ರಿಂದ 20 ರವರೆಗೆ ಹಮ್ಮಿಕೊಂಡ ಬಸವ ತತ್ವ ದರ್ಶನ ಪ್ರವಚನದ 3ನೇ ದಿನದಲ್ಲಿ ಹುಕ್ಕೇರಿ ತಾಲೂಕಿನ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ಮಠದ ಪೂಜ್ಯಶ್ರೀ ಶರಣಬಸವ ಅಪ್ಪಗಳು ಪ್ರವಚನ ನೀಡಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 